This page has been fully proofread once and needs a second look.

ಮೇವ ಆಹಿತಂ = ಬರಿಯ ಮಣ್ಣೆ ಆಗಿರುತ್ತದೆ; ತದ್ವತ್ = ಹಾಗೆಯೇ ಸತ್-
ಜನಿತಂ = ಸತ್ತಿನಿಂದ ಹುಟ್ಟಿರುವ, ಇದಮ್ ಅಖಿಲಂ = ಇದೆಲ್ಲವೂ, ಸತ್-ಆತ್ಮಕಂ =
ಸದಾತ್ಮವೇ, ಸತ್ ಮಾತ್ರ ಏವ = ಸನ್ಮಾತ್ರವೇ (ಆಗಿರುತ್ತದೆ]; ಯಸ್ಮಾತ್ =
ಯಾವ ಕಾರಣದಿಂದ, ಸತಃ = ಸತ್ತಿಗಿಂತಲೂ, ಪರಂ ಕಿಮ್ ಆಪಿ = ಬೇರೆ ಯಾವುದೂ,
ನ ಅಸ್ತಿ = ಇಲ್ಲವೊ [ಆ ಕಾರಣದಿಂದ] ತತ್ ಸತ್ಯಂ = ಅದೇ ಸತ್ಯವು, ಸಃ =
ಅವನೇ ಸ್ವಯಂ = ಸ್ವತಃ, ಆತ್ಮಾ = ಆತ್ಮನು; ತಸ್ಮಾತ್ = ಆದುದರಿಂದ, ಯತ್ =
ಯಾವುದು, ಪರಂ = ಶ್ರೇಷ್ಠವೂ, ಪ್ರಶಾಂತಂ = ಪ್ರಶಾಂತವೂ, ಆಮಲಂ = ಶುದ್ಧವೂ,
ಅದ್ವಯಂ = ಅದ್ವಯವೂ, [ಆಗಿರುವುದೋ] ತತ್ ಬ್ರಹ್ಮ= ಆ ಬ್ರಹ್ಮವೇ, ತ್ವಂ =
ನೀನು, ಅಸಿ = ಆಗಿರುವೆ.
 
೨೫೧. ಮಣ್ಣಿನ ಕಾರ್ಯವಾದ ಗಡಿಗೆಯೇ ಮೊದಲಾದ ಸಮಸ್ತವೂ
ಯಾವಾಗಲೂ ಮಣ್ಣೆಣೇ ಆಗಿರುತ್ತದೆ. ಹಾಗೆಯೇ ಸದ್ವಸ್ತುವಿನಿಂದ ಉತ್ಪನ್ನ-
ವಾದ ಇದೆಲ್ಲವೂ ಸದಾತ್ಮಕವೂ ಸನ್ಮಾತ್ರವೂ ಆಗಿರುತ್ತದೆ. ಸದ್ವಸ್ತುವಿಗಿಂತ
ಬೇರೆಯಾಗಿ ಯಾವುದೊಂದೂ ಇಲ್ಲದಿರುವುದರಿಂದ ಅದೇ ಸತ್ಯವು. ಅದೇ
ಸ್ವತಃ ಆತ್ಮನು. ಆದುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ
ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿರುವುದೋ ಅದೇ ನೀನಾಗಿರುವೆ.
 
[ಛಾಂದೋಗ್ಯಪನಿಷತ್ತಿನ ಆರನೆಯ ಅಧ್ಯಾಯದಲ್ಲಿ ಉದ್ದಾಲಕನು ಶ್ವೇತ
ಕೇತುವಿಗೆ ಮಾಡಿರುವ ಉಪದೇಶವನ್ನು ಶಿಷ್ಯನು ಸುಲಭವಾಗಿ ತಿಳಿದುಕೊಳ್ಳಲು
ಇಲ್ಲಿ ಸಂಗ್ರಹಿಸಿದೆ.]
 
ನಿದ್ರಾ-ಕಲ್ಪಿತ-ದೇಶಕಾಲ-ವಿಷಯ-ಜ್ಞಾತ್ರಾದಿ ಸರ್ವಂ ಯಥಾ
ಮಿಥ್ಯಾ ತದ್ವದಿಹಾಪಿ ಜಾಗ್ರತಿ ಜಗತ್ ಸ್ವಾಜ್ಞಾನಕಾರ್ಯತ್ವತಃ ।
ಯಸ್ಮಾದೇವಮಿದಂ ಶರೀರ-ಕರಣ-ಪ್ರಾಣಾಹವಾದ್ಯಪ್ಯಸತ್
ತಸ್ಮಾತ್ ತತ್ತ್ವಮಸಿ ಪ್ರಶಾಂತಮಮಲಂ ಬ್ರಹ್ಮಾದ್ವಯಂ ಯತ್ ಪರಮ್ ॥ ೨೫೨ ||
 
ನಿದ್ರಾ-ಕಲ್ಪಿತ-ದೇಶ-ಕಾಲ-ವಿಷಯ-ಜ್ಞಾತೃ-ಆದಿ = ಕನಸಿನಲ್ಲಿ ಕಲ್ಪಿತವಾಗಿ-
ರುವ ದೇಶ ಕಾಲ ವಿಷಯ ಜ್ಞಾತೃ-- ಇವೇ ಮೊದಲಾದ, ಸರ್ವಂ = ಸಮಸ್ತವೂ,
ಯಥಾ = ಹೇಗೆ, ಮಿಥ್ಯಾ = ಮಿಥೈಯೊ, ತದ್ವತ್ = ಹಾಗೆಯೇ ,ಇಹ ಜಾಗ್ರತಿ ಅಪಿ=
ಈ ಜಾಗೃದವಸ್ಥೆಯಲ್ಲಿಯೂ, ಜಗತ್ = ಜಗತ್ತು, ಸ್ವ-ಅಜ್ಞಾನಕಾರ್ಯತ್ವತಃ =
ತನ್ನ ಅಜ್ಞಾನದ ಕಾರ್ಯವಾಗಿರುವುದರಿಂದ [ಮಿಥೈಯೆಯೇ]; ಯಸ್ಮಾತ್ = ಯಾವ
ಕಾರಣದಿಂದ, ಏವಂ = ಹೀಗೆ, ಇದಂ = ಈ, ಶರೀರ-ಕರಣ-ಪ್ರಾಣ=ಅಹಮ್-ಆದಿ
ಅಪಿ = ಶರೀರ ಇಂದ್ರಿಯಗಳು ಪ್ರಾಣ ಅಹಂಕಾರ ಮೊದಲಾದುವೂ, ಅಸತ್ =