This page has been fully proofread once and needs a second look.

ಚಿದಾತ್ಮನಿ ಸದಾನಂದೇ ದೇಹಾರೂಢಾಮಹಂಧಿಯಮ್ ।
ನಿವೇಶ್ಯ ಲಿಂಗಮುತ್ಸೃಜ್ಯ ಕೇವಲೋ ಭವ ಸರ್ವದಾ ॥ ೨೮೯ ॥
 
ದೇಹಾರೂಢಾಂ = ದೇಹದಲ್ಲಿ ನೆಲೆಗೊಂಡಿರುವ, ಅಹಂ-ಧಿಯಂ = 'ನಾನು'
ಎಂಬ ಬುದ್ಧಿಯನ್ನು, ಸದಾನಂದೇ ಚಿದಾತ್ಮನಿ = ನಿತ್ಯಾನಂದ ಸ್ವರೂಪನಾದ ಚಿದಾತ್ಮ-
ನಲ್ಲಿ, ನಿವೇಶ್ಯ = ನೆಲೆಗೊಳಿಸಿ, ಲಿಂಗಂ = ಸೂಕ್ಷ್ಮಶರೀರವನ್ನು, ಉತ್ಸೃಜ್ಯ = ಬಿಟ್ಟು,
ಸರ್ವದಾ = ಯಾವಾಗಲೂ, ಕೇವಲಃ ಭವ = ಅಸಂಗನಾಗು.
 
೨೮೯. ದೇಹದಲ್ಲಿ ನಲೆಗೊಂಡಿರುವ 'ನಾನು' ಎಂಬ ಬುದ್ಧಿಯನ್ನು
ನಿತ್ಯಾನಂದ -ಸ್ವರೂಪನಾದ ಚಿದಾತ್ಮನಲ್ಲಿ ನೆಲೆಗೊಳಿಸಿ, ಸೂಕ್ಷ್ಮಶರೀರವನ್ನು
ಬಿಟ್ಟು, ಯಾವಾಗಲೂ ಅಸಂಗನಾಗಿರು.
 
ಯತ್ರೈಷ ಜಗದಾಭಾಸೋ ದರ್ಪಣಾಂತಃ ಪುರಂ ಯಥಾ ।
ತದ್ಬ್ರಹ್ಮಾಹಮಿತಿ ಜ್ಞಾತ್ವಾ ಕೃತಕೃತ್ಯೋ ಭವಿಷ್ಯಸಿ ॥ ೨೯೦ ॥
 
ದರ್ಪಣ-ಅಂತಃ = ಕನ್ನಡಿಯಲ್ಲಿ ಕಾಣುವ, ಪುರಂ = ಪಟ್ಟಣವು, ಯಥಾ =
ಹೇಗೋ, [ಹಾಗೆ] ಯತ್ರ = ಯಾವುದರಲ್ಲಿ, ಏಷಃ ಜಗದಾಭಾಸಃ = ಈ ಜಗತ್ತಿನ
ಆಭಾಸವೊ, ತತ್ ಬ್ರಹ್ಮ = ಆ ಬ್ರಹ್ಮವೇ, ಅಹಂ = ನಾನು, ಇತಿ = ಎಂದು, ಜ್ಞಾತ್ವಾ =
ತಿಳಿದುಕೊಂಡು, ಕೃತಕೃತ್ಯಃ ಭವಿಷ್ಯಸಿ = ಕೃತಕೃತ್ಯನಾಗುವೆ.
 
೨೯೦. ಕನ್ನಡಿಯಲ್ಲಿ ಕಾಣುವ ಪುರದಂತೆ ಯಾವುದರಲ್ಲಿ ಈ ಜಗತ್ತಿನ
ತೋರ್ಕೆಯುಂಟಾಗಿದೆಯೋ 'ಆ ಬ್ರಹ್ಮವೇ ನಾನು' ಎಂದು ತಿಳಿದುಕೊಂಡು
ಕೃತಕೃತ್ಯನಾಗು.
 
ಯತ್ಸತ್ಯಭೂತಂ ನಿಜರೂಪನಾದ್ಯಂ
ಚಿದದ್ವಯಾನಂದವರೂಪಮಕ್ರಿಯಮ್ ।
ತದೇತ್ಯ ಮಿಥ್ಯಾವಪುರುತ್ಸೃಜೇತ
ಶೈಲೂಷವದ್ವೇಷಮುಪಾತಮಾತ್ಮನಃ ॥ ೨೯೧ ॥
 
ಯತ್ = ಯಾವುದು, ಸತ್ಯಭೂತಂ = ಸತ್ಯವಾದುದೊ, ಆದ್ಯಂ = ಪುರಾತನವೊ,
ಚಿತ್ = ಜ್ಞಾನಸ್ವರೂಪವೊ, ಅದ್ವಯಾನಂದಂ = ಅದ್ವಯಾನಂದವೊ, ಅರೂಪಂ =
ರೂಪರಹಿತವೋ, ಅಕ್ರಿಯಂ = ಕ್ರಿಯಾಶೂನ್ಯವೊ, ನಿಜರೂಪಂ = ನಿಜರೂಪವೊ, ತತ್ =
ಅಂಥ ಸ್ವರೂಪವನ್ನು, ಏತ್ಯ = ಹೊಂದಿ--, ಉಪಾತ್ತಂ = ಸ್ವೀಕರಿಸಿದ, ಆತ್ಮನಃ = ತನ್ನ,
ವೇಷಂ = ವೇಷವನ್ನು, ಶೈಲೂಷವತ್ = ನಟನು ಹೇಗೋ ಹಾಗೆ--, ಮಿಥ್ಯಾವಪುಃ=
ಮಿಥ್ಯಾಶರೀರವನ್ನು, ಉತ್ಸೃಜೇತ = ಬಿಡಬೇಕು.
 
೨೯೧. ತ್ರಿಕಾಲದಲ್ಲಿ ಸತ್ -ಸ್ವರೂಪವಾಗಿರುವುದೂ ಪುರಾತನವೂ
ಜ್ಞಾನಸ್ವರೂಪವೂ ಅಖಂಡಾನಂದವೂ ರೂಪರಹಿತವೂ ಕ್ರಿಯಾಶೂನ್ಯವೂ