This page has not been fully proofread.

ವಿವೇಕಚೂಡಾಮಣಿ
 
[೨೫೩
 
ಅಸತ್ತಾಗಿರುವುದೊ ತಸ್ಮಾತ್ ತ್ವಮ್ ಅಸಿ [ಆನ್ವಯ ಹಿಂದಿನ ಶ್ಲೋಕ
 
ದಂತೆಯೆ].
 
೨೫೨, ಕನಸಿನಲ್ಲಿ ಕಲ್ಪಿತವಾಗಿರುವ ದೇಶ ಕಾಲ ವಿಷಯ ಜ್ಞಾತೃ
ಮೊದಲಾದುವೆಲ್ಲವೂ ಹೇಗೆ ಮಿಥೈಯಾಗಿರುವುವೋ ಹಾಗೆಯೇ ಈ ಜಾಗೃದ
ವಸ್ಥೆಯಲ್ಲಿಯೂ ಜಗತ್ತು ತನ್ನ ಅಜ್ಞಾನದ ಕಾರ್ಯವಾಗಿರುವುದರಿಂದ
ಮಿಥೈಯೇ. ಹೀಗೆ ಈ ಶರೀರ ಇಂದ್ರಿಯಗಳು ಪ್ರಾಣ ಅಹಂಕಾರ- ಇವೇ
ಮೊದಲಾದುವೆಲ್ಲವೂ ಅಸತ್ಯವಾಗಿರುವುದರಿಂದ ಯಾವುದು
ಪ್ರಶಾಂತವೂ ಶುದ್ದವೂ ಅನ್ವಯವೂ ಆದ ಪರಬ್ರಹ್ಮವಾಗಿರುವುದೋ ಅದೇ
ನೀನಾಗಿರುವೆ.
 
ಶ್ರೇಷ್ಠವೂ
 
ಜಾತಿ-ನೀತಿ-ಕುಲ-ಗೋತ್ರ-ದೂರಗಂ
 
ನಾಮ-ರೂಪ-ಗುಣ-ದೋಷ-ವರ್ಜಿತಮ್ ।
 
ದೇಶ-ಕಾಲ-ವಿಷಯಾತಿವರ್ತಿ ಯದ್
 
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
II ೨೫೩ ।
 
ಜಾತಿ, ನೀತಿ. ಕುಲ ಗೋತ್ರ-ದೂರಗಂ - ಜಾತಿ ನೀತಿ ಕುಲ ಗೋತ್ರ-ಇವು
ಗಳಿಗೆ ದೂರವಾಗಿರುವ, ನಾಮರೂಪ ಗುಣ- ದೋಷ-ವರ್ಜಿತಂ ನಾಮ ರೂಪ
ಗುಣ ದೋಷ- ಇವುಗಳಿಲ್ಲದ, ದೇಶ, ಕಾಲ. ವಿಷಯ. ಅತಿ ವರ್ತಿ - ದೇಶ- ಕಾಲ-
ವಿಷಯಗಳನ್ನು ಮೀರಿರುವ ಯತ್ ಬ್ರಹ್ಮ ಯಾವ ಬ್ರಹ್ಮವಿರುವುದೂ ತತ್
ಅದು ತ್ವಮ್ ಅಸಿ - ನೀನಾಗಿದ್ದೀಯೆ, ಆತ್ಮನಿ - ಮನಸ್ಸಿನಲ್ಲಿ ಭಾವಯ = ಅನು
 
B
 
ಸಂಧಾನಮಾಡು.
 
೨೫೩, ಜಾತಿ-ನೀತಿ.ಕುಲ-ಗೋತ್ರಗಳಿಗೆ ದೂರವೂ, ನಾಮ. ರೂಪ.
ಗುಣ-ದೋಷ-ವರ್ಜಿತವೂ, ದೇಶ. ಕಾಲ-ವಿಷಯಗಳನ್ನು ಮೀರಿರುವುದೂ
ಆದ ಯಾವ ಬ್ರಹ್ಮವಿರುವುದೋ ಅದೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ
ಅನುಸಂಧಾನಮಾಡು.
 
ಯತ್ಪರಂ ಸಕಲವಾಗಗೋಚರಂ
 
ಗೋಚರಂ ವಿಮಲಬೋಧಚಕ್ಷುಷಃ ।
ಶುದ್ಧ ಚಿದ್ಧನಮನಾದಿ ವಸ್ತು ಯದ್
 
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ । ೨೫೪ ।
ಯತ್ ಪರಂ= ಯಾವ ಪರಬ್ರಹ್ಮವು ಸಕಲ ವಾಕ್ ಅಗೋಚರಂ ಸಮಸ್ತ
ವಾಕ್ಕುಗಳಿಗೆ ಗೋಚರವಲ್ಲ, ವಿಮಲಬೋಧ ಚಕ್ಷುಷಃ - [ಯಾವುದು] ಶುದ್ಧ