This page has been fully proofread once and needs a second look.

ತಯೋಃ = ಅವರಿಬ್ಬರಿಗೆ, [ತೋರುವ] ಅಯಂ ವಿರೋಧಃ = ಈ ವಿರೋಧವು,
ಉಪಾಧಿಕಲ್ಪಿತಃ = ಉಪಾಧಿಯಿಂದ ಕಲ್ಪಿತವಾಗಿರುತ್ತದೆ; ಏಷಃ ಕಶ್ಚಿತ್ ಉಪಾಧಿಃ =
ಈ ಯಾವ ಉಪಾಧಿಯೂ, ನ ವಾಸ್ತವಃ = ವಾಸ್ತವವಾದುದಲ್ಲ; ಶೃಣು = ಕೇಳು,
ಈಶಸ್ಯ = ಈಶ್ವರನಿಗೆ, ಮಹದಾದಿ-ಕಾರಣಂ = ಮಹತ್ ಮೊದಲಾದುವುಗಳಿಗೆ ಕಾರಣ
ವಾದ, ಮಾಯಾ = ಮಾಯೆಯೂ, ಜೀವಸ್ಯ = ಜೀವನಿಗೆ ಕಾರ್ಯ೦ = ಕಾರ್ಯ
ವಾದ, ಪಂಚಕೋಶಂ = ಪಂಚಕೋಶವೂ [ಉಪಾಧಿಯು].
 
೨೪೩. ಜೀವ ಪರಮಾತ್ಮರಿಗೆ ತೋರುವ ಈ ವಿರೋಧವು ಉಪಾಧಿ-
ಯಿಂದ ಕಲ್ಪಿತವಾಗಿರುತ್ತದೆ. ಈ ಯಾವ ಉಪಾಧಿಯೂ ವಾಸ್ತವವಾದು-
ದಲ್ಲ. ಕೇಳು, ಈಶ್ವರನಿಗೆ ಮಹತ್[^೧]ಮೊದಲಾದುವುಗಳಿಗೆ ಕಾರಣವಾದ
ಮಾಯೆಯೂ, ಜೀವನಿಗೆ ಕಾರ್ಯವಾದ ಪಂಚಕೋಶವೂ[^೨] (ಉಪಾಧಿಯು).
 
[^೧] ಇದು ಮಾಯೆಯ ಮೊದಲನೆಯ ಕಾರ್ಯ.
[^೨] ೧೨೫ನೆಯ ಶ್ಲೋಕದ ೨ನೆಯ ಟಿಪ್ಪಣಿಯನ್ನು ನೋಡಿ.]
 
ಏತಾವುಪಾಧೀ ಪರಜೀವಯೋಸ್ತಯೋಃ
ಸಮ್ಯಙ್ನಿರಾಸೇ ನ ಪರೋ ನ ಜೀವಃ ।
ರಾಜ್ಯಂ ನರೇಂದ್ರಸ್ಯ ಭಟಸ್ಯ ಖೇಟಕ-
ಸ್ತಯೋರಪೋಹೇ ನ ಭಟೋ ನ ರಾಜಾ ॥ ೨೪೪ ||
 
ತಯೋಃ ಪರ-ಜೀವಯೋಃ = ಆ ಪರಮಾತ್ಮ ಜೀವಾತ್ಮರಿಗೆ, ಏತೌ = ಈ
ಎರಡು, ಉಪಾಧೀ = ಉಪಾಧಿಗಳಾಗಿವೆ, [ಅವುಗಳ] ಸಮ್ಯಕ್ ನಿರಾಸೇ = ಚೆನ್ನಾಗಿ
ನಿರಾಸವಾದಾಗ, ಪರಃ ನ = ಈಶ್ವರನೂ ಅಲ್ಲ, ಜೀವಃ ನ = ಜೀವನೂ ಅಲ್ಲ; ನರೇಂದ್ರಸ್ಯ =
ರಾಜನಿಗೆ, ರಾಜ್ಯಂ = ರಾಜ್ಯವೂ, ಭಟಸ್ಯ = ಯೋಧನಿಗೆ, ಖೇಟಕಃ = ಗುರಾಣಿಯೂ
[ಉಪಾಧಿಗಳು]; ತಯೋಃ = ಅವುಗಳ, ಅಪೋಹೇ = ಪರಿತ್ಯಾಗವಾದಾಗ, ರಾಜಾ ನ =
ರಾಜನೂ ಅಲ್ಲ, ಭಟಃ ನ = ಯೋಧನೂ ಅಲ್ಲ.
 
೨೪೪, ಮಾಯೆ ಪಂಚಕೋಶ ಎಂಬ ಉಪಾಧಿಗಳನ್ನು ಚೆನ್ನಾಗಿ
ತಿರಸ್ಕರಿಸಿದರೆ ಈಶ್ವರನೂ ಅಲ್ಲ, ಜೀವನೂ ಅಲ್ಲ.
ರಾಜನಿಗೆ ರಾಜ್ಯವೂ
ಯೋಧನಿಗೆ ಗುರಾಣಿಯೂ ಉಪಾಧಿಗಳು; ಅವೆರಡೂ ಇಲ್ಲದಿದ್ದರೆ ರಾಜನೂ
ಅಲ್ಲ, ಯೋಧನೂ ಅಲ್ಲ.
 
ಅಥಾತ ಆದೇಶ ಇತಿ ಶ್ರುತಿಃ ಸ್ವಯಂ
ನಿಷೇಧತಿ ಬ್ರಹ್ಮಣಿ ಕಲ್ಪಿತಂ ದ್ವಯಮ್ ।
ಶ್ರುತಿ-ಪ್ರಮಾಣಾನುಗೃಹೀತ-ಬೋಧಾತ್
ತಯೋರ್ನಿರಾಸಃ ಕರಣೀಯ ಏವಮ್ !! || ೨೪೫ ॥