This page has not been fully proofread.

ವಿವೇಕಚೂಡಾಮಣಿ
 
[೨೬೧
 
ಇವುಗಳಿಗಿಂತ ಬೇರೆಯಾದುದೂ, ಪರಂ = ಸರ್ವೋತ್ಕೃಷ್ಟವೂ, ನಿತ್ಯಂ = ನಿತ್ಯವೂ,

ಅವ್ಯಯಸುಖಂ -= ಅಖಂಡಸುಖರೂಪವೂ, ನಿರಂಜನಂ = ತಮಃಶೂನ್ಯವೂ [ಆದ]

ಯತ್ ಬ್ರಹ್ಮ. . . ಭಾವಯ.
 
೧೪೦
 

 
೨೬೦. ಯಾವುದು ವಿಕಲ್ಪಶೂನ್ಯವೊ, ಅಪರಿಚ್ಛಿನ್ನವೊ, ಅವಿನಾಶಿಯೊ,

ಕಾರ್ಯಸಮುದಾಯ ಮತ್ತು ಮಾಯೆ--ಇವುಗಳಿಗಿಂತ ಬೇರೆಯಾದುದೆ,
ದೊ,
ಸರ್ವೋತ್ಕೃಷ್ಟವೊ, ನಿತ್ಯವೊ,[^೧] ಅಖಂಡಸುಖರೂಪವೊ,[^೨] ತಮಃಶೂನ್ಯವೊ-
-
ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.

 
[^] ಅನಿತ್ಯ ವಸ್ತುಗಳಲ್ಲಿ ನಿತ್ಯನು' ನಿತ್ಯ ನಿತ್ಯಾನಾಮ್ (ಕರ ಉ. ೨. ೫. ೧೩).

[^
] ಯಾವುದು ಭೂಮವೊ ಅದು ಸುಖವು, ಅಲ್ಪದಲ್ಲಿ ಸುಖವಿಲ್ಲ' ಯೋ ವೈ

ಭೂಮಾ ತತ್ಸುಖಮ್, ನಾಲ್ವೇ ಸುಖಮಸ್ತಿ (ಛಾಂದೋಗ್ಯ ಉ. ೭. ೨೩).]
 

 
ಯದ್ವಿಭಾತಿ ಸದನೇಕಧಾ ಭ್ರಮಾ
-
ನ್ಯಾಮನಾಮ-ರೂಪ-ಗುಣ-ವಿಕ್ರಿಯಾತ್ಮನಾ ।

ಹೇಮವತ್ ಸ್ವಯಮವಿಕ್ರಿಯಂ ಸದಾ

ಬ್ರಹ್ಮ ತತ್ತ್ವ ಮಸಿ ಭಾವಯಾತ್ಮನಿ
 
॥ ೨೬೧
 
H
 

 
ಯತ್ ಸತ್ = ಯಾವ ಸದ್ವ ಸ್ತುವು, [ಒಂದೇ ಆಗಿದ್ದ ರೂರೂ] ಭ್ರಮಾತ್ -
=
ಭ್ರಾಂತಿಯಿಂದ ನಾಮ-ರೂಪ , ನಾಮ-ರೂಪ-ಗುಣ, -ವಿಕ್ರಿಯ. -ಆತ್ಮನಾ = ನಾಮ- ರೂಪ-ಗುಣ

ಕ್ರಿಯೆಗಳ ರೂಪದಿಂದ, ಅನೇಕಧಾ -= ಬಹುವಿಧವಾಗಿ, ವಿಭಾತಿ -= ಕಾಣುತ್ತದೆಯೋ,

ಹೇಮವತ್ -= ಚಿನ್ನದಂತೆ, ಸ್ವಯಂ- = ತಾನು, ಸದಾ = ಯಾವಾಗಲೂ, ಆವಿಕ್ರಿಯಂ=

ವಿಕಾರರಹಿತವಾದುದೊ [ಉಳಿದುದು ಹಿಂದಿನಂತೆಯೆ].
 

 
೨೬೧. ಯಾವ ಸದ್ವಸ್ತುವು (ಒಂದೇ ಆಗಿದ್ದರೂ ಭ್ರಾಂತಿಯ ಮೂಲಕ

ನಾಮರೂಪ ಗುಣ-ಕ್ರಿಯೆಗಳ ರೂಪದಿಂದ ಬಹುವಿಧವಾಗಿ[^೧] ಕಾಣು

ಇದೆಯೋ, (ಆದರೂ ಬಳೆ, ಕುಂಡಲ ಮೊದಲಾದುವುಗಳ ರೂಪದಲ್ಲಿ

ಕಾಣುವ) ಚಿನ್ನದಂತೆ ತಾನು ಮಾತ್ರ ವಿಕಾರರಹಿತವಾದುದೊ ಆ ಬ್ರಹ್ಮವೇ

ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.

 
[೧ ದೇವ, ತಿರ್ಯಗಾದಿ- ನಾನಾವಿಧ ನಾಮರೂಪಗಳಿ೦ದ.
 

 
ಯಚ್ಚಕಾಸ್ತ್ಯನಪರಂ ಪರಾತ್ಪರಂ

ಪ್ರತ್ಯಗೇಕರಸಮಾತ್ಮ-ಲಕ್ಷಣಮ್ ।

ಸತ್ಯ-ಚಿತ್-ಸುಖಮನಂತಮವ್ಯಯಂ

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
। ೨೬೨ ।