This page has not been fully proofread.

೨೫೨]
 
ವಿವೇಕಚೂಡಾಮಣಿ
 
ಆತ್ಮಕಂ-
ಮೇವ ಆಹಿತಂ = ಬರಿಯ ಮಣ್ಣೆ ಆಗಿರುತ್ತದೆ; ತದ್ವತ್ = ಹಾಗೆಯೇ ಸತ್.
ಜನಿತಂ = ಸತ್ತಿನಿಂದ ಹುಟ್ಟಿರುವ ಇದಮ್ ಅಖಿಲಂ ಇದೆಲ್ಲವೂ ಸತ್
ಸದಾತ್ಮವೇ, ಸತ್ ಮಾತ್ರ ಏ ವ - ಸನ್ಮಾತ್ರವೇ (ಆಗಿರುತ್ತದೆ]; ಯಸ್ಮಾತ್ -
ಯಾವ ಕಾರಣದಿಂದ ಸತಃ = ಸತ್ತಿಗಿಂತಲೂ ಪರಂ ಕಿಮ್
ನ ಅಸ್ತಿ - ಇಲ್ಲವೊ (ಆ ಕಾರಣದಿಂದ
 
ಆಪಿ - ಬೇರೆ ಯಾವುದೂ
 
ತತ್ ಸತ್ಯಂ = ಅದೇ ಸತ್ಯವು, ಸಃ =
 
ಅವನೇ ಸ್ವಯಂ = ಸ್ವತಃ ಆತ್ಮಾ = ಆತ್ಮನು; ತಸ್ಮಾತ್ = ಆದುದರಿಂದ ಯತ್
ಯಾವುದು ಪರಂ = ಶ್ರೇಷ್ಠವೂ ಪ್ರಶಾಂತಂ = ಪ್ರಶಾಂತವೂ ಆಮಲಂ = ಶುದ್ಧವೂ
ಅದ್ವಯಂ - ಅದ್ವಯವೂ [ಆಗಿರುವುದೋ] ತತ್ ಬ್ರಹ್ಮ= ಆ ಬ್ರಹ್ಮವೇ ತ್ವಂ =
 
ನೀನು ಅಸಿ = ಆಗಿರುವೆ.
 
೧೩೫
 
೨೫೧. ಮಣ್ಣಿನ ಕಾರ್ಯವಾದ ಗಡಿಗೆಯೇ ಮೊದಲಾದ ಸಮಸ್ತವೂ
ಯಾವಾಗಲೂ ಮಣ್ಣೆ ಆಗಿರುತ್ತದೆ. ಹಾಗೆಯೇ ಸದ್ವಸ್ತುವಿನಿಂದ ಉತ್ಪನ್ನ
ವಾದ ಇದೆಲ್ಲವೂ ಸದಾತ್ಮಕವೂ ಸನ್ಮಾತ್ರವೂ ಆಗಿರುತ್ತದೆ. ಸದ್ವಸ್ತುವಿಗಿಂತ
ಬೇರೆಯಾಗಿ ಯಾವುದೊಂದೂ ಇಲ್ಲದಿರುವುದರಿಂದ ಅದೇ ಸತ್ಯವು. ಅದೇ
ಸ್ವತಃ ಆತ್ಮನು. ಆದುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ
ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿರುವುದೋ ಅದೇ ನೀನಾಗಿರುವೆ.
 
[ಛಾಂದೋಗ್ಯಪನಿಷತ್ತಿನ ಆರನೆಯ ಅಧ್ಯಾಯದಲ್ಲಿ ಉದ್ದಾಲಕನು ಶ್ವೇತ
ಕೇತುವಿಗೆ ಮಾಡಿರುವ ಉಪದೇಶವನ್ನು ಶಿಷ್ಯನು ಸುಲಭವಾಗಿ ತಿಳಿದುಕೊಳ್ಳಲು
ಇಲ್ಲಿ ಸಂಗ್ರಹಿಸಿದೆ.]
 
ನಿದ್ರಾ-ಕಲ್ಪಿತ-ದೇಶಕಾಲ-ವಿಷಯ-ಜ್ಞಾತ್ರಾದಿ ಸರ್ವಂ ಯಥಾ
ಮಿಥ್ಯಾ ತದ್ವದಿಹಾಪಿ ಜಾಗೃತಿ ಜಗತ್ ಸ್ವಾಜ್ಞಾನಕಾರ್ಯತಃ ।
ಯಸ್ಮಾದೇವಮಿದಂ ಶರೀರ-ಕರಣ-ಪ್ರಾಣಾಹವಾದ್ಯವ್ಯಸತ್
ತಸ್ಮಾತ್ ತತ್ತ್ವಮಸಿ ಪ್ರಶಾಂತನವಲಂ ಬ್ರಹ್ಮಾದ್ವಯಂ ಯತ್
ಪರಮ ॥ ೨೫೨
 
ನಿದ್ರಾ ಕಲ್ಪಿತ ದೇಶ. ಕಾಲ ವಿಷಯ. ಜ್ಞಾತೃ- ಆದಿ= ಕನಸಿನಲ್ಲಿ ಕಲ್ಪಿತವಾಗಿ
ರುವ ದೇಶ ಕಾಲ ವಿಷಯ ಜ್ಞಾತೃ- ಇವೇ ಮೊದಲಾದ ಸರ್ವ೦ = - ಸಮಸ್ತವೂ
ಯಥಾ ಹೇಗೆ ಮಿಥ್ಯಾ = ಮಿಥೈಯೊ, ತದ್ವತ್-ಹಾಗೆಯೇ ಇಹ ಜಾಗ್ರತಿ ಅಪಿ
ಈ ಜಾಗೃದವಸ್ಥೆಯಲ್ಲಿಯೂ ಜಗತ್ – ಜಗತ್ತು ಸ್ವ-ಅಜ್ಞಾನಕಾರ್ಯತ್ವತಃ –
ತನ್ನ ಅಜ್ಞಾನದ ಕಾರ್ಯವಾಗಿರುವುದರಿಂದ [ಮಿಥೈಯೆ]; ಯಸ್ಮಾತ್ - ಯಾವ
ಕಾರಣದಿಂದ ಏವಂ- ಹೀಗೆ ಇದಂ – ಈ ಶರೀರ, ಕರಣ- ಪ್ರಾಣ. ಅಹಮ್. ಆದಿ
ಅಪಿ = ಶರೀರ ಇಂದ್ರಿಯಗಳು ಪ್ರಾಣ ಅಹಂಕಾರ ಮೊದಲಾದುವೂ ಅಸತ್ -
 
=