This page has been fully proofread once and needs a second look.

ಪ್ರಾರಬ್ಧಂ ಪುಷ್ಯತಿ ವಪುರಿತಿ ನಿಶ್ಚಿತ್ಯ ನಿಶ್ಚಲಃ ।
ಧೈರ್ಯಮಾಲಂಬ ಯತ್ನೇನ ಸ್ವಾಧ್ಯಾಸಾಪನಯಂ ಕುರು
 
ಪ್ರಾರಬ್ಧ -ಧಂ = ಪ್ರಾರಬ್ಧಕರ್ಮವು, ವಪುಃ = ಶರೀರವನ್ನು, ಪುಷ್ಯತಿ – ಪೋಷಿಸು
-
ತ್ತ
ದೆ, ಇತಿ -= ಎಂದು, ನಿಶ್ಚಿತ್ಯ -= ನಿಶ್ಚಯಿಸಿ, ನಿಶ್ಚಲಃ [ಸನ್]= ನಿರ್ವಿಕಾರಚಿತ್ತನಾಗಿ,
ಧೈರ್ಯ೦ -= ಧೈರ್ಯವನ್ನು, ಆಲಂಬ್ಯ -= ಆಶ್ರಯಿಸಿ ಯನ -, ಯತ್ನೇನ = ಪ್ರಯತ್ನದಿಂದ,
ಸ್ವಾಧ್ಯಾಸಾಪನಯಂ ಕುರು,.
 
೨೭೮. 'ಪ್ರಾರಬ್ಧಕರ್ಮವು[^೧] ಶರೀರವನ್ನು ಪೋಷಿಸುತ್ತದೆ' ಎಂದು
ನಿಶ್ಚಯಿಸಿ ನಿರ್ವಿಕಾರಚಿತ್ತನಾಗಿ ಧೈರ್ಯವನ್ನು ಆಶ್ರಯಿಸಿಕೊಂಡು ನಿನ್ನಲ್ಲಿ
ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
 
[^] ಯಾವ ಕರ್ಮವು ಈಗ ಅನುಭವಿಸುತ್ತಿರುವ ಫಲವನ್ನು ಕೊಡುವುದಕ್ಕೆ
ಪ್ರಾರಂಭವಾಗಿರುವುದೋ ಅದು ಪ್ರಾರಬ್ಧ. ಇದನ್ನು ಯಾವುದರಿಂದಲೂ ಪರಿಹರಿಸಲು
ಸಾಧ್ಯವಲ್ಲದುದರಿಂದ ಅನುಭವಿಸಿಯೇ ಮುಗಿಸಬೇಕಾಗಿರುವುದು. ಇದು ನಾಶವಾದ
ಮೇಲೆ ಶರೀರಪಾತವಾಗಿ ವಿದೇಹಮುಕ್ತಿಯುಂಟಾಗುತ್ತದೆ..]
 
ನಾಹಂ ಜೀವಃ ಪರಂ ಬ್ರಹ್ಮೇತ್ಯತದ್ವಾವ್ಯಾ ವೃತ್ತಿ-ಪೂರ್ವಕಮ್ ।
ವಾಸನಾವೇಗತಃ ಪ್ರಾಪ್ತ-ಸ್ವಾಧ್ಯಾಸಾಪನಯಂ ಕುರು ॥ ೨೭೯ ॥
 
ಅಹ೦ = ನಾನು ,ಜೀವಃ ನ = ಜೀವನಲ್ಲ, ಪರಂ ಬ್ರಹ್ಮ= ಪರಬ್ರಹ್ಮವೇ,
ಇತಿ = ಎಂದು, ಅತದ್- ವ್ಯಾವೃತ್ತಿ.- ಪೂರ್ವಕಂ -= ಅನಾತ್ಮವಸ್ತುಗಳನ್ನು ನಿರಾಕರಿಸು-
ವುದರ ಮೂಲಕ, ವಾಸನಾವೇಗತಃ = ಅನಾತ್ಮವಾಸನೆಯ ವೇಗದಿಂದ ಪ್ರಾಪ್ತ-, ಪ್ರಾಪ್ತ=
ಉಂಟಾದ- ಸ್ವಾಧ್ಯಾಸಾಪನ ಯಂ ಕುರು,.
 
೨೭೯. "'ನಾನು ಜೀವನಲ್ಲ, ಪರಬ್ರಹ್ಮವೇ' ಎಂದು ಅನಾತ್ಮವಸ್ತು-
ಗಳನ್ನು ನಿರಾಕರಿಸುವುದರ ಮೂಲಕ[^೧] ಅನಾತ್ಮವಾಸನೆಯ ವೇಗದಿಂದ
ನಿನ್ನಲ್ಲಿ ಉಂಟಾಗಿರುವ ಅಭ್ಯಾಸವನ್ನು ಹೋಗಲಾಡಿಸಿಕೊ.
 
[^] 'ನಾನು ದೇಹವಲ್ಲ, ಇಂದ್ರಿಯಗಳಲ್ಲ, ಮನಸ್ಸಲ್ಲ, ಅಹಂಕಾರವಲ್ಲ, ಪ್ರಾಣಿ
ವರ್ಗ ವಲ್ಲ, ಬುದ್ಧಿಯೂ ಅಲ್ಲ; ಪತ್ನಿ- ಪುತ್ರ- ಕ್ಷೇತ್ರ- ವಿತ್ತಾದಿಗಳಿಂದ ದೂರನಾದವನು
ನಾನು; ನಿತ್ಯನೂ ಸಾಕ್ಷಿಯೂ ಪ್ರತ್ಯಗಾತ್ಮನೂ ಆದ ಸಾಕ್ಷಾತ್ ಶಿವನೇ ನಾನು'
(ಆತ್ಮಪಂಚಕ ೧). ]
 
ಶ್ರುತ್ಯಾ ಯುಕ್ತಾತ್ಯಾ ಸ್ವಾನುಭೂತ್ಯಾ ಜ್ಞಾತ್ವಾ ಸಾರ್ವಾತ್ಮ್ಯ ಮಾತ್ಮನಃ
ಕ್ವಚಿದಾಭಾಸತಃ ಪ್ರಾಪ್ತ-ಸ್ವಾಧ್ಯಾಸಾಪನಯಂ ಕುರು ॥ ೨೮೦ ॥