This page has been fully proofread once and needs a second look.

ಅಸ್ಮಿನ್ ದೇಹ -ಹೇ = ಈ ಶರೀರದಲ್ಲಿ, ಅಹಂಭಾವಸ್ಯ-= 'ನಾನು' ಎಂಬ ಭಾವ-
ನೆಯು, ನಿಃಶೇಷ, -ವಿಲಯಾವಧಿ = ಸಂಪೂರ್ಣವಾಗಿ ಲಯವಾಗುವ ವರೆಗೂ, ಸಾವ-
ಧಾನೇನ= ಎಚ್ಚರಿಕೆಯಿಂದ, ಯುಕ್ತಾತ್ಕಾಮಾ [ಸನ್]+=ಅಪ್ರಮತ್ತ-ಅಂತಃಕರಣವುಳ್ಳವ-
ನಾಗಿ ಸ್ವಾಧ್ಯಾಸಾಪನಯಂ ಕುರು,.
 
೨೮೩. ಈ ಶರೀರದಲ್ಲಿ 'ನಾನು' ಎಂಬ ಭಾವನೆಯು ಸಂಪೂರ್ಣವಾಗಿ
ಲಯವಾಗುವ ವರೆಗೂ ಎಚ್ಚರಿಕೆಯಿಂದ ಅಪ್ರಮತ್ತನಾಗಿ ನಿನ್ನಲ್ಲಿ ಉಂಟಾ-
ಗಿರುವ ಅಭ್ಧ್ಯಾಸವನ್ನು ಹೋಗಲಾಡಿಸಿಕೊ.
 
ಪ್ರತೀತಿರ್ಜಿಜೀವ-ಜಗತೋಃ ಸ್ವಪ್ನವಾವದ್ಭಾತಿ ಯಾವತಾ ।
ತಾವನ್ನಿರಂತರಂ ವಿದ್ವನ್ ಸ್ವಾಧ್ಯಾಸಾಪನಯಂ ಕುರು ॥ ೨೮೪ ॥
 
ಜೀವ -ಜಗತೋಃ = ಜೀವ-ಜಗತ್ತುಗಳ, ಪ್ರತೀತಿಃ -= ತೋರ್ಕೆಯು ಯಾವ, ಯಾವ-
ತಾ -= ಎಲ್ಲಿಯ ವರೆಗೆ, ಸ್ವಪ್ನವತ್= ಕನಸಿನಂತೆ, ಭಾತಿ-=ತೋರುತ್ತದೆಯೊ, ತಾವತ್=
ಅಲ್ಲಿಯ ವರೆಗೆ ವಿದ್ವನ್ -, ವಿದ್ವನ್ = ಎಲೈ ವಿವೇಕಿಯೆ, ನಿರಂತರಂ = ಅನವರತವೂ, ಸ್ವಾಧ್ಯಾ.-
ಸಾಪನಯಂ ಕುರು,.
 
೨೮೪,. ಜೀವಜಗತ್ತುಗಳ ತೊತೋರ್ಕೆಯು ಕನಸಿನಂತೆ (ಮಿಥೈಯಾಗಿ)
ತೋರುವ ವರೆಗೂ, ಎಲೈ ವಿವೇಕಿಯೆ, ಅನವರತವೂ ನಿನ್ನಲ್ಲಿ ಉಂಟಾಗಿರುವ
ಅಧ್ಯಾಸವನ್ನು ಹೋಗಲಾಡಿಸಿಕೊ.
 
ನಿದ್ರಾಯಾ ಲೋಕವಾರ್ತಾಯಾಃ ಶಬ್ದಾದೇರಪಿ ವಿಸ್ಮೃತೇಃ ।
ಕ್ವಚಿನ್ನಾವಸರಂ ದತ್ವಾ ಚಿಂತಯಾತ್ಮಾನಮಾತ್ಮನಿ ॥ ೨೮೫ ||
 
ನಿದ್ರಾಯಾಃ-=ನಿದ್ರೆಯಿಂದ, ಲೋಕವಾರ್ತಾಯಾಃ =ಲೋಕದ ಸುದ್ದಿ ಯಿಂದ,
ಶಬ್ದಾದೇಃ ಅಪಿ-=ಶಬ್ದಾದಿ ವಿಷಯಗಳಿಂದ, ವಿಸ್ಮೃತೇಃ =ಆತ್ಮವಿಸ್ಮೃತಿಗೆ, ಕ್ವಚಿತ್=
ಯಾವಾಗಲೂ, ಅವಸರಂ= ಅವಕಾಶವನ್ನು ನ ದಾ, ನ ದತ್ವಾ = ಕೊಡದೆ, ಆತ್ಮನಿ = ಬುದ್ಧಿ-
ಯಲ್ಲಿ, ಆತ್ಮಾನಂ,= ಆತ್ಮನನ್ನು, ಚಿಂತಯ -= ಚಿಂತಿಸು.
 
೨೮೫. ನಿದ್ರೆಯಿಂದಾಗಲಿ ಲೋಕದ ಸುದ್ದಿಯಿಂದಾಗಲಿ ಶಬ್ದಾದಿ
ವಿಷಯಗಳಿಂದಾಗಲಿ ಆತ್ಮವಿಸ್ಮೃತಿಗೆ ಯಾವಾಗಲೂ ಅವಕಾಶವನ್ನು ಕೊಡದೆ
ಬುದ್ಧಿಯಲ್ಲಿಯೇ ಆತ್ಮನನ್ನು ಚಿಂತಿಸು.
 
ಮಾತಾ-ಪಿತ್ರೋರ್ಲೋದ್ಭೂತಂ ಮಲಮಾಂಸಮಯಂ ವಪುಃ ।
ತಕಾತ್ಯಕ್ತ್ವಾ ಚಾಂಡಾಲವ ದ್ದೂರಂ ಬ್ರಹ್ಮೀಭೂಯ ಕೃತೀ ಭವ ॥ ೨೮೬