This page has not been fully proofread.

೨೮೦]
 
ವಿವೇಕಚೂಡಾಮಣಿ
 
ಪ್ರಾರಬ್ಧಂ ಪುಷ್ಯತಿ ವಪುರಿತಿ ನಿಶ್ಚಿತ್ಯ ನಿಶ್ಚಲಃ ।

ಧೈರ್ಯಮಾಲಂಬ ಯನ ಸ್ವಾಧ್ಯಾಸಾಪನಯಂ ಕುರು
 
॥ ೨೭೮
 
೧೪೯
 
=
 

 
ಪ್ರಾರಬ್ಧ - ಪ್ರಾರಬ್ಧಕರ್ಮವು ವಪುಃ = ಶರೀರವನ್ನು ಪುಷ್ಯತಿ – ಪೋಷಿಸು

ಇದೆ ಇತಿ - ಎಂದು ನಿಶ್ಚಿತ್ಯ - ನಿಶ್ಚಯಿಸಿ ನಿಶ್ಚಲಃ [ಸನ್= ನಿರ್ವಿಕಾರಚಿತ್ತನಾಗಿ

ಧೈರ್ಯ೦ - ಧೈರ್ಯವನ್ನು ಆಲಂಬ್ಯ - ಆಶ್ರಯಿಸಿ ಯನ - ಪ್ರಯತ್ನದಿಂದ

ಸ್ವಾಧ್ಯಾಸಾಪನಯಂ ಕುರು,
 

 
೨೭೮. 'ಪ್ರಾರಬ್ಧಕರ್ಮವ ಶರೀರವನ್ನು ಪೋಷಿಸುತ್ತದೆ' ಎಂದು

ನಿಶ್ಚಯಿಸಿ ನಿರ್ವಿಕಾರಚಿತ್ತನಾಗಿ ಧೈರ್ಯವನ್ನು ಆಶ್ರಯಿಸಿಕೊಂಡು ನಿನ್ನಲ್ಲಿ

ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
 

 
[೧ ಯಾವ ಕರ್ಮವು ಈಗ ಅನುಭವಿಸುತ್ತಿರುವ ಫಲವನ್ನು ಕೊಡುವುದಕ್ಕೆ

ಪ್ರಾರಂಭವಾಗಿರುವುದೋ ಅದು ಪ್ರಾರಬ್ಧ. ಇದನ್ನು ಯಾವುದರಿಂದಲೂ ಪರಿಹರಿಸಲು

ಸಾಧ್ಯವಲ್ಲದುದರಿಂದ ಅನುಭವಿಸಿಯೇ ಮುಗಿಸಬೇಕಾಗಿರುವುದು. ಇದು ನಾಶವಾದ

ಮೇಲೆ ಶರೀರಪಾತವಾಗಿ ವಿದೇಹಮುಕ್ತಿಯುಂಟಾಗುತ್ತದೆ..
 

 
ನಾಹಂ ಜೀವಃ ಪರಂ ಬ್ರಹ್ಮ ತದ್ವಾ ವೃತ್ತಿ-ಪೂರ್ವಕಮ್ ।

ವಾಸನಾವೇಗತಃ ಪ್ರಾಪ್ತ-ಸ್ವಾಧ್ಯಾಸಾಪನಯಂ ಕುರು ॥ ೨೭೯ ॥
 

 
ಅಹ೦ = ನಾನು ಜೀವಃ ನ = ಜೀವನಲ್ಲ ಪರಂ ಬ್ರಹ್ಮ ಪರಬ್ರಹ್ಮವೇ

ಇತಿ = ಎಂದು ಅತದ್- ವ್ಯಾವೃತ್ತಿ. ಪೂರ್ವಕಂ - ಅನಾತ್ಮವಸ್ತುಗಳನ್ನು ನಿರಾಕರಿಸು

ವುದರ ಮೂಲಕ ವಾಸನಾವೇಗತಃ = ಅನಾತ್ಮವಾಸನೆಯ ವೇಗದಿಂದ ಪ್ರಾಪ್ತ-

ಉಂಟಾದ ಸ್ವಾಧ್ಯಾಸಾಪನ ಯಂ ಕುರು,
 

 
೨೭೯. "ನಾನು ಜೀವನಲ್ಲ, ಪರಬ್ರಹ್ಮವೇ' ಎಂದು ಅನಾತ್ಮವಸ್ತು

ಗಳನ್ನು ನಿರಾಕರಿಸುವುದರ ಮೂಲಕ ಅನಾತ್ಮವಾಸನೆಯ ವೇಗದಿಂದ

ನಿನ್ನಲ್ಲಿ ಉಂಟಾಗಿರುವ ಅಭ್ಯಾಸವನ್ನು ಹೋಗಲಾಡಿಸಿಕೊ.
 

 
[೧ 'ನಾನು ದೇಹವಲ್ಲ, ಇಂದ್ರಿಯಗಳಲ್ಲ, ಮನಸ್ಸಲ್ಲ, ಅಹಂಕಾರವಲ್ಲ, ಪ್ರಾಣಿ

ವರ್ಗ ವಲ್ಲ, ಬುದ್ಧಿಯೂ ಅಲ್ಲ; ಪತ್ನಿ ಪುತ್ರ ಕ್ಷೇತ್ರ ವಿತ್ತಾದಿಗಳಿಂದ ದೂರನಾದವನು

ನಾನು; ನಿತ್ಯನೂ ಸಾಕ್ಷಿಯೂ ಪ್ರತ್ಯಗಾತ್ಮನೂ ಆದ ಸಾಕ್ಷಾತ್ ಶಿವನೇ ನಾನು

(ಆತ್ಮಪಂಚಕ ೧). ]
 

 
ಶ್ರುತ್ಯಾ ಯುಕ್ತಾ ಸ್ವಾನುಭೂತ್ಯಾ ಜ್ಞಾತ್ವಾ ಸಾರ್ವಾತ್ಮಮಾತ್ಮನಃ

ಕ್ವಚಿದಾಭಾಸತಃ ಪ್ರಾಪ್ತ-ಸ್ವಾಧ್ಯಾಸಾಪನಯಂ ಕುರು ॥ ೨೮೦ ॥