This page has not been fully proofread.

ವಿವೇಕಚೂಡಾಮಣಿ
 
[೨೬೧
 
ಇವುಗಳಿಗಿಂತ ಬೇರೆಯಾದುದೂ, ಪರಂ = ಸರ್ವೋತ್ಕೃಷ್ಟವೂ, ನಿತ್ಯಂ = ನಿತ್ಯವೂ,
ಅವ್ಯಯಸುಖಂ - ಅಖಂಡಸುಖರೂಪವೂ, ನಿರಂಜನಂ ತಮಃಶೂನ್ಯವೂ [ಆದ]
ಯತ್ ಬ್ರಹ್ಮ. . . ಭಾವಯ.
 
೧೪೦
 
೨೬೦. ಯಾವುದು ವಿಕಲ್ಪಶೂನ್ಯವೊ, ಅಪರಿಚ್ಛಿನ್ನವೊ, ಅವಿನಾಶಿಯೊ,
ಕಾರ್ಯಸಮುದಾಯ ಮತ್ತು ಮಾಯೆ-ಇವುಗಳಿಗಿಂತ ಬೇರೆಯಾದುದೆ,
ಸರ್ವೋತ್ಕೃಷ್ಟವೊ, ನಿತ್ಯವೊ, ಅಖಂಡಸುಖರೂಪವೊ, ತಮಃಶೂನ್ಯವೊ-
ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
[೧ ಅನಿತ್ಯ ವಸ್ತುಗಳಲ್ಲಿ ನಿತ್ಯನು' ನಿತ್ಯ ನಿತ್ಯಾನಾಮ್ (ಕರ ಉ. ೨. ೫. ೧೩).
೨ ಯಾವುದು ಭೂಮವೊ ಅದು ಸುಖವು, ಅಲ್ಪದಲ್ಲಿ ಸುಖವಿಲ್ಲ' ಯೋ ವೈ
ಭೂಮಾ ತತ್ಸುಖಮ್, ನಾಲ್ವೇ ಸುಖಮಸ್ತಿ (ಛಾಂದೋಗ್ಯ ಉ. ೭. ೨೩).]
 
ಯದ್ವಿಭಾತಿ ಸದನೇಕಧಾ ಭ್ರಮಾ
ನ್ಯಾಮರೂಪ-ಗುಣ-ವಿಕ್ರಿಯಾತ್ಮನಾ ।
ಹೇಮವತ್ ಸ್ವಯಮವಿಕ್ರಿಯಂ ಸದಾ
ಬ್ರಹ್ಮ ತತ್ತ್ವ ಮಸಿ ಭಾವಯಾತ್ಮನಿ
 
॥ ೨೬೧
 
H
 
ಯತ್ ಸತ್ = ಯಾವ ಸದ್ವ ಸ್ತುವು [ಒಂದೇ ಆಗಿದ್ದ ರೂ ಭ್ರಮಾತ್ -
ಭ್ರಾಂತಿಯಿಂದ ನಾಮ-ರೂಪ ಗುಣ, ವಿಕ್ರಿಯ. ಆತ್ಮನಾ = ನಾಮ- ರೂಪ-ಗುಣ
ಕ್ರಿಯೆಗಳ ರೂಪದಿಂದ ಅನೇಕಧಾ - ಬಹುವಿಧವಾಗಿ ವಿಭಾತಿ - ಕಾಣುತ್ತದೆಯೋ,
ಹೇಮವತ್ - ಚಿನ್ನದಂತೆ ಸ್ವಯಂ- ತಾನು ಸದಾ ಯಾವಾಗಲೂ ಆವಿಕ್ರಿಯಂ=
ವಿಕಾರರಹಿತವಾದುದೊ [ಉಳಿದುದು ಹಿಂದಿನಂತೆಯೆ].
 
೨೬೧. ಯಾವ ಸದ್ವಸ್ತುವು (ಒಂದೇ ಆಗಿದ್ದರೂ ಭ್ರಾಂತಿಯ ಮೂಲಕ
ನಾಮರೂಪ ಗುಣ-ಕ್ರಿಯೆಗಳ ರೂಪದಿಂದ ಬಹುವಿಧವಾಗಿ ಕಾಣು
ಇದೆಯೋ, (ಆದರೂ ಬಳೆ, ಕುಂಡಲ ಮೊದಲಾದುವುಗಳ ರೂಪದಲ್ಲಿ
ಕಾಣುವ) ಚಿನ್ನದಂತೆ ತಾನು ಮಾತ್ರ ವಿಕಾರರಹಿತವಾದುದೊ ಆ ಬ್ರಹ್ಮವೇ
ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
[೧ ದೇವ, ತಿರ್ಯಗಾದಿ- ನಾನಾವಿಧ ನಾಮರೂಪಗಳಿ೦ದ.
 
ಯಚ್ಚಕಾನಪರಂ ಪರಾತ್ಪರಂ
ಪ್ರತ್ಯಗೇಕರಸಮಾತ್ಮ-ಲಕ್ಷಣಮ್ ।
ಸತ್ಯ-ಚಿತ್-ಸುಖಮನಂತಮವ್ಯಯಂ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
। ೨೬೨ ।