This page has not been fully proofread.

ವಿವೇಕಚೂಡಾಮಣಿ
 
ವಂತನಾದ ಮನುಷ್ಯನೇ ಅರಿತುಕೊಳ್ಳುತ್ತಾನೆ, ಆಚಾರ್ಯವಾನ್ ಪುರುಷ
ವೇದ (ಛಾಂದೋಗ್ಯ ಉ, ೬. ೧೪, ೨) ಎಂದು ಶ್ರುತಿಯು ಹೇಳುತ್ತದೆ. ಇದೇ ಶ್ರುತಿಯು
"ಆಚಾರ್ಯನಿಂದಲೇ ತಿಳಿದುಕೊಂಡ ವಿದ್ಯೆಯು ಸಾಧು ತಮತ್ವವನ್ನು ಹೊಂದುತ್ತದೆ'
ಆಚಾರ್ಯಾದೈವ ವಿದ್ಯಾ ವಿದಿತಾ ಸಾಧಿಷ್ಟಂ ಪ್ರಾಪತ್ (ಛಾಂದೋಗ್ಯ ಉ.
೪, ೯. ೩) ಎಂದೂ ಹೇಳುತ್ತದೆ.
 
೨ ಆಚಾರ್ಯನನ್ನು ವಿಧಿಪೂರ್ವಕವಾಗಿ ಬಳಿಸಾರಬೇಕು. ಅದನ್ನು ತಿಳಿಯು
ವುದಕ್ಕಾಗಿ ಅವನು ಸಮಿತ್ರಾಣಿಯಾಗಿ ಪ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರು
ವನ್ನೇ ಬಳಿಸಾರಬೇಕು. ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛತ್
ಸಮಿತ್ರಾಣಿಃ ಪ್ರೋತ್ರಿಯಂ ಬ್ರಹ್ಮನಿಷ್ಕ (ಮುಂಡಕ ಉ. ೧. ೨. ೧೨) ಎಂದು
ಶ್ರುತಿಯು ಹೇಳುತ್ತದೆ.]
 
ಉದ್ಧರೇದಾತ್ಮನಾತ್ಮಾನಂ ಮಗ್ನಂ ಸಂಸಾರವಾರಿ
ಯೋಗಾರೂಢತ್ವಮಾಸಾದ್ಯ ಸಮಗ್ದರ್ಶನ-ನಿಷ್ಠಯಾ ॥ ೯
 
[೯
 
ಸಮಗ್-ದರ್ಶನ ನಿಷ್ಠಯಾ
ಯೋಗಾರೂಢತ್ವಂ = ಯೋಗಾರೂಢತ್ವವನ್ನು
 
ಸಮ್ಯಗ್ ಜ್ಞಾನದಲ್ಲಿರುವ ನಿಷ್ಠೆಯಿಂದ
ಆಸಾದ್ಯ - ಪಡೆದು ಸಂಸಾರ.
ವಾರಿ - ಸಂಸಾರ ಸಮುದ್ರದಲ್ಲಿ ಮಗ್ನಂ = ಮುಳುಗಿರುವ ಆತ್ಮಾನಂ - ತನ್ನನ್ನು
ಆತ್ಮನಾ - ತನ್ನಿಂದಲೇ ಉದ್ಧರೇತ್ – ಉದ್ಧರಿಸಿಕೊಳ್ಳಬೇಕು.
 
೯. ಸಮ್ಯಗ್ ಜ್ಞಾನದಲ್ಲಿರುವ ನಿಷ್ಠೆಯಿಂದ ಯೋಗಾರೂಢತ್ವವನ್ನು
ಪಡೆದು, ಸಂಸಾರಸಮುದ್ರದಲ್ಲಿ ಮುಳುಗಿರುವ ತನ್ನನ್ನು ತನ್ನಿಂದಲೇ
ಉದ್ಧರಿಸಿಕೊಳ್ಳಬೇಕು.
 
[೧ ಯೋಗಸಿದ್ಧಿ ಎಂದರ್ಥ. 'ಯಾವಾಗ (ಯೋಗಿಯು) ಇಂದ್ರಿಯಗಳ ವಿಷಯ
ಗಳಲ್ಲಿ (ಮತ್ತು ಅದಕ್ಕೆ ಸಂಬಂಧಪಟ್ಟ) ಕರ್ಮಗಳಲ್ಲಿ ಆಸಕ್ತನಾಗುವುದಿಲ್ಲವೋ ಆಗ
ಸಂಕಲ್ಪಗಳನ್ನೆಲ್ಲ ಬಿಡುವವನಾಗಿ ಯೋಗಾರೂಢನೆಂದು ಹೇಳಲ್ಪಡುತ್ತಾನೆ' ಯದಾ
ಹಿ ನೇಂದ್ರಿಯಾರ್ಥಷು ನ ಕರ್ಮಸ್ವನುಷತೇ । ಸರ್ವ ಸಂಕಲ್ಪ ಸಂನ್ಯಾಸೀ
ಯೋಗಾರೂಢಸ್ತದೋಚ್ಯತೇ ॥ (ಗೀತಾ ೬, ೪) ಎಂದು ಭಗವಂತನು ಹೇಳಿ
 
K
 
ರುತ್ತಾನೆ.
 
೨ಈ ಸಂಸಾರವೆಂಬ ವಿಶಾಲಸಾಗರದಲ್ಲಿ ಬಿದ್ದು, ಘೋರವೂ ಕ್ರೂರವೂ ಆದ
ಮೀನು- ಮೊಸಳೆಗಳಿಂದ ನುಂಗಲ್ಪಟ್ಟು, ವಿಷಯಸಮೂಹವೆಂಬ ಅಲೆಗಳ ಹೊಡೆತ
ದಿಂದ ಪೀಡಿತನಾಗಿ, ದಿಗ್ಧಮೆ ಹೊಂದಿರುವ ನನಗೆ, ಹೇ ಲಕ್ಷ್ಮೀನರಸಿಂಹ, ನಿನ್ನ
ಕರಗಳ ಆಸರೆಯನ್ನು ನೀಡು ಸಂಸಾರ-ಸಾಗರ- ವಿಶಾಲ ಕರಾಲ. ಕಾಲ ನ
ಗ್ರಹಗ್ರಸನ ನಿಗ್ರಹ ವಿಗ್ರಹಸ್ಯ: ವ್ಯಗ್ರಸ್ಯ ರಾಗನಿಚರ್ಯೋ ನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ॥ ಎಂದು ಆಚಾರ್ಯರೇ ಭವಾ
ಬಿಯಲ್ಲಿ ಮುಳುಗಿರುವ ಸಂಸಾರಿಯ ಅವಸ್ಥೆಯನ್ನು ಹೇಳಿರುತ್ತಾರೆ.