This page has been fully proofread once and needs a second look.

ಇವುಗಳಿಗಿಂತ ಬೇರೆಯಾದುದೂ, ಪರಂ = ಸರ್ವೋತ್ಕೃಷ್ಟವೂ, ನಿತ್ಯಂ = ನಿತ್ಯವೂ,
ಅವ್ಯಯಸುಖಂ = ಅಖಂಡಸುಖರೂಪವೂ, ನಿರಂಜನಂ = ತಮಃಶೂನ್ಯವೂ [ಆದ]
ಯತ್ ಬ್ರಹ್ಮ. . . ಭಾವಯ.
 
೨೬೦. ಯಾವುದು ವಿಕಲ್ಪಶೂನ್ಯವೊ, ಅಪರಿಚ್ಛಿನ್ನವೊ, ಅವಿನಾಶಿಯೊ,
ಕಾರ್ಯಸಮುದಾಯ ಮತ್ತು ಮಾಯೆ--ಇವುಗಳಿಗಿಂತ ಬೇರೆಯಾದುದೊ,
ಸರ್ವೋತ್ಕೃಷ್ಟವೊ, ನಿತ್ಯವೊ,[^೧] ಅಖಂಡಸುಖರೂಪವೊ,[^೨] ತಮಃಶೂನ್ಯವೊ--
ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 
[^೧] 'ಅನಿತ್ಯ ವಸ್ತುಗಳಲ್ಲಿ ನಿತ್ಯನು' ನಿತ್ಯೋಽನಿತ್ಯಾನಾಮ್ (ಕರ ಉ. ೨. ೫. ೧೩).
[^೨] 'ಯಾವುದು ಭೂಮವೊ ಅದು ಸುಖವು, ಅಲ್ಪದಲ್ಲಿ ಸುಖವಿಲ್ಲ' ಯೋ ವೈ
ಭೂಮಾ ತತ್ಸುಖಮ್, ನಾಲ್ವೇ ಸುಖಮಸ್ತಿ (ಛಾಂದೋಗ್ಯ ಉ. ೭. ೨೩).]
 
ಯದ್ವಿಭಾತಿ ಸದನೇಕಧಾ ಭ್ರಮಾ-
ನ್ನಾಮ-ರೂಪ-ಗುಣ-ವಿಕ್ರಿಯಾತ್ಮನಾ ।
ಹೇಮವತ್ ಸ್ವಯಮವಿಕ್ರಿಯಂ ಸದಾ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ॥ ೨೬೧ ॥
 
ಯತ್ ಸತ್ = ಯಾವ ಸದ್ವ ಸ್ತುವು, [ಒಂದೇ ಆಗಿದ್ದರೂ] ಭ್ರಮಾತ್ =
ಭ್ರಾಂತಿಯಿಂದ, ನಾಮ-ರೂಪ-ಗುಣ-ವಿಕ್ರಿಯ-ಆತ್ಮನಾ = ನಾಮ-ರೂಪ-ಗುಣ
ಕ್ರಿಯೆಗಳ ರೂಪದಿಂದ, ಅನೇಕಧಾ = ಬಹುವಿಧವಾಗಿ, ವಿಭಾತಿ = ಕಾಣುತ್ತದೆಯೋ,
ಹೇಮವತ್ = ಚಿನ್ನದಂತೆ, ಸ್ವಯಂ = ತಾನು, ಸದಾ = ಯಾವಾಗಲೂ, ಆವಿಕ್ರಿಯಂ=
ವಿಕಾರರಹಿತವಾದುದೊ [ಉಳಿದುದು ಹಿಂದಿನಂತೆಯೆ].
 
೨೬೧. ಯಾವ ಸದ್ವಸ್ತುವು (ಒಂದೇ ಆಗಿದ್ದರೂ ಭ್ರಾಂತಿಯ ಮೂಲಕ
ನಾಮರೂಪ -ರೂಪ-ಗುಣ-ಕ್ರಿಯೆಗಳ ರೂಪದಿಂದ ಬಹುವಿಧವಾಗಿ[^೧] ಕಾಣು-
ಇದೆಯೋಯೊ, (ಆದರೂ ಬಳೆ, ಕುಂಡಲ ಮೊದಲಾದುವುಗಳ ರೂಪದಲ್ಲಿ
ಕಾಣುವ) ಚಿನ್ನದಂತೆ ತಾನು ಮಾತ್ರ ವಿಕಾರರಹಿತವಾದುದೊ ಆ ಬ್ರಹ್ಮವೇ
ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 
[^] ದೇವ, -ತಿರ್ಯಗಾದಿ- ನಾನಾವಿಧ ನಾಮರೂಪಗಳಿ೦ದ.]
 
ಯಚ್ಚಕಾಸ್ತ್ಯನಪರಂ ಪರಾತ್ಪರಂ
ಪ್ರತ್ಯಗೇಕರಸಮಾತ್ಮ-ಲಕ್ಷಣಮ್ ।
ಸತ್ಯ-ಚಿತ್-ಸುಖಮನಂತಮವ್ಯಯಂ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ।। ೨೬೨ ।।