This page has been fully proofread once and needs a second look.

[^೧] ಮಕ್ಕಳು, ಮನೆ ಮೊದಲಾದುವುಗಳಲ್ಲಿ ಮಮತೆ, ಅನ್ನಮಯಾದಿ-ಕೋಶ-
ಗಳಲ್ಲಿ ತಾದಾತ್ಮ್ಯ .
[^೨] 'ಪರಬ್ರಹ್ಮವನ್ನು ಸಾಕ್ಷಾತ್ಕಾರಮಾಡಿಕೊಂಡಮೇಲೆ ಇವನ ತೃಷ್ಣೆಯೂ ಕೂಡ
ಹಿಂತಿರುಗುವುದು' ರಸೋಽಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ (ಗೀತಾ ೨. ೫೯).]
 
ಸ್ವಾತ್ಮನ್ಯೇವ ಸದಾ ಸ್ಥಿತ್ವಾ ಮನೋ ನಶ್ಯತಿ ಯೋಗಿನಃ |
ವಾಸನಾನಾಂ ಕ್ಷಯಶ್ಚಾತಃ ಸ್ವಾಧ್ಯಾಸಾಪನಯಂ ಕುರು ॥ ೨೭೬ ॥
 
ಯೋಗಿನಃ = ಯೋಗಿಯ, ಮನಃ = ಮನಸ್ಸು, ಸ್ವಾತ್ಮನಿ ಏವ = ಬ್ರಹ್ಮ-
ದಲ್ಲಿಯೇ, ಸದಾ -= ಯಾವಾಗಲೂ, ಸ್ಥಿತ್ವಾ -= ಇದ್ದು ಕೊಂಡು, ನಶ್ಯತಿ = ನಾಶವಾಗು
-
ತ್ತ
ದೆ; [ತತಃ = ಅನಂತರ] ವಾಸನಾನಾಂ= ಅನಾತ್ಮವಾಸನೆಗಳ, ಕ್ಷಯಃ ಚ=
ನಾಶವೂ [ಜಾಯತೇ -= ಉಂಟಾಗುತ್ತದೆ]; ಆತಃ = ಆದುದರಿಂದ, ಸ್ವ-ಅಧ್ಯಾಸ-
ಅಪನಯಂ = ನಿನ್ನಲ್ಲಿ ಉಂಟಾಗಿರುವ ಅಧ್ಯಾಸದ ತಿರಸ್ಕಾರವನ್ನು, ಕುರು= ಮಾಡು.
 
೨೭೬. ಯೋಗಿಯ ಮನಸ್ಸು[^೧] ಯಾವಾಗಲೂ ಬ್ರಹ್ಮದಲ್ಲಿಯೇ ಇದ್ದು-
ಕೊಂಡು ನಾಶವಾಗುತ್ತದೆ. (ಅನಂತರ) ಅನಾತ್ಮವಾಸನೆಗಳ ಕ್ಷಯವೂ
ಉಂಟಾಗುತ್ತದೆ. ಆದುದರಿಂದ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು
ಹೋಗಲಾಡಿಸಿಕೊ.
 
[^೧] ಚಿತ್ದ ರಾಜಸೀ-ತಾಮಸೀ-ವೃತ್ತಿಗಳು.]
 
ತಮೋ ದ್ವಾಭ್ಯಾಂ ರಜಃ ಸಾತ್ ಸತ್ಯಂಸತ್ತ್ವಾತ್ ಸತ್ತ್ವಂ ಶುದ್ಧೇನ ನಶ್ಯತಿ ।
ತಸ್ಮಾತ್ ಸತ್ಯಮವಷ್ಟಭ್ಯ ಸ್ವಾಧ್ಯಾಸಾಪನಯಂ ಕುರು ॥ ೨೭೭ ॥
 
ತಮಃ = ತಮೋಗುಣವು, ದ್ವಾಭ್ಯಾಂ = ಸತ್ತ್ವ ರಜಸ್ಸುಗಳಿಂದ, ನಶ್ಯತಿ = ನಾಶ-
ವಾಗುತ್ತದೆ, ರಜಃ -= ರಜಸ್ಸು ಸತ್ತಾತ್ ಸ, ಸತ್ತ್ವಾತ್= ಸತ್ತ್ವಗುಣದಿಂದಲೂ, ಸತ್ಯ = ಸತ್ಯತ್ವಂ = ಸತ್ತ್ವ
ಗುಣವು, ಶುದ್ಧೇನ = ಶುದ್ಧ ಸತ್ತ್ವದಿಂದಲೂ [ನಾಶವಾಗುತ್ತದೆ]; ತಸ್ಮಾತ್ = ಆದುದ-
ರಿಂದ, ಸತ್ತ್ವಂ
- ಶುದ್ಧ ಸತ್ಯದಿಂದಲೂ (ನಾಶವಾಗುತ್ತದೆ; ತಸ್ಮಾತ್ = ಆದುದ-
ರಿಂದ ಸತ್ತ್ವ - ಶುದ್ಧ ಸತ್
ತ್ವವನ್ನು, ಅವಷ್ಟಭ್ಯ -= ಅವಲಂಬಿಸಿ ಸ್ವ. , ಸ್ವ-ಅಧ್ಯಾಸ -ಅಪನ-
ಯಂ ಕುರು.
 
೨೭೭. ತಮೋಗುಣವು ಸರಜಸ್ಸುಗಳಿಂದಲೂ ರಜೋಗುಣವು
ತ್ತ್ವಗುಣದಿಂದಲೂ ಸತ್ತ್ವಗುಣವು ಶುದ್ಧಸತ್ತ್ವದಿಂದಲೂ[^೧] ನಾಶವಾಗು-
ತ್ತದೆ.ಆದುದರಿಂದ ಶುದ್ಧ ಸತ್ತ್ವವನ್ನು ಅವಲಂಬಿಸಿಕೊಂಡು ನಿನ್ನಲ್ಲಿ
ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.
 
[^೧] ಇದರ ಲಕ್ಷಣವನ್ನು ೧೧೯ನೆಯ ಶ್ಲೋಕದಲ್ಲಿ ಹೇಳಿದೆ.]