This page has not been fully proofread.

ವಿವೇಕಚೂಡಾಮಣಿ
 
೨೯೧]
 
ಚಿದಾತ್ಮನಿ ಸದಾನಂದೇ ದೇಹಾರೂಢಾಮಹಂಧಿಯಮ್ ।
ನಿವೇಶ ಲಿಂಗಮುತ್ಸಜ್ಯ ಕೇವಲೋ ಭವ ಸರ್ವದಾ
 
೧೫೩
 
॥ ೨೮೯ ॥
 
ದೇಹಾರೂಢಾಂ - ದೇಹದಲ್ಲಿ ನೆಲೆಗೊಂಡಿರುವ ಅಹಂ, ಧಿಯಂ- 'ನಾನು'
ಎಂಬ ಬುದ್ಧಿಯನ್ನು ಸದಾನಂದೇ ಚಿದಾತ್ಮನಿ ನಿತ್ಯಾನಂದ ಸ್ವರೂಪನಾದ ಚಿದಾತ್ಮ
ನಲ್ಲಿ ನಿವೇಶ್ಯ - ನೆಲೆಗೊಳಿಸಿ ಲಿಂಗಂ = ಸೂಕ್ಷ್ಮಶರೀರವನ್ನು ಉತ್ಸಜ್ಯ - ಬಿಟ್ಟು
ಸರ್ವದಾ - ಯಾವಾಗಲೂ ಕೇವಲಃ ಭವ – ಅಸಂಗನಾಗು.
 
-
 
೨೮೯. ದೇಹದಲ್ಲಿ ನಲೆಗೊಂಡಿರುವ 'ನಾನು' ಎಂಬ ಬುದ್ಧಿಯನ್ನು
ನಿತ್ಯಾನಂದ ಸ್ವರೂಪನಾದ ಚಿದಾತ್ಮನಲ್ಲಿ ನೆಲೆಗೊಳಿಸಿ, ಸೂಕ್ಷ್ಮಶರೀರವನ್ನು
ಬಿಟ್ಟು, ಯಾವಾಗಲೂ ಅಸಂಗನಾಗಿರು.
 
ಯಷ ಜಗದಾಭಾಸೋ ದರ್ಪಣಾಂತಃ ಪುರಂ ಯಥಾ ।
ತನ್ನ ಹಾಹಮಿತಿ ಜ್ಞಾತ್ವಾ ಕೃತಕೃತ್ಯ ಭವಿಷ್ಯ ॥ ೨೯೦ ॥
ದರ್ಪಣ, ಅಂತಃ - ಕನ್ನಡಿಯಲ್ಲಿ ಕಾಣುವ ಪುರಂ - ಪಟ್ಟಣವು ಯಥಾ
ಹೇಗೋ [ಹಾಗೆ] ಯತ್ರ - ಯಾವುದರಲ್ಲಿ ಏಷಃ ಜಗದಾಭಾಸಃ = ಈ ಜಗತ್ತಿನ
ಆಭಾಸವೊ ತತ್ ಬ್ರಹ್ಮ ಆ ಬ್ರಹ್ಮವೇ ಅಹಂ = ನಾನು ಇತಿ ಎಂದು ಜ್ಞಾತಾ-
ತಿಳಿದುಕೊಂಡು ಕೃತಕೃತ್ಯಃ ಭವಿಷ್ಯಸಿ - ಕೃತಕೃತ್ಯನಾಗುವೆ.
 
೨೯೦. ಕನ್ನಡಿಯಲ್ಲಿ ಕಾಣುವ ಪುರದಂತೆ ಯಾವುದರಲ್ಲಿ ಈ ಜಗತ್ತಿನ
ತೋರ್ಕೆಯುಂಟಾಗಿದೆಯೋ 'ಆ ಬ್ರಹ್ಮವೇ ನಾನು' ಎಂದು ತಿಳಿದುಕೊಂಡು
ಕೃತಕೃತ್ಯನಾಗು.
 
ಯತೃತ್ಯ ಭೂತಂ ನಿಜರೂಪನಾದ್ಯಂ
ಚಿದದ್ವಯಾನಂದವರೂಪಮಕ್ರಿಯಮ್ ।
ತದೇತ್ಯ ಮಿಥ್ಯಾವಸುರುಚೇತ
 
ಶೈಲೂಷವದ್ವೇಷಮುಪಾತಮಾತ್ಮನಃ ॥ ೨೯೧
 
ಯತ್ = ಯಾವುದು ಸತ್ಯಭೂತಂ – ಸತ್ಯವಾದುದೊ ಆದ್ಯಂ = ಪುರಾತನವೊ
ಚಿತ್ - ಜ್ಞಾನಸ್ವರೂಪವೊ ಅದ್ವಯಾನಂದಂ. ಅದ್ವಯಾನಂದವೊ ಅರೂಪಂ -
ರೂಪರಹಿತವೋ ಅಕ್ರಿಯಂ = ಕ್ರಿಯಾಶೂನ್ಯವೊ ನಿಜರೂಪಂ- ನಿಜರೂಪವೊ ತತ್
ಅಂಥ ಸ್ವರೂಪವನ್ನು ಏತ್ಯ - ಹೊಂದಿ- ಉಪಾಂ - ಸ್ವೀಕರಿಸಿದ ಆತ್ಮನಃ - ತನ್ನ
ವೇಷಂ - ವೇಷವನ್ನು ಶೈಲೂಷವತ್ - ನಟನು ಹೇಗೋ ಹಾಗೆ-ಮಿಥ್ಯಾವಪುಃ=
ಮಿಥ್ಯಾಶರೀರವನ್ನು ಉತ್ಪಜೇತ - ಬಿಡಬೇಕು.
 
೨೯೧ ತ್ರಿಕಾಲದಲ್ಲಿ ಸತ್ ಸ್ವರೂಪವಾಗಿರುವುದೂ ಪುರಾತನವೂ
ಜ್ಞಾನಸ್ವರೂಪವೂ ಅಖಂಡಾನಂದವೂ ರೂಪರಹಿತವೂ ಕ್ರಿಯಾಶೂನ್ಯವೂ