This page has not been fully proofread.

೧೩೨
 
ವಿವೇಕಚೂಡಾಮಣಿ
 
[೨೪೭
 
ತತಸ್ತು ತೌ ಲಕ್ಷಣಯಾ ಸುಲ
ತಯೋರಖಂಡೆಕ-ರಸತ್ವ-ಸಿದ್ಧಯೇ ।
ನಾಲಂ ಜಹತ್ಯಾ ನ ತಥಾಜಹತ್ಯಾ
ಕಿ೦ತೂಭಯಾರ್ಥಾತ್ಮಕವ ಭಾವ್ಯಮ್ ॥ ೨೪೭ ।
 

 
ತತಃ - ಆದುದರಿಂದ ತಯೋಃ = ಆ ಜೀವ ಪರರ ಅಖಂಡ ಏಕರಸತ್ವ.
ಸಿದ್ಧಯೇ ಅಖಂಡೈಕ ರಸತ್ವ-ಸಿದ್ಧಿಗೋಸ್ಕರ ತೌ ತು ಅವರಿಬ್ಬರೂ ಲಕ್ಷಣಯಾ
ಲಕ್ಷಣೆಯಿಂದ ಸುಲ - ತೋರತಕ್ಕವರು; ಜಹತ್ಯಾ - ಜಹಲ್ಲ ಕ್ಷಣೆಯಿಂದಲೇ
ನ - ಸಾಧ್ಯವಲ್ಲವು, ತಥಾ - ಹಾಗೆಯೇ ಅಜಹತ್ಯಾ - ಅಜಹಲ್ಲಕ್ಷಣೆಯಿಂದಲೂ
ಸಾಧ್ಯವಲ್ಲವು; ಕಿಂ ತು - ಮತ್ತೇನೆಂದರೆ ಉಭಯಾರ್ಥಾತ್ಮಿಕಯಾ
ಏ ವ = ಜಹತ್ಅಜಹತ್ ಉಭಯ ಸ್ವರೂಪವಾಗಿರುವ ಲಕ್ಷಣೆಯಿಂದಲೇ ಭಾವ್ಯ-
ಅರಿತುಕೊಳ್ಳತಕ್ಕದ್ದು.
 
=
 
=
 
ನ ಅಲಂ
 
೨೪೭, ಆದುದರಿಂದ ಜೀವ.ವರಮಾತ್ಮರ ಅಖಂಡೈಕ.ರಸತ್ವ-ಸಿದ್ಧಿಗಾಗಿ
ಅವರಿಬ್ಬರನ್ನೂ ಲಕ್ಷಣೆಯಿಂದಲೇ ತಿಳಿದುಕೊಳ್ಳಬೇಕು. ಆದರೆ ಆ
ಸಿದ್ಧಿಯು ಕೇವಲ ಜಹಲ್ಲಕ್ಷಣೆಯಿಂದಲೂ ಆಗುವುದಿಲ್ಲ, ಅಜಹಲ್ಲಕ್ಷಣೆ
ಯಿಂದಲೂ ಆಗುವುದಿಲ್ಲ; ಜಹದಜಹದ್.ಉಭಯಸ್ವರೂಪವಾಗಿರುವ ಲಕ್ಷಣೆ
ಯಿಂದಲೇ ಆಗಬೇಕಾಗಿದೆ.
 
[೧ ಅಸಂಸೃಷ್ಟ ಕೂಟಸ್ಥ ಶುದ್ಧ ಸ್ವರೂಪದ ಸಿದ್ಧಿಗಾಗಿ,
 
೨ ಪದದ ಅರ್ಥವು ಎರಡು ವಿಧವಾಗಿದೆ ಶಕ್ಯ ಮತ್ತು ಲಕ್ಷ, ಒಂದು ಪದಕ್ಕೆ
ರೂಢಿಯಿಂದ ಬಂದಿರುವ ಅರ್ಥವು ಶಕ್ಯಾರ್ಥ ಅಥವಾ ವಾಚ್ಯಾರ್ಥ ಎನ್ನಿಸುವುದು.
'ಗಂಗೆಯ ಮೇಲೆ ಹಳ್ಳಿಯಿದೆ' ಎಂಬಲ್ಲಿ ನದಿಯ ಮೇಲೆ ಹಳ್ಳಿಯಿರುವುದು ಅಸಾಧ್ಯ
ವಾದುದರಿಂದ ಗಂಗಾತೀರವೆಂಬ ಲಕ್ಷಾರ್ಥವನ್ನು ಅರಿತುಕೊಳ್ಳಬೇಕು. ವಾಚ್ಯಾ
ರ್ಥವು ಹೊಂದದಿದ್ದಾಗ ಲಕ್ಷ್ಯಾರ್ಥವನ್ನು ಗ್ರಹಿಸಬೇಕು.
ಬಗೆಯಾಗಿದೆ: ಜಹಲ್ಲ ಕ್ಷಣೆ, ಅಜಹಲ್ಲಕ್ಷಣೆ, ಜಹದಜಹಲ್ಲ ಕ್ಷಣೆ.
 
ಲಕ್ಷಣೆಯು ಮೂರು
ವಾಚ್ಯಾರ್ಥವನ್ನು
 
ಬಿಟ್ಟು ಬೇರೆ ಅರ್ಥವನ್ನು ಹೇಳುವುದು
 
ಜಹಲ್ಲ ಕ್ಷಣೆಯು. 'ವಿಷವನ್ನು ತಿನ್ನು
 
ಎಂಬ ಉದಾಹರಣೆಯಲ್ಲಿ ಶತ್ರುವಿನ ಮನೆಯಲ್ಲಿ ಊಟಮಾಡಬಾರದು ಎಂಬ ಅರ್ಥ
ದಲ್ಲಿ ತಿನ್ನು' ಎಂಬ ಪ್ರಯೋಗವಿದೆ. ವಾಚ್ಯಾರ್ಥವನ್ನು ಬಿಡದೆ ಬೇರೆ ಅರ್ಥವನ್ನು
ಹೇಳುವುದು ಅಜಹಲ್ಲ ಕ್ಷಣೆ. 'ಬಿಳಿಯ (ಕುದುರೆ) ಓಡುತ್ತಿದೆ' ಎಂಬಲ್ಲಿ 'ಬಿಳಿಯ
ಎಂಬ ಅರ್ಥವನ್ನು ಬಿಡದೆ ಅದಕ್ಕೆ ಸಂಬಂಧಪಟ್ಟ ಕುದುರೆಯನ್ನು ಹೇಳಿದೆ.
ಮೂರನೆಯ ಲಕ್ಷಣದಲ್ಲಿ ಕೆಲವು ವಿರುದ್ಧ ಭಾಗಗಳನ್ನು ಬಿಟ್ಟು ಒಂದುಶವನ್ನು
ಉಳಿಸಿಕೊಳ್ಳಬೇಕು. ಮುಂದಿನ ಶ್ಲೋಕವನ್ನು ನೋಡಿ.