This page has been fully proofread once and needs a second look.

[^೬] ಆತ್ಮನಿಗೂ ಬ್ರಹ್ಮಕ್ಕೂ ಯಾವ ಭೇದವೂ ಇಲ್ಲ. 'ಈ ಆತ್ಮನು ಬ್ರಹ್ಮ'
ಆಯಮಾತಾ ಬ್ರಹ್ಮ (ಮಾಂಡೂಕ್ಯ ಉ. ೧. ೨).
[^೭] ಪಾಪಪುಣ್ಯಗಳಿಲ್ಲದವನು.
[^೮] 'ಮೃತ್ಯುರಹಿತನೂ ಶೋಕರಹಿತನೂ' ವಿಮೃತ್ಯುರ್ವಿಶೋಕಃ (ಛಾಂದೋಗ್ಯ
ಉ. ೮, ೭. ೧).
[^೯] 'ಅವನು ಯಾವುದಕ್ಕೂ ಹೆದರುವುದಿಲ್ಲ' ನ ಬಿಭೇತಿ ಕುತಶ್ಚನೇತಿ (ತೈತ್ತಿ-
ರೀಯ ಉ. ೨. ೯).]
 
ಬ್ರಹ್ಮಾಭಿನ್ನತ್ವವಿಜ್ಞಾನಂ ಭವಮೋಕ್ಷಸ್ಯ ಕಾರಣಮ್ ।
ಯೇನಾದ್ವಿತೀಯಮಾನಂದಂ ಬ್ರಹ್ಮ ಸಂಪದ್ಯತೇ ಬುಧೈಃ ॥ ೨೨೩ ॥
 
ಬ್ರಹ್ಮ-ಅಭಿನ್ನತ್ವ-ವಿಜ್ಞಾನಂ = ಬ್ರಹ್ಮ ಆತ್ಮಕಜ್ಞಾನವೇ, ಭವಮೋಕ್ಷಸ್ಯ =
ಸಂಸಾರಬಂಧದ ಬಿಡುಗಡೆಗೆ, ಕಾರಣಂ = ಕಾರಣವು; ಯೇನ = ಯಾವುದರಿಂದ
ಅದ್ವಿತೀಯಂ= ಅದ್ವಯವೂ, ಆನಂದಂ = ಆನಂದಸ್ವರೂಪವೂ ಆದ, ಬ್ರಹ್ಮ = ಬ್ರಹ್ಮವು
ಬುಧೈಃ = ಜ್ಞಾನಿಗಳಿಂದ, ಸಂಪದ್ಯತೇ = ಹೊಂದಲ್ಪಡುತ್ತದೆಯೊ.
 
೨೨೩. ಜೀವಾತ್ಮ ಪರಮಾತ್ಮ- ಇವರ ಐಕ್ಯಜ್ಞಾನವೇ[^೧] ಸಂಸಾರದಿಂದ
ಬಿಡುಗಡೆಯನ್ನು ಹೊಂದಲು ಕಾರಣವಾಗಿರುತ್ತದೆ. ಜ್ಞಾನಿಗಳು ಈ ಐಕ್ಯ
ಜ್ಞಾನದಿಂದಲೇ ಅನ್ವಯವೂ ಆನಂದಸ್ವರೂಪವೂ ಆದ ಬ್ರಹ್ಮವನ್ನು
ಸಾಕ್ಷಾತ್ಕರಿಸುತ್ತಾರೆ.
 
[^೧]'ನಾನೇ ಬ್ರಹ್ಮನಾಗಿದ್ದೇನೆ' ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕ ಉ.
೧. ೪. ೧೦).
 
ಬ್ರಹ್ಮಭೂತಸ್ತು ಸಂಸೃತ್ಯೈ ವಿದ್ವಾನ್ನಾವರ್ತತೇ ಪುನಃ ।
ವಿಜ್ಞಾತವ್ಯಮತಃ ಸಮ್ಯಗ್ಬ್ರಹ್ಮಾಭಿನ್ನತ್ವಮಾತ್ಮನಃ ॥ ೨೨೪ ॥
 
ತು = ಆದರೆ, ಬ್ರಹ್ಮಭೂತಃ = ಬ್ರಹ್ಮಸ್ವರೂಪನಾದ, ವಿದ್ವಾನ್ = ಜ್ಞಾನಿಯು,
ಸಂಸೃತ್ಯೈ = ಸಂಸಾರಕ್ಕೆ, ಪುನಃ = ಮತ್ತೆ, ನ ಆವರ್ತತೇ = ಬರುವುದಿಲ್ಲ; ಅತಃ =
ಆದುದರಿಂದ, ಆತ್ಮನಃ = ತನ್ನ, ಬ್ರಹ್ಮ-ಅಭಿನ್ನತ್ವಂ = ಬ್ರಹ್ಮೈಕ್ಯವು, ಸಮ್ಯಕ್ =
ಚೆನ್ನಾಗಿ, ವಿಜ್ಞಾತವ್ಯಂ = ತಿಳಿಯಲ್ಪಡತಕ್ಕದ್ದು.
 
೨೨೪, ಆದರೆ ಬ್ರಹ್ಮಸ್ವರೂಪನಾದ ಜ್ಞಾನಿಯು ಪುನಃ ಸಂಸಾರಕ್ಕೆ
ಬರುವುದಿಲ್ಲ.[^೧] ಆದುದರಿಂದ ತಾನು ಬ್ರಹ್ಮಕ್ಕಿಂತ ಬೇರೆಯಲ್ಲವೆಂಬುದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕು.
 
[^೧] 'ಅವನು ಹಿಂತಿರುಗುವುದಿಲ್ಲ' ನ ಚ ಪುನರಾವರ್ತ (ಛಾಂದೋಗ್ಯ ಉ.
೮. ೧೫. ೧). ]