This page has not been fully proofread.

೨೩೯]
 
ವಿವೇಕಚೂಡಾಮಣಿ
 
ಅತಃ ಪರಂ ಬ್ರಹ್ಮ ಸದದ್ವಿತೀಯಂ
ವಿಶುದ್ಧ-ವಿಜ್ಞಾನ-ಘನಂ ನಿರಂಜನಮ್ ।
ಪ್ರಶಾಂತವಾದ್ಯಂತ-ವಿಹೀನಮಕ್ಕಿಯಂ
ನಿರಂತರಾನಂದ-ರಸ-ಸ್ವರೂಪಮ್
 
೧೨೭
 
॥ ೨೩೭ ॥
 
ನಿರಸ್ತ-ಮಾಯಾಕೃತ-ಸರ್ವಭೇದಂ
ನಿತ್ಯಂ ಸುಖಂ ನಿಷ್ಕಲಮಪ್ರಮೇಯಮ್ ।
ಅರೂಪಮವ್ಯಕ್ತಮನಾ ಮವ್ಯಯಂ
ಜ್ಯೋತಿಃ ಸ್ವಯಂ ಕಿಂಚಿದಿದಂ ಚಕಾಸ್ತಿ ॥ ೨೩೮ ॥
 
ಆತಃ - ಆದುದರಿ೦ದ ಪರಂ ಬ್ರಹ್ಮ ಪರಬ್ರಹ್ಮವು ಸತ್ = ಸದ್ವಸ್ತುವು,
ಅದ್ವಿತೀಯಂ = ಅದ್ವಯವಾದುದು, ವಿಶುದ್ಧ ವಿಜ್ಞಾನ ಘನಂ = ವಿಶುದ್ಧವಾದ
ವಿಜ್ಞಾನಘನವು, ನಿರಂಜನಂ = ನಿರಂಜನವು, ಪ್ರಶಾಂತಂ = ಪ್ರಶಾಂತವು, ಆದಿ.
ಅಂತ ವಿಹೀನಂ = ಆದ್ಯಂತರಹಿತವು, ಅಕ್ರಿಯಂ - ಕ್ರಿಯಾಶೂನ್ಯವು, ನಿರಂತರ.
ಆನಂದ. ರಸಸ್ವರೂಪಂ= ನಿರಂತರವಾದ ಆನಂದರಸ- ಸ್ವರೂಪವು, ನಿರಸ್ತಮಾಯಾ
ಕೃತ. ಸರ್ವಭೇದಂ - ಮಾಯಾಕೃತವಾದ ಸರ್ವಭೇದರಹಿತವಾದುದು,
ನಿತ್ಯವು, ಸುಖಂ- ಸುಖಸ್ವರೂಪವು, ನಿಷ್ಕಲಂ=ಅವಯವರಹಿತವಾದದ್ದು,
ಮೇಯಂ ಪ್ರಮಾಣಾತೀತವಾದುದು, ಆರೂಪಂ ರೂಪರಹಿತವಾದುದು, ಅವ್ಯ.
ಕ - ಅವ್ಯಕ್ತವು, ಅನಾಖ್ಯಂ - ನಾಮರಹಿತವಾದುದು, ಅವ್ಯಯಂ
ರಹಿತವು [ಆದ] ಇದಂ ಕಿಂಚಿತ್ ಜ್ಯೋತಿಃ ಸ್ವಯಂ = ಯಾವುದೋ ಒಂದು
ಸ್ವಯಂಜ್ಯೋತಿಯು ಚಕಾಸ್ತಿ - ಪ್ರಕಾಶಿಸುತ್ತಿರುವುದು.
 
ನಿತ್ಯಂ -
ಅಪ್ರ.
 
ನಾಶ
 
೨೩೭-೨೩೮, ಆದುದರಿಂದ ಪರಬ್ರಹ್ಮವು ಸದ್ವಸ್ತುವಾದದ್ದು, ಅದ್ವಯ
ವಾದದ್ದು, ವಿಶುದ್ಧವಾದ ವಿಜ್ಞಾನಘನವಾದದ್ದು, ನಿರಂಜನವೂ ಪ್ರಶಾಂತವೂ
ಆದದ್ದು, ಆದ್ಯಂತರಹಿತವೂ ಕ್ರಿಯಾಶೂನ್ಯವೂ ಆದದ್ದು, ಯಾವಾಗಲೂ
ಆನಂದರಸದ ಸ್ವರೂಪವಾದದ್ದು, ಮಾಯಾಕೃತವಾದ ಯಾವ ಭೇದಗಳೂ
ಇಲ್ಲದ್ದು, ನಿತ್ಯವೂ ಸುಖಸ್ವರೂಪವೂ ಆದದ್ದು, ಅವಯವಗಳಿಲ್ಲದ್ದು,
ಪ್ರಮಾಣಾತೀತವಾದದ್ದು, ರೂಪವಿಲ್ಲದ್ದು, ಅವ್ಯಕ್ತವಾದದ್ದು, ನಾಮರಹಿತ
ವಾದದ್ದು, ನಾಶರಹಿತವಾದದ್ದು - ಇಂಥ ಯಾವುದೋ ಒಂದು ಸ್ವಯಂ
ಜ್ಯೋತಿಯು ಪ್ರಕಾಶಿಸುತ್ತಿರುವುದು.
 
ಜ್ಞಾತೃ-ಯ-ಜ್ಞಾನ-ಶೂನ್ಯಮನಂತಂ ನಿರ್ವಿಕಲ್ಪ ಕಮ್ ।
ಕೇವಲಾಖಂಡ-ಚಿನ್ಮಾತ್ರಂ ಪರಂ ತತ್ತ್ವಂ ವಿದುರ್ಬುಧಾಃ ॥ ೨೩೯ ॥