This page has not been fully proofread.

೧೨೪
 
ವಿವೇಕಚೂಡಾಮಣಿ
 
[೨೩೨
 
ಏಕೆಂದರೆ ಆರೋಪಿತಸ್ಯ - ಆರೋಪಿತವಾದ ವಸ್ತುವಿಗೆ ಅಧಿಷ್ಟಾನಾತ್ - ಆಶ್ರಯ
ಕ್ಕಿಂತಲೂ ಭಿನ್ನತಾ - ಪೃಥಗ್ಯಾವವು ನ - ಇಲ್ಲವು.
 
=
 
೨೩೧. 'ಈ ಜಗತ್ತೆಲ್ಲವೂ ಬ್ರಹ್ಮವೇ?" ಎಂದೇ ಅಥರ್ವಶಿರಸ್ಸಿನಲ್ಲಿರುವ
ಶ್ರೇಷ್ಠವಾದ ಶ್ರುತಿವಾಣಿಯು ಹೇಳುತ್ತಿರುವುದು. ಆದುದರಿಂದ ಈ ವಿಶ್ವವು
ಕೇವಲ ಬ್ರಹ್ಮವೇ; ಏಕೆಂದರೆ ಆರೋಪಿತವಾದ ವಸ್ತುವಿಗೆ ತನ್ನ ಆಶ್ರಯ
ಕ್ಕಿಂತಲೂ ಭಿನ್ನವಾದ ಅಸ್ತಿತ್ವವು ಇರಲಾರದು.
 
[೧ ಛಾಂದೋಗ್ಯಶ್ರುತಿಯ ಪ್ರಕಾರ ಹೇಳಿದ ಅರ್ಥವನ್ನೇ
ಸ್ಪಷ್ಟ ಪಡಿಸಿದೆ. ಬ್ರಹ್ಮವೇದಂ ವಿಶ್ವಮಿದಂ ವರಿಷ್ಠ
೨. ೧೨).
 
ಆಥರ್ವಣಿಕ ಶ್ರುತಿಯಿಂದ
(ಮುಂಡಕ ಉ.
 
೨.
 
೨ ಹಗ್ಗದಲ್ಲಿ ಆರೋಪಿಸಲ್ಪಟ್ಟ ಹಾವು ತನಗೆ ಆಶ್ರಯವಾಗಿರುವ ಹಗ್ಗಕ್ಕಿಂತ ಬೇರೆ
ಹಾಗೆಯೇ ಬ್ರಹ್ಮದಲ್ಲಿ ಆರೋಪಿತವಾಗಿರುವ ಪ್ರಪಂಚಕ್ಕೆ ಬ್ರಹ್ಮ
 
ಯಾಗಿರಲಾರದು.
 
ಕ್ಕಿಂತಲೂ ಬೇರೆ ಸ್ಥಿತಿಯು ಇರುವುದಿಲ್ಲ.]
 
ಸತ್ಯಂ ಯದಿ ಸ್ವಾಜ್ಜಗದೇತದಾತ್ಮನೋ "
ನಂತತ್ವ ಹಾನಿರ್ನಿಗಮಾಪ್ರಮಾಣತಾ ।
ಅಸತ್ಯವಾದಿತ್ವಮಸೀಶಿತುಃ ಸ್ಯಾ-
ನೈತಯಂ ಸಾಧು ಹಿತಂ ಮಹಾತ್ಮನಾಮ್ ॥ ೨೩೨ ।
 
ಏತತ್ ಜಗತ್ – ಈ ಜಗತ್ತು ಸತ್ಯಂ ಸ್ಯಾತ್ ಯದಿ ಸತ್ಯವಾಗುವು
ದಾದರೆ ಆತ್ಮನಃ ಆತ್ಮನ ಅನಂತತ್ವ ಹಾನಿ= ಅನಂತತ್ವಕ್ಕೆ ಹಾನಿಯುಂಟಾಗುತ್ತದೆ,
ನಿಗಮ. ಅಪ್ರಮಾಣತಾ ವೇದವು ಅಪ್ರಮಾಣವಾಗುವುದು, ಈಶಿತುಃ ಈಶ್ವರನಿಗೆ
ಅಸತ್ಯವಾದಿತ್ವ ಅಪಿ= ಅಸತ್ಯವಾದಿತ್ವವೂ ಕೂಡ ಸ್ಯಾತ್ = ಉಂಟಾಗುವುದು;
ಏತತ್ ತ್ರಯಂ - ಈ ಮೂರು ಮಹಾತ್ಮನಾಂ = ಮಹಾತ್ಮರಿಗೆ ಸಾಧು ಹಿತಂ
ನ = ಸಾಧುವೂ ಅಲ್ಲ, ಹಿತವೂ ಅಲ್ಲ.
 
P
 
೨೩೨. ಈ ಜಗತ್ತು ಸತ್ಯವಾಗುವುದಾದರೆ ಆತ್ಮನ ಅನಂತತ್ವಕ್ಕೆ ಹಾನಿ
ಯುಂಟಾಗುತ್ತದೆ, ಶಾಸ್ತ್ರವು ಅಪ್ರಮಾಣವಾಗುತ್ತದೆ. ಈಶ್ವರನು ಅಸತ್ಯ
ವನ್ನು ಹೇಳಿದವನಾಗುತ್ತಾನೆ. ಈ ಮೂರೂ ಮಹಾತ್ಮರಿಗೆ ಸಾಧುವೂ
ಅಲ್ಲ, ಹಿತವೂ ಅಲ್ಲ.
 
[ಇಲ್ಲಿ ಪ್ರಪಂಚವು ಅಸತ್ಯವೆಂದು ಯುಕ್ತಿಯ ಮೂಲಕವೂ ಸಾಧಿಸಿದೆ.
೧ ಜಗತ್ತಿನಿಂದ ಆತ್ಮನಿಗೆ ಪರಿಚ್ಛೇದವುಂಟಾಗುವುದರಿಂದ.