This page has been fully proofread once and needs a second look.

[^೨] ಅನಂತತ್ವವು ಹೋದರೆ ಸತ್ಯಂ ಜ್ಞಾನಮ್ ಅನಂತಂ ಬ್ರಹ್ಮ (ತೈತ್ತಿರೀಯ
ಉ. ೨. ೧) ಮೊದಲಾದ ವಾಕ್ಯಗಳು ಬಾಧಿತವಾಗುತ್ತವೆ.
[^೩] ಪರಮ ಆಪ್ತನೂ ಸರ್ವಜ್ಞನೂ ಆದ ಈಶ್ವರನ ಮಾತು ಸುಳ್ಳಾಗಕೂಡದು.]
 
ಈಶ್ವರೋ ವಸ್ತು ತತ್ತ್ವಜ್ಞೋ ನ ಚಾಹಂ ತೇಷ್ವವಸ್ಥಿತಃ ।
ನ ಚ ಮತ್ಸ್ಥಾನಿ ಭೂತಾನೀತ್ಯೇವಮೇವ ವ್ಯಚೀಕ್ಲೃಪತ್ || ೨೩೩ ॥
 
ವಸ್ತು ತತ್ತ್ವಜ್ಞಃ = ವಸ್ತುತತ್ತ್ವವನ್ನು ಬಲ್ಲ, ಈಶ್ವರಃ = ಈಶ್ವರನು- ಅಹಂ=
ನಾನು, ತೇಷು = ಅವುಗಳಲ್ಲಿ, ನ ಅವಸ್ಥಿತಃ = ಇರುವುದಿಲ್ಲ, ಚ ಭೂತಾನಿ =ಮತ್ತು
ಪ್ರಾಣಿಗಳು, ನ ಮತ್-ಸ್ಥಾನಿ = ನನ್ನಲ್ಲಿರುವುದಿಲ್ಲ, ಇತಿ = ಎಂದು, ಏವಮ್ ಏವ=
ಹೀಗೆಯೇ, ವ್ಯಚೀಕ್ಲೃಪತ್= ವ್ಯವಸ್ಥೆ ಮಾಡಿದ್ದಾನೆ.
 
೨೩೩. ವಸ್ತುತತ್ತ್ವವನ್ನು ಬಲ್ಲ ಈಶ್ವರನು 'ನಾನು ಅವುಗಳಲ್ಲಿ ಇಲ್ಲ',[^೧]
'ನನ್ನಲ್ಲಿ ಪ್ರಾಣಿಗಳು ಇರುವುದಿಲ್ಲ'[^೨] ಎಂದು ಹೀಗೆಯೇ ವ್ಯವಸ್ಥೆ ಮಾಡಿದ್ದಾನೆ.
[ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಲು ಭಗವದ್ಗೀತೆಯನ್ನೂ ಉದಾಹರಿಸಿದೆ.
[^೧] ಭಗವದ್ಗೀತಾ ೯.೪.
[^೨] ಭಗವದ್ಗೀತಾ ೯. ೫.]
 
ಯದಿ ಸತ್ಯಂ ಭವೇದ್ವಿಶ್ವಂ ಸುಷುಪ್ತಾವು ಪಲಭ್ಯತಾಮ್ ।
ಯನ್ನೋಪಲಭ್ಯತೇ ಕಿಂಚಿದತೋsಸತ್ ಸ್ವಪ್ನವನ್ಮೃಷಾ ॥ ೨೩೪ ॥
 
ವಿಶ್ವಂ=ವಿಶ್ವವು, ಸತ್ಯಂ ಭವೇತ್ ಯದಿ= ಸತ್ಯವಾಗಿರುವುದಾದರೆ, ಸುಷುಪ್ತೌ=
ಸುಷುಪ್ತಿಯಲ್ಲಿ, ಉಪಲಭ್ಯತಾಂ=ಗೋಚರವಾಗಲಿ; ಯತ್ =ಯಾವ ಕಾರಣದಿಂದ,
ಕಿಂಚಿತ್ = ಸ್ವಲ್ಪವೂ, ನ ಉಪಲಭ್ಯತೇ = ಗೋಚರಿಸುವುದಿಲ್ಲವೋ, ಅತಃ=ಆ ಕಾರಣ-
ದಿಂದಲೇ, ಅಸತ್ = ಅಸತ್ತೇ, ಸ್ವಪ್ನವತ್ = ಸ್ವಪ್ನದಂತೆ, ಮೃಷಾ = ಸುಳ್ಳು.
 
೨೩೪. ವಿಶ್ವವು ಸತ್ಯವಾಗಿರುವುದಾದರೆ ಸುಷುಪ್ತಿಯಲ್ಲಿ ಗೋಚರ-
ವಾಗಲಿ! ಅಲ್ಲಿ ಸ್ವಲ್ಪವೂ ಗೋಚರಿಸುವುದಿಲ್ಲವಾದುದರಿಂದ ಅದು ಅಸದ್ವ-
ಸ್ತುವೇ, ಸ್ವಪ್ನದಂತೆ ಸುಳ್ಳೇ.
 
ಅತಃ ಪೃಥ ಜಾಙ್ನಾಸ್ತಿ ಜಗತ್ ಪರಾತ್ಮನಃ
ಪೃಥಕ್ ಪ್ರತೀತಿಸ್ತು ಮೃಷಾ ಗುಣಾದಿವತ್ ।
ಆರೋಪಿತಸ್ಯಾಸ್ತಿ ಕಿಮರ್ಥವತ್ತಾಽ-
ಧಿಷ್ಠಾನಮಾಭಾತಿ ತಥಾ ಭ್ರಮೇಣ || ೨೩೫ ||