This page has been fully proofread once and needs a second look.

ಅಥ = ಈಗ, ಆತಃ = ಆದುದರಿಂದ, ಆದೇಶಃ = ನಿರ್ದೇಶವು, ಇತಿ = ಎಂಬ,
ಶ್ರುತಿಃ - ಉಪನಿಷದ್ವಾಕ್ಯವು, ಸ್ವಯಂ = ತಾನಾಗಿಯೇ, ಬ್ರಹ್ಮಣಿ = ಬ್ರಹ್ಮದಲ್ಲಿ,
ಕಲ್ಪಿತಂ = ಕಲ್ಪಿತವಾದ, ದ್ವಯಂ = ಎರಡು ಉಪಾಧಿಗಳನ್ನು, ನಿಷೇಧತಿ = ನಿಷೇಧಿಸು-
ತ್ತದೆ; ಶ್ರುತಿ-ಪ್ರಮಾಣ-ಅನುಗೃಹೀತ-ಬೋಧಾತ್ - ಶ್ರುತಿಪ್ರಮಾಣದಿಂದ ಅನು
ಗೃಹೀತವಾದ ಜ್ಞಾನದಿಂದ, ತಯೋಃ = ಅವೆರಡರ, ನಿರಾಸಃ = ತಿರಸ್ಕಾರವು
ಏವಮ್ = ಹೀಗೆ, ಕರಣೀಯಃ = ಮಾಡತಕ್ಕದ್ದು.
 
೨೪೫. 'ಈಗ ಆದುದರಿಂದ (ಬ್ರಹ್ಮದ) ನಿರ್ದೆಶ'[^೧] ಎಂಬ ಶ್ರುತಿಯು
ಬ್ರಹ್ಮದಲ್ಲಿ ಕಲ್ಪಿತವಾದ ಈ ಎರಡು ಉಪಾಧಿಗಳನ್ನು ತಾನೇ ನಿಷೇಧಿಸುತ್ತದೆ.
ಶ್ರುತಿವ್ರಮಾಣದಿಂದ ಅನುಗೃಹೀತವಾದ ಜ್ಞಾನದಿಂದ ಅವೆರಡನ್ನೂ[^೨] ಹೀಗೆ
ನಿರಾಸಮಾಡಬೇಕು.
 
[^೧] "'ಹೀಗಲ್ಲ ಹೀಗಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬).
[^೨]ಜೀವನ ಉಪಾಧಿಯಾದ ಪಂಚಕೋಶಗಳು, ಈಶ್ವರನ ಉಪಾಧಿಯಾದ
ಮಾಯೆ-ಇವೆರಡನ್ನೂ.]
 

ನೇದಂ ನೇದಂ ಕಲ್ಪಿತತ್ವಾನ್ನ ಸತ್ಯಂ
ರಜ್ಜು ದೃಷ್ಟ-ವ್ಯಾಲವತ್ ಸ್ವಪ್ನವಚ್ಚ ।
ಇತ್ಥಂ ದೃಶ್ಯಂ ಸಾಧುಯುಕ್ತ್ಯಾ ವ್ಯಪೋಹ್ಯ
ಜ್ಞೇಯಃ ಪಶ್ಚಾದೇಕಭಾವಸ್ತಯೋರ್ಯಃ ॥ ೨೪೬ ॥
 
ನ ಇದಂ = ಈ [ಮಾಯೆಯೂ] ಅಲ್ಲ, ನ ಇದಂ= ಈ [ಪಂಚಕೋಶವೂ]
ಅಲ್ಲ, ರಜ್ಜು -ದೃಷ್ಟ -ವ್ಯಾಲವತ್ = ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಸ್ವಪ್ನ-
ವತ್ ಚ = ಮತ್ತು ಕನಸಿನಂತೆಯೂ, ಕಲ್ಪಿತತ್ವಾತ್ = ಕಲ್ಪಿತವಾದುದರಿಂದ, ನ ಸತ್ಯಂ =
ಸತ್ಯವಾದುದಲ್ಲ; ಇತ್ಥಂ = ಹೀಗೆ, ದೃಶ್ಯಂ = ದೃಶ್ಯವಾದುದನ್ನು, ಸಾಧು -ಯುಕ್ತ್ಯಾ =
ಸರಿಯಾದ ಯುಕ್ತಿಯಿಂದ, ವ್ಯಪೋಹ್ಯ = ನಿರಾಕರಿಸಿ, ಪಶ್ಚಾತ್ ಅನಂತರ, ತಯೋಃ =
ಜೀವ-ಪರರಿಗೆ, ಏಕಭಾವಃ = ಐಕ್ಯವು, ಜ್ಞೇಯಃ = ತಿಳಿಯತಕ್ಕದ್ದು.
 
೨೪೬,. (ಆತ್ಮನು) ಈ (ಮಾಯೆಯೂ) ಅಲ್ಲ, ಈ (ಪಂಚಕೋಶವೂ)
ಅಲ್ಲ. (ಇವೆರಡೂ) ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಕನಸಿ-
ನಂತೆಯೂ ಕಲ್ಪಿತವಾಗಿರುವುದರಿಂದ ಸತ್ಯವಲ್ಲ. ಹೀಗೆ ದೃಶ್ಯವಾದ ಜಗತ್ತನ್ನು
ಸರಿಯಾದ ಯುಕ್ತಿಯಿಂದ ನಿರಾಕರಿಸಿ ಅನಂತರ ಈ ಜೀವ. -ಪರಮಾತ್ಮರಿಗೆ
ಐಕ್ಯವನ್ನು ತಿಳಿದುಕೊಳ್ಳಬೇಕು.