This page has not been fully proofread.

೧೨೮
 
ವಿವೇಕಚೂಡಾಮಣಿ
 
[೨೪೧
 
ಜ್ಞಾತೃಯ. ಜ್ಞಾನ-ಶೂನ್ಯಂ ಜ್ಞಾತೃ, ಜೈಂ ಯ-ಜ್ಞಾನ-ಶೂನ್ಯವೂ ಆನಂ.
ತಂ ಅನಂತವೂ ನಿರ್ವಿ ಕಲ್ಪ ಕಂ = ನಿರ್ವಿಶೇಷವೂ ಕೇವಲ ಅಖಂಡ. ಚಿನ್ಮಾತ್ರಂ-
ಕೇವಲ ಅಖಂಡ ಚಿನ್ಮಾತ್ರವೂ ಆದ ಪರಂ ತತ್ತ್ವ- ಪರತತ್ತ್ವವನ್ನು ಬುಧಾಃ -
ಜ್ಞಾನಿಗಳು ವಿದುಃ = ತಿಳಿಯುತ್ತಾರೆ.
 
೨೩೯. ಜ್ಞಾತೃಜೇಯ-ಜ್ಞಾನ ಎಂಬ ತ್ರಿಪುರಹಿತವಾದ ಅನಂತ
ವಾದ ನಿರ್ವಿಶೇಷವಾದ ಕೇವಲ ಅಖಂಡಚಿನ್ಮಾತ್ರವಾದ ಪರತತ್ತ್ವವನ್ನು
ಜ್ಞಾನಿಗಳು ತಿಳಿಯುತ್ತಾರೆ.
[೧ ಪರಿಚ್ಛೇದಗಳಿಲ್ಲದ.]
 
ಅಹೇಯಮನುಪಾದೇಯಂ
 
ಮನೋವಾಚಾಮಗೋಚರಮ್ ।
ಅಪ್ರಮೇಯಮನಾದ್ಯಂತಂ ಬ್ರಹ್ಮ ಪೂರ್ಣಮಹಂ ಮಹಃ ॥ ೨೪೦ ॥
 
ಅಹೇಯಂ- ಬಿಡತಕ್ಕದ್ದಲ್ಲ, ಅನುಪಾದೇಯಂ- ಗ್ರಹಿಸತಕ್ಕದ್ದಲ್ಲ, ಮನಃ-
ವಾಚಾಮ್. ಅಗೋಚರಮ್
- ವಾಲ್ಮನಸ್ಸುಗಳಿಗೆ ಗೋಚರಿಸತಕ್ಕದ್ದಲ್ಲ, ಅಪ್ಪ-
ಮೇಯಂ - ಅಳೆಯಲು ಅಶಕ್ಯವಾದುದು ಅನಾದಿ. ಅಂತಂ = ಆದ್ಯಂತಗಳಿಲ್ಲದ್ದು,
ಪೂರ್ಣ೦ = ಪೂರ್ಣವಾದದ್ದು, ಮಹಃ = ಮಹಾ ಜ್ಯೋತಿಯು [ಆದ] ಬ್ರಹ್ಮ
ಬ್ರಹ್ಮವು ಅಹಂ - ಪ್ರತ್ಯಗಾತ್ಮನು.
 
೨೪೦, ಬ್ರಹ್ಮವನ್ನು ಬಿಡುವುದಕ್ಕೆ ಆಗುವುದಿಲ್ಲ, ಗ್ರಹಿಸುವುದಕ್ಕೂ
ಆಗುವುದಿಲ್ಲ; ಅದು ವಾಲ್ಮನಸ್ಸುಗಳಿಗೆ ಗೋಚರಿಸದು, ಅಳತೆಗೆ ಮೀರಿದುದು,
ಆದಿ ಅಂತಗಳಿಲ್ಲದ್ದು, ಪೂರ್ಣವಾದದ್ದು, ತೇಜೋರೂಪವಾದದ್ದು ಮತ್ತು
ಪ್ರತ್ಯಗಾತ್ಮನಿಗಿಂತ ಭಿನ್ನವಲ್ಲ.
 
ತತ್-ತ್ವಂ-ಪದಾಭ್ಯಾಮಭಿಧೀಯಮಾನಯೋ-
ರ್ಬಹ್ಮಾತ್ಮನೋಃ ಶೋಧಿತಬೋರ್ಯದೀತಮ್ ।
ಶ್ರುತ್ಯಾ ತಯೋಸ್ತಮಸೀತಿ ಸಮ್ಮ-
ಗೇಕತ್ವಮೇವ ಪ್ರತಿಪಾದ್ಯತೇ ಮುಹುಃ ॥ ೨೪೧ ॥
ಐಕ್ಯಂ ತರ್ಲಕ್ಷಿತಯೋರ್ನ ವಾಚ್ಯಯೋ-
ರ್ನಿಗದ್ಯತೇಽಽವಿರುದ್ಧಧರ್ಮಿ ।
ಖದ್ಯೋತಭಾನ್ನೋರಿವ ರಾಜಭತ್ಯಯೋ
ಕೂಪಾಂಬುರಾಃ ಪರಮಾಣುಮೇರ್ವೊ
 
॥ ೨೪೨ ೧