This page has not been fully proofread.

೨೫೬]
 
ವಿವೇಕಚೂಡಾಮಣಿ
 
ವಾದ ಜ್ಞಾನದೃಷ್ಟಿಗೆ ಗೋಚರಂ = ವಿಷಯವೊ, ಯತ್ ವಸ್ತು - ಯಾವ ವಸ್ತುವು
ಶುದ್ಧ ಚಿತ್ ಘನಂ = ಶುದ್ಧವಾದ ಜ್ಞಾನಘನವೊ ಅನಾದಿ - ಅನಾದಿಯೊ ತತ್
ಬ್ರಹ್ಮ . . . ಭಾವಯ [ಅನ್ವಯ ಹಿಂದಿನಂತೆಯೆ].
 
೨೫೪, ಯಾವ ಪರಬ್ರಹ್ಮವಸ್ತುವು ಸಮಸ್ತ ಇಂದ್ರಿಯಗಳಿಗೆ ವಿಷಯ
ಎಲ್ಲವೋ, ಯಾವುದು ಶುದ್ಧವಾದ ಜ್ಞಾನದೃಷ್ಟಿಗೆ ವಿಷಯವಾಗಿರುವುದೊ,
ಯಾವುದು ಶುದ್ಧ ಜ್ಞಾನಘನವಾಗಿರುವುದೊ ಮತ್ತು ಅನಾದಿಯೊ ಅದೇ
ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 
ಷಡೋರೂರ್ಮಿಭಿರಯೋಗಿ ಯೋಗಿ-
ದ್ಭಾವಿತಂ ನ ಕರರ್ವಿಭಾವಿತಮ್ ।
ಬುದ್ಧವೇದ್ಯಮನವದ್ಯಮಸ್ತಿ ಯದ್
 
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೫
 
೧೩೭
 
ಯತ್-ಯಾವುದು ಷಟ್ ಊರ್ಮಿಭಿಃ - ಆರು ಊರ್ಮಿಗಳಿಂದ ಅಯೋಗಿ-
ಅಸಂಸ್ಪಷ್ಟವಾಗಿರುವುದೂ ಯೋಗಿಹೃದ್ಭಾವಿತಂ = ಯೋಗಿಗಳ ಹೃದಯದಲ್ಲಿ
ಭಾವಿಸಲ್ಪಡುವುದೆ ಕರಃ - ಇಂದ್ರಿಯಗಳಿಂದ ನ ವಿಭಾವಿತಂ= ಭಾವಿಸಲ್ಪಡಲು
ಆಗದೊ ಬುದ್ಧಿ ಅವೇದ್ಯಂ= ಬುದ್ಧಿಗೆ ಅಗೋಚರವೋ ಅನವದ್ಯಂ-ದೋಷರಹಿತವೊ
ತತ್ ಬ್ರಹ್ಮ ... ಭಾವಯ [ಅನ್ವಯ ಹಿಂದಿನಂತೆಯೆ].
 
೨೫೫. ಯಾವುದು ಆರು ಊರ್ಮಿಗಳಿಂದ ಅಸ್ಪಷ್ಟವಾಗಿರುವುದೊ,
ಯೋಗಿಗಳ ಹೃದಯದಲ್ಲಿ ಭಾವಿಸಲ್ಪಡತಕ್ಕದ್ದೊ, ಬುದ್ದೀಂದ್ರಿಯಗಳಿಗೆ
ಅಗೋಚರವೊ, ನಿರ್ದುಷ್ಟವೊ ಆ ಬ್ರಹ್ಮವೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
 
[೧ ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ.
 
ಭ್ರಾಂತಿಕಲ್ಪಿತ ಜಗತ್ಕಲಾಶ್ರಯಂ
 
ನಿಷ್ಕಲಂ
 
ಸ್ವಾಶ್ರಯಂ ಚ ಸದಸದ್ವಿಲಕ್ಷಣಮ್ ।
ನಿರುಪಮಾನವದ್ಧಿ ಯದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
॥ ೨೫೬ ।
 
ಯತ್ ಯಾವುದು ಭ್ರಾಂತಿ ಕಲ್ಪಿತ ಜಗತ್-ಕಲಾಶ್ರಯಂ ಭ್ರಮೆಯಿಂದ
ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯವಾಗಿರುವ, ಸ್ವ. ಆಶ್ರಯಂ = ತನಗೆ
ತಾನೇ ಆಶ್ರಯವಾಗಿರುವ, ಸತ್, ಅಸತ್, ವಿಲಕ್ಷಣಂ ಚ - ಸತ್. ಅಸತ್-ಇವುಗಳಿ
 
=
 
-