This page has not been fully proofread.

ವಿವೇಕಚೂಡಾಮಣಿ
 
[೨೯೨
 
ಆದ ನಿಜಸ್ವರೂಪವನ್ನು ಹೊಂದಿ ನಟನು ತಾನು ಹಾಕಿಕೊಂಡಿರುವ ವೇಷ
ವನ್ನು ತೆಗೆದುಹಾಕುವಂತೆ-ಮಿಥ್ಯಾಭೂತವಾದ ಶರೀರವನ್ನು ಬಿಡಬೇಕು.
 
೧೫೪
 
ಸರ್ವಾತ್ಮನಾ ದೃಶ್ಯಮಿದಂ ಮೃನ
ನೈವಾಹಮರ್ಥಃ ಕ್ಷಣಿಕತ್ವದರ್ಶನಾತ್ ।
ಜಾನಾಮ್ಯಹಂ ಸರ್ವಮಿತಿ ಪ್ರತೀತಿಃ
 
ಕುತೋsಹಮಾದೇಃ ಕ್ಷಣಿಕಸ್ಯ ಸಿದ್ಧೇತ್ ॥ ೨೯೨ ॥
 
ಇದಂ
 
Z
 
ಶ್ಯಂ= ಈ ದೃಶ್ಯ ಪ್ರಪಂಚವು ಸರ್ವಾತ್ಮನಾ- ಸರ್ವ ಪ್ರಕಾರದಿಂದಲೂ
ಮೃಷಾ ಏವ ಮಿಥ್ಯಯೇ; ಕಣಿಕತ್ವದರ್ಶನಾತ್ – ಕ್ಷಣಿಕವಾಗಿ ಕಂಡುಬರು
ವುದರಿಂದ ಅಹಮ್, ಅರ್ಥ - ಅಹಂ-ವದಾರ್ಧವೂ
ನ ಏವ = ಇಲ್ಲವೇ ಇಲ್ಲ;
ಅಹಂ ನಾನು ಸರ್ವ೦ = ಎಲ್ಲವನ್ನೂ ಜಾನಾಮಿ = ತಿಳಿಯುತ್ತೇನೆ ಇತಿ - ಎಂಬ
ಪ್ರತೀತಿಃ - ಪ್ರತೀತಿಯು ಕ್ಷಣಿಕಸ್ಯ - ಕ್ಷಣಿಕವಾದ ಅಹನ ಆದೇಃ = ಅಹಂಕಾ
ರವೇ ಮೊದಲಾದುವುಗಳಿಗೆ ಕುತಃ ಸಿದ್ಧೇತ್ = ಹೇಗೆ ಸಿದ್ಧಿಸುತ್ತದೆ?
 
೨೯೨, ಈ ದೃಶ್ಯ ಪ್ರಪಂಚವು ಸರ್ವಪ್ರಕಾರದಿಂದಲೂ ಮಿಥೈಯೇ,
'ನಾನು' ಎಂಬ ಪದಾರ್ಥವೇ ಇಲ್ಲ; ಏಕೆಂದರೆ ಇದು ಕ್ಷಣಿಕವಾಗಿರುವುದು
ಕಂಡುಬರುತ್ತದೆ. 'ನಾನು ಎಲ್ಲವನ್ನೂ ತಿಳಿಯುತ್ತೇನೆ' ಎಂಬ ಪ್ರತೀತಿಯು
ಕ್ಷಣಿಕವಾದ ಅಹಂಕಾರವೇ ಮೊದಲಾದುವುಗಳಿಗೆ ಹೇಗೆ ಸಿದ್ಧಿಸೀತು??
 
[೧ ಅಹಂಕಾರವೇ ಮೊದಲಾದುವುಗಳಿಗೆ ಸರ್ವಜ್ಞತ್ವವು ಸಿದ್ಧಿಸುವುದಿಲ್ಲ ಎಂದರ್ಥ.]
ಅಹಂಪದಾರ್ಥಹವಾದಿಸಾಕ್ಷಿ
 
ನಿತ್ಯಂ ಸುಷುಪ್ತಾವಸಿ ಭಾವದರ್ಶನಾತ್ ।
ಬೂತೇ ಹೈಜೋ ನಿತ್ಯ ಇತಿ ಶ್ರುತಿಃ ಸ್ವಯಂ
ತತ್ಪತ್ಯಗಾತ್ಮಾ ಸದಸದ್ವಿಲಕ್ಷಣ
 
॥ ೨೯೩ ।
 
ತು. ಆದರೆ ಅಹಂಪದಾರ್ಥಃ = ಅಹಂ- ಪದಾರ್ಥವು ಸುಷುಪ್ ಆಪಿ
ಸುಷುಪ್ತಿಯಲ್ಲಿಯೂ ನಿತ್ಯಂ ಯಾವಾಗಲೂ ಭಾವದರ್ಶನಾತ್-ಕಂಡುಬರುವುದ
ರಿಂದ; ಅಹಮ್ ಆ ದಿ. ಸಾಕ್ಷಿ - ಅಹಂಕಾರವೇ ಮೊದಲಾದುವುಗಳಿಗೆ ಸಾಕ್ಷಿಯು;
ಜನ್ಮರಹಿತನು ನಿತ್ಯಃ = ನಿತ್ಯನು ಇತಿ = ಎಂದು ಶ್ರುತಿಃ - ಶ್ರುತಿಯು
ಸ್ವಯಂ = ತಾನೇ ಬೂತೇ = ಹೇಳುತ್ತದೆ. ತತ್ = ಆದುದರಿಂದ ಪ್ರತ್ಯಗಾತ್ಮಾ =
ಪ್ರತ್ಯಗಾತ್ಮನು ಸತ್- ಅಸತ್ ವಿಲಕ್ಷಣಃ = ಸ್ಕೂಲಸೂಕ್ಷ್ಮಗಳಿಗಿಂತ ಭಿನ್ನನು.
 
೨೯೩.
 
ಆದರೆ ನಿಜವಾದ ಅಹಂ ಪದಾರ್ಥವು ಅಹಂಕಾರವೇ ಮೊದಲಾ
ದುವುಗಳಿಗೆ ಸಾಕ್ಷಿಯಾಗಿರುತ್ತದೆ; ಏಕೆಂದರೆ ಅದು ನಿತ್ಯವೂ ಸುಷುಪ್ತಿಯಲ್ಲಿ