This page has been fully proofread once and needs a second look.

ಸ ದೇವದತ್ತೋಽಯಮಿತೀಹ ವೈಕತಾ
ವಿರುದ್ಧಧರ್ಮಾಂಶಮಪಾಸ್ಯ ಕಥ್ಯತೇ ।
ಯಥಾ ತಥಾ ತತ್ತ್ವಮಸೀತಿವಾಕ್ಯೇ
ವಿರುದ್ಧಧರ್ಮಾನುಭಯತ್ರ ಹಿತ್ವಾ ॥ ೨೪೮ ॥
 
ಸಂಲಕ್ಷ್ಯ ಚಿನ್ಮಾತ್ರತಯಾ ಸದಾತ್ಮನೋ-
ರಖಂಡಭಾವಃ ಪರಿಚೀಯತೇ ಬುಧೈಃ ।
ಏವಂ ಮಹಾವಾಕ್ಯಶತೇನ ಕಥ್ಯತೇ
ಬ್ರಹ್ಮಾತ್ಮನೋರೈಕ್ಯಮಖಂಡಭಾವಃ ॥ ೨೪೯ ॥
 
ಸಃ ಅಯಂ ದೇವದತ್ತಃ = ಆ ದೇವದತ್ತನು ಇವನೇ, ಇತಿ ಇಹ ವಾ =
ಎಂಬ ವಾಕ್ಯದಲ್ಲಿ, ವಿರುದ್ಧ-ಧರ್ಮಾಂಶಂ = ವಿರುದ್ಧವಾದ ಧರ್ಮಗಳ ಭಾಗವನ್ನು,
ಅಪಾಸ್ಯ = ಬಿಟ್ಟು, ಏಕತಾ = ಐಕ್ಯವು, ಯಥಾ ಕಥ್ಯತೇ = ಹೇಗೆ
ಹೇಳಲ್ಪಡು-
ತ್ತ
ದೆಯೊ, ತಥಾ = ಹಾಗೆಯೇ, ತತ್ ತ್ವಮ್ ಆಸಿ = ಅದೇ ನೀನಾಗಿರುವೆ, ಇತಿ
ವಾಕ್ಯೇ = ಎಂಬ ವಾಕ್ಯದಲ್ಲಿಯೂ, ಉಭಯತ್ರ = ಎರಡು ಕಡೆಯಲ್ಲಿಯೂ, ವಿರುದ್ಧ-
ಧರ್ಮಾನ್ ಹಿತ್ವಾ = ವಿರುದ್ಧ ಭಾಗಗಳನ್ನು ಬಿಟ್ಟು, ಚಿನ್ಮಾತ್ರತಯಾ = ಕೇವಲ
ಚಿದ್ರೂಪದಿಂದ, ಸಂಲಕ್ಷ್ಯ= ಗುರುತಿಸಿ, ಸತ್-ಆತ್ಮನೋಃ = ಈಶ್ವರ ಜೀವರ, ಅಖಂಡ-
ಭಾವಃ = ಐಕ್ಯವು, ಬುಧೈಃ = ಜ್ಞಾನಿಗಳಿಂದ, ಪರಿಚೀಯತೇ = ಗ್ರಹಿಸಲ್ಪಡುತ್ತದೆ;
ಏವಂ = ಹೀಗೆ, ಬ್ರಹ್ಮ-ಆತ್ಮನೋಃ = ಬ್ರಹ್ಮ ಆತ್ಮರ, ಐಕ್ಯಂ = ಐಕ್ಯವು [ಮತ್ತು]
ಅಖಂಡಭಾವಃ = ಅಖಂಡಭಾವವು, ಮಹಾವಾಕ್ಯಶತೇನ= ನೂರಾರು ಮಹಾವಾಕ್ಯ-
ಗಳಿಂದ, ಕಥ್ಯತೇ = ಹೇಳಲ್ಪಡುತ್ತದೆ.
 
೨೪೮ -೨೪೯,. 'ಆ ದೇವದತ್ತನು ಇವನೇ' ಎಂಬ ವಾಕ್ಯದಲ್ಲಿ ವಿರುದ್ಧ
ಧರ್ಮಗಳ ಭಾಗವನ್ನು[^೧] ಬಿಟ್ಟು ಐಕ್ಯವನ್ನು ಹೇಗೆ ಸಾಧಿಸುತ್ತಾರೆಯೊ
ಹಾಗೆಯೇ 'ಅದೇ ನೀನಾಗಿರುವೆ' ಎಂಬ ವಾಕ್ಯದಲ್ಲಿ ಜ್ಞಾನಿಗಳು ಎರಡು
ಕಡೆಯಲ್ಲಿಯೂ ವಿರುದ್ಧಭಾಗಗಳನ್ನು[^೨] ಬಿಟ್ಟು (ಜೀವ ಈಶ್ವರ- ಇವರ
ಸ್ವರೂಪವಾದ) ಕೇವಲ ಚಿದ್ರೂಪವನ್ನೇ ಗುರುತಿಸಿ ಅವರ ಅಖಂಡಭಾವ-
ವನ್ನು ಗ್ರಹಿಸುತ್ತಾರೆ. ಹೀಗೆ ನೂರಾರು ಉಪನಿಷದ್ ವಾಕ್ಯಗಳು ಜೀವ.-
ಪರಮಾತ್ಮರ ಐಕ್ಯವನ್ನೂ ಅಖಂಡಭಾವವನ್ನೂ ಹೇಳುತ್ತವೆ.
 
[^೧] ಆ ದೇಶ ಈ ದೇಶ, ಆ ಕಾಲ ಈ ಕಾಲ-ಎಂಬ.
[^೨] ಕಾರಣೋಪಾಧಿ -ಕಾರ್ಯೋಪಾಧಿ, ಪ್ರತ್ಯಕ್ಷ- ಪರೋಕ್ಷತ್ವ, ಅದ್ವಿತೀಯತ್ವ-
ಸದ್ವಿತೀಯತ್ವ ಇವೇ ಮೊದಲಾದ ವಿರುದ್ಧ ಭಾವಗಳನ್ನು.]