This page has been fully proofread once and needs a second look.

ತತ್ವವು) ಸಾಧ್ಯವಿಲ್ಲ, ತ್ಯಾಗದಿಂದಲೇ ಕೆಲವರು ಅಮೃತತ್ವವನ್ನು ಹೊಂದಿದರು'
ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ
(ಮಹಾನಾರಾಯಣೋಪನಿಷತ್) ಎಂದು ಮತ್ತೊಂದು ಶ್ರುತಿಯು ಹೇಳುತ್ತದೆ.
 
೩ ಕರ್ಮಕಾಂಡದ ಅಧ್ಯಯನ ಅನುಷ್ಠಾನ ಇವುಗಳಿಂದ ಅತ್ಯಂತಿಕ-ದುಃಖ.
ನಿವೃತ್ತಿಯು ಆಗುವುದಿಲ್ಲ. ಬ್ರಾಹ್ಮಣನು ಕರ್ಮಕೃತವಾದ ಲೋಕಗಳನ್ನು
ಪರೀಕ್ಷಿಸಿ, "ನಿತ್ಯ ವಸ್ತುವು ಅನಿತ್ಯ ಸಾಧನಗಳಿಂದ ಆಗುವುದಿಲ್ಲ" ಎಂದು ವೈರಾಗ್ಯ
ವನ್ನು ಹೊಂದಬೇಕು' ಪರೀಕ್ಷೆಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ
ನಿರ್ವದಮಾವೇದಮಯಾನ್ನಾ ಸ್ತ್ಯ ಕೃತಃ ಕೃತೇನ ಎಂದು ಮುಂಡಕಶ್ರುತಿಯು (೧. ೨. ೧೨)
ಹೇಳುತ್ತದೆ. 'ಹೇಗೆ ಇಲ್ಲಿ ಕರ್ಮಜಿತವಾದ ಲೋಕವು ಕ್ಷಯವಾಗುತ್ತದೆಯೊ
ಹಾಗೆಯೇ ಅಲ್ಲಿ ಪುಣ್ಯಜಿತವಾದ ಲೋಕವು ಕ್ಷಯವಾಗುತ್ತದೆ' ತದ್ಯ ಥೇಹ ಕರ್ಮ-
ಜಿತೋ ಲೋಕಃ ಕ್ಷೀಯತ ಏಮೇನಾವಾಮುತ್ರ ಪುಣ್ಯಜಿತೋ ಲೋಕಃ
ಕೀಯತೇ ಎಂದು ಛಾಂದೋಗ್ಯಶ್ರುತಿಯು (೮. ೧. ೬) ಹೇಳುತ್ತದೆ. ಆತ್ಮನನ್ನು
ಅರಿತುಕೊಳ್ಳದೆ ಕರ್ಮಮಾರ್ಗದಲ್ಲೇ ಪ್ರವೃತ್ತರಾಗಿರುವವರಿಗೆ ಯಾವ ಲೋಕಗಳ
ಲ್ಲಿಯೂ ಸ್ವಾತಂತ್ರ್ಯವಿರುವುದಿಲ್ಲ.]
 
ಅತೋ ವಿಮುಕ್ತ್ಯೈ ಪ್ರಯತೀತೇತ ವಿದ್ವಾನ್
ಸಂನ್ಯಸ್ತ-ಬಾಹ್ಯಾರ್ಥ-ಸುಖಸ್ಪೃಹಃ ಸನ್ ।
ಸಂತಂ ಮಹಾಂತಂ ಸಮುಪೇತ್ಯ ದೇಶಿಕಂ
ತೇನೋಪದಿಷ್ಟಾರ್ಥ-ಸಮಾಹಿತಾತ್ಮಾ ||೮||
 
ಅತಃ = ಆದುದರಿಂದ, ವಿದ್ವಾನ್ = ವಿವೇಕಿಯು, ಸಂನ್ಯಸ್ತ -ಬಾಹ್ಯಾರ್ಥ-
ಸುಖಸ್ಪೃಹಃ ಸನ್ = ಬಾಹ್ಯ ವಿಷಯಗಳಿಂದಾಗುವ ಸುಖದ ಆಶೆಯನ್ನು ತ್ಯಜಿಸಿ
ದವನಾಗಿ, ಸಂತಂ = ಸತ್ಪುರುಷನಾದ, ಮಹಾಂತಂ = ಮಹಾತ್ಮನಾದ, ದೇಶಿಕಂ=
ಆಚಾರ್ಯನನ್ನು, ಸಮುಪೇತ್ಯ = ಬಳಿಸಾರಿ, ತೇನ = ಅವನಿಂದ, ಉಪದಿಷ್ಟಾರ್ಥ-
ಸಮಾಹಿತಾತ್ಮಾ= ಉಪದೇಶಿಸಲ್ಪಟ್ಟ ತತ್ತ್ವದಲ್ಲಿ ಸಮಾಹಿತವಾದ ಮನಸ್ಸುಳ್ಳವನಾಗಿ,
ಮುಕ್ತ್ಯೈ = ಮುಕ್ತಿಗಾಗಿ, ಪ್ರಯತೇತ = ಪ್ರಯತ್ನಿಸಬೇಕು.
 
೮. ಆದುದರಿಂದ ವಿವೇಕಿಯಾದವನು (ರೂಪ ರಸ ಮೊದಲಾದ)
ಬಾಹ್ಯ ವಿಷಯಗಳಿಂದಾಗುವ ಸುಖದ ಆಶೆಯನ್ನು ತ್ಯಜಿಸಿ, ಸತ್ಪುರುಷನೂ
ಮಹಾತ್ಮನೂ ಆದ ಆಚಾರ್ಯನನ್ನು[^೧] ಬಳಿಸಾರಿ,[^೨] ಅವನು ಉಪದೇಶಿಸಿದ
ತತ್ತ್ವದಲ್ಲಿ ಸಮಾಹಿತವಾದ ಮನಸ್ಸುಳ್ಳವನಾಗಿ ಮುಕ್ತಿಗಾಗಿ ಪ್ರಯತ್ನಿಸ
ಬೇಕು.
 
[^೧]೩೩ನೆಯ ಶ್ಲೋಕದಲ್ಲಿ ಆಚಾರ್ಯನ ಲಕ್ಷಣಗಳನ್ನು ಹೇಳಿದೆ. ಶಾಸ್ತ್ರಜ್ಞ
ನಾದರೂ ಸ್ವತಂತ್ರವಾಗಿ ಬ್ರಹ್ಮಜ್ಞಾನವನ್ನು ಅನ್ವೇಷಿಸಕೂಡದು. 'ಆಚಾರ್ಯ