This page has not been fully proofread.

ವಿವೇಕಚೂಡಾಮಣಿ
 
ಮಾತಾ-ಪಿತ್ರೋಃ - ತಾಯಿತಂದೆಗಳ ಮಲೋದ್ಧೂತಂ - ಶುಕ್ಲಶೋಣಿತ
ಗಳಿಂದ ಉತ್ಪನ್ನವಾದ ಮಲಮಾಂಸಮಯಂ ಮಲಮಾಂಸಮಯವಾದ ವಪುಃ
ಶರೀರವನ್ನು ಚಾಂಡಾಲವತ್ . ಚಂಡಾಲನನ್ನು ಹೇಗೋ ಹಾಗೆ ದೂರಂ = ದೂರ
ವಾಗಿ ತ್ಯಾ ಬಿಟ್ಟು ಬ್ರಹ್ಮಭೂಯ ಬ್ರಹ್ಮವಾಗಿ ಕೃತಿ ಭವ ಕೃತಕೃತ್ಯನಾಗು.
ತಂದೆತಾಯಿಗಳಿಂದ ಉತ್ಪನ್ನವಾಗಿ ಮಲಮಾಂಸಮಯವಾದ
ಶರೀರವನ್ನು-ಚಂಡಾಲನನ್ನು ಹೇಗೋ ಹಾಗೆ ದೂರವಾಗಿ ತೊರೆದು
ಬ್ರಹ್ಮವಾಗಿ ಕೃತಕೃತ್ಯನಾಗು.
 
೨೮೬.
 
೧೫೨
 
[೨೮೭
 
ಘಟಾಕಾಶಂ ಮಹಾಕಾಶ ಇವಾತ್ಮಾನಂ ಪರಾತ್ಮನಿ ।
ವಿಲಾಷ್ಯಾಖಂಡಭಾವೇನ ತೂಷ್ಣಂ ಭವ ಸದಾ ಮುನೇ ॥ ೨೮೭ ॥
 
ಮುನೇ - ಎಲೈ ಮುನಿಯ ಘಟಾ ಕಾಶಂ - ಗಡಿಗೆಯಿಂದ ವರಿಚ್ಛಿನ್ನವಾದ
ಆಕಾಶವನ್ನು ಮಹಾಕಾಶೆ ಇವ ಮಹಾಕಾಶದಲ್ಲಿ ಹೇಗೋ ಹಾಗೆ ಆತ್ಮಾನಂ =
ಜೀವಾತ್ಮನನ್ನು ಪರಾತ್ಮನಿ - ಪರಮಾತ್ಮನಲ್ಲಿ ವಿಲಾಪ್ಯ - ಲಯಗೊಳಿಸಿ ಸದಾ -
ಯಾವಾಗಲೂ ಅಖಂಡಭಾವೇನ - ಅಖಂಡಭಾವದಿಂದ ತೂಫ್ಟಿಂ ಭವ … ಮೌನ
 
ವಾಗಿರು.
 
೨೮೭, ಗಡಿಗೆಯಿಂದ ಪರಿಚ್ಛಿನ್ನವಾದ ಆಕಾಶವನ್ನು ಮಹಾಕಾಶದಲ್ಲಿ
ಲಯಗೊಳಿಸುವಂತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಲಯಗೊಳಿಸಿ ಯಾವಾ
ಗಲೂ ಅಖಂಡಭಾವದಿಂದ ಮೌನವಾಗಿರು.
 
ಸ್ವಪ್ರಕಾಶಮಧಿಷ್ಟಾನಂ ಸ್ವಯಂಭೂಯ ಸದಾತ್ಮನಾ ।
ಬ್ರಹ್ಮಾಂಡವಪಿ ಪಿಂಡಾಂಡಂ ತ್ಯಜ್ಯತಾಂ ಮಲಭಾಂಡವತ್
 
॥ ೨೮೮ ॥
 
ಅಧಿಷ್ಟಾನಂ ಅಧಿಷ್ಠಾನವೂ ಸ್ವಪ್ರಕಾಶಂ - ಸ್ವಯಂಪ್ರಕಾಶವೂ ಆದ
(ಬ್ರಹ್ಮವೇ] ಸದಾತ್ಮನಾ = ಸದಾತ್ಮಸ್ವರೂಪದಿಂದ ಸ್ವಯಂಭೂಯ - ನೀನೇ
ಬ್ರಹ್ಮಾಂಡಂ - ಬ್ರಹ್ಮಾಂಡವು ಅಪಿ ಮತ್ತು ಪಿಂಡಾಂಡಂ=ಪಿಂಡಾಂಡವೂ
ಭಾಂಡವತ್, ಮಲದಿಂದ ತುಂಬಿದ ಪಾತ್ರೆಯು ಹೇಗೋ ಹಾಗೆ ತ್ಯಜ್ಯ ತಾಂ =
ಬಿಡಲ್ಪಡಲಿ.
 
ಆಗಿ
ಮಲ
 
೨೮೮,
 
ಸತ್ಸ್ವರೂಪದಿಂದ ಸರ್ವಾಶ್ರಯವೂ ಸ್ವಯಂಪ್ರಕಾಶವೂ ಆದ
ಬ್ರಹ್ಮವೇ ನೀನಾಗಿ ಬ್ರಹ್ಮಾಂಡವನ್ನೂ ಪಿಂಡಾಂಡವನ್ನೂ- ಮಲದಿಂದ
ತುಂಬಿದ ಪಾತ್ರೆಯನ್ನು ಬಿಡುವಂತೆ ತ್ಯಜಿಸು.
[೧ ನಿನ್ನ ಶರೀರವನ್ನೂ.