This page has been fully proofread once and needs a second look.



ಮೂಢಧೀಃ = ಮೂಢಬುದ್ಧಿ ಯುಳ್ಳ, ಯಃ ತು = ಯಾವನು, ದುರ್ಲಭಂ=
ದುಃಸಾಧ್ಯವಾದ, ನರಜನ್ಮ = ಮನುಷ್ಯ ಜನ್ಮವನ್ನು, ಕಥಂಚಿತ್ - ಹೇಗೋ, ಲಬ್ಧ್ವಾ=
ಪಡೆದು, ತತ್ರ = ಅದರಲ್ಲಿಯೂ, ಪುಂಸ್ತ್ವಂ=ಪುರುಷತ್ವವನ್ನು, ಶ್ರುತಿ ಪಾರದರ್ಶನಂ=
ವೇದಪ್ರವೀಣತೆಯನ್ನು, [ಲಬ್ಧ್ವಾ] ಅಪಿ=ಹೊಂದಿದ್ದರೂ, ಆತ್ಮಮುಕ್ತೌ = ತನ್ನ
ಮೋಕ್ಷದ ವಿಷಯದಲ್ಲಿ, ನ ಯತೇತ=ಪ್ರಯತ್ನ ಪಡುವುದಿಲ್ಲವೊ ಸಃ = ಅವನು
ಆತ್ಮಹಾ=ಆತ್ಮಹತ್ಯವನ್ನು ಮಾಡಿಕೊಂಡವನು; ಹಿ=ಏಕೆಂದರೆ, ಅಸದ್-ಗ್ರಹಾತ್=
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರಿಂದ, ಸ್ವಂ=ತನ್ನನ್ನು, ವಿನಿಹಂತಿ=ಕೊಂದು-
ಕೊಳ್ಳುತ್ತಾನೆ.
 
೪. ದುಃಸಾಧ್ಯವಾದ ಮನುಷ್ಯ ಜನ್ಮವನ್ನು ಹೇಗೋ ಪಡೆದುಕೊಂಡು,
ಅದರಲ್ಲಿಯೂ ಪುರುಷತ್ವವನ್ನು ಮತ್ತು ವೇದಪ್ರವೀಣತೆಯನ್ನು ಹೊಂದಿ-
ದ್ದರೂ ಮೂಢಬುದ್ಧಿಯುಳ್ಳ ಯಾವ ಮನುಷ್ಯನು ತನ್ನ ಮೋಕ್ಷಕ್ಕಾಗಿ
ಪ್ರಯತ್ನಿಸುವುದಿಲ್ಲವೊ ಅವನು ಆತ್ಮಹತ್ಯಕಾರನು;[^೧] ಏಕೆಂದರೆ ಅವನು
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರ ದಶೆಯಿಂದ[^೨] ತನ್ನನ್ನು ಕೊಂದು-
ಕೊಳ್ಳುತ್ತಾನೆ.
 
[^] ಮನುಷ್ಯ ಜನ್ಮ, ಪುರುಷತ್ವ, ವೇದಪ್ರಾವೀಣ್ಯ ಇವುಗಳಿದ್ದರೂ ಮನುಷ್ಯನು
ಮೋಕ್ಷವಾಸನೆಯಿಲ್ಲದೆ ವಿಷಯಿಯಾಗಿರಬಹುದು.
[^] ಅನಾತ್ಮವಸ್ತುಗಳನ್ನು ನಿತ್ಯವೆಂದು ನಂಬಿ ಅವುಗಳಲ್ಲಿ ಆತ್ಮಭಾವನೆಯನ್ನಿಡು-
ವುದು ಆತ್ಮಹತ್ಯವೇ ಸರಿ.]
 
ಇತಃ ಕೋ ನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ ।
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಮ್ ॥ ೫ ॥
 
ಯಃ ತು=ಯಾವನು, ದುರ್ಲಭಂ=ದುಃಖಸಾಧ್ಯವಾದ, ಮಾನುಷಂ=
ಮನುಷ್ಯ ಸಂಬಂಧವಾದ, ದೇಹಂ=ಶರೀರವನ್ನು, ಪ್ರಾಪ್ಯ=ಪಡೆದು, ತತ್ರ ಅಪಿ=
ಅದರಲ್ಲಿಯೂ, ಪೌರುಷಂ=ಪುರುಷ ಸಂಬಂಧವಾದುದನ್ನು [ಹೊಂದಿ], ಸ್ವಾರ್ಥೇ=
ಸ್ವಪ್ರಯೋಜನದಲ್ಲಿ, ಮೋಕ್ಷದಲ್ಲಿ ಪ್ರಮಾತಿ=ಅಸಡ್ಡೆ ಮಾಡುತ್ತಾನೆಯೊ, ಇತಃ=
ಇವನಿಗಿಂತಲೂ, ಮೂಢಾತ್ಮಾ=ಅವಿವೇಕಿಯು, ಕಃ ನು ಅಸ್ತಿ=ಯಾವನಿರುವನು?
 
೫. ದುರ್ಲಭವಾದ ಮನುಷ್ಯ ಶರೀರವನ್ನು, ಅದರಲ್ಲಿಯೂ ಪುರುಷ
ಶರೀರವನ್ನು ಪಡೆದು ಮೋಕ್ಷ ವಿಷಯದಲ್ಲಿ ಯಾವನು ಅಸಡ್ಡೆ ಮಾಡು-
ತಾನೆಯೋ ಅವನಿಗಿಂತಲೂ ಅವಿವೇಕಿಯಾದವನು ಯಾವನಿರುವನು?[^೧]
 
[^] ಆದುದರಿಂದ ಸರ್ವ ಪ್ರಕಾರದಿಂದಲೂ ಮೋಕ್ಷಕ್ಕಾಗಿ ಪ್ರಯತ್ನಿಸಬೇಕು.