This page has not been fully proofread.

ವಿವೇಕಚೂಡಾಮಣಿ
 
ಮೂಢಧೀಃ = ಮೂಢಬುದ್ಧಿ ಯುಳ್ಳ ಯಃ ತು - ಯಾವನು ದುರ್ಲಭಂ=
ದುಃಸಾಧ್ಯವಾದ ನರಜನ್ಮ = ಮನುಷ್ಯ ಜನ್ಮವನ್ನು ಕಥಂಚಿತ್ - ಹೇಗೋ ಲಬ್ದಾ
ಪಡೆದು, ತತ್ರ - ಅದರಲ್ಲಿಯೂ ಪುಂಸ್ಕೃ- ಪುರುಷತ್ವವನ್ನು ಶ್ರುತಿ ಪಾರದರ್ಶನಂ-
ವೇದಪ್ರವೀಣತೆಯನ್ನು [ಲಬ್ಬಾ) ಅಪಿ- ಹೊಂದಿದ್ದರು ರೂ ಆತ್ಮಮುಕ್ತ - ತನ್ನ
ಮೋಕ್ಷದ ವಿಷಯದಲ್ಲಿ ನ ಯತೇತ ಪ್ರಯತ್ನ ಪಡುವುದಿಲ್ಲವೋ ಸಃ - ಅವನು
ಆತ್ಮಹಾ ಆತ್ಮಹತ್ಯವನ್ನು ಮಾಡಿಕೊಂಡವನು; ಹಿ-ಏಕೆಂದರೆ ಅಸದ್-ಗ್ರಹಾತ್
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರಿಂದ ಸ್ವಂ- ತನ್ನನ್ನು ವಿನಿಹಂತಿ ಕೊಂದು
ಕೊಳ್ಳುತ್ತಾನೆ.
 
೫]
 
3
 
೪. ದುಃಸಾಧ್ಯವಾದ ಮನುಷ್ಯ ಜನ್ಮವನ್ನು ಹೇಗೆ ಪಡೆದುಕೊಂಡು,
ಅದರಲ್ಲಿಯೂ ಪುರುಷತ್ವವನ್ನು ಮತ್ತು ವೇದಪ್ರವೀಣತೆಯನ್ನು ಹೊಂದಿ
ದ್ದರೂ ಮೂಢಬುದ್ಧಿಯುಳ್ಳ ಯಾವ ಮನುಷ್ಯನು ತನ್ನ ಮೋಕ್ಷಕ್ಕಾಗಿ
ಪ್ರಯತ್ನಿಸುವುದಿಲ್ಲವೋ ಅವನು ಆತ್ಮಹತ್ಯಕಾರನು; ಏಕೆಂದರೆ ಅವನು
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರ ದಶೆಯಿಂದ ತನ್ನನ್ನು ಕೊಂದು
ಕೊಳ್ಳುತ್ತಾನೆ.
 
[೧ ಮನುಷ್ಯ ಜನ್ಮ, ಪುರುಷತ್ವ, ವೇದಪ್ರಾವೀಣ್ಯ ಇವುಗಳಿದ್ದರೂ ಮನುಷ್ಯನು
ಮೋಕ್ಷವಾಸನೆಯಿಲ್ಲದೆ ವಿಷಯಿಯಾಗಿರಬಹುದು.
 

 
- ಅನಾತ್ಮವಸ್ತುಗಳನ್ನು ನಿತ್ಯವೆಂದು ನಂಬಿ ಅವುಗಳಲ್ಲಿ ಆತ್ಮಭಾವನೆಯನ್ನಿಡು
ವುದು ಆತ್ಮಹತ್ಯವೇ ಸರಿ.]
 
ಇತಃ ಕೋ ನೈಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥ ಪ್ರಮಾತಿ ।
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಮ್ ॥ ೫ ॥
 
ಯಃ ತು- ಯಾವನು ದುರ್ಲಭಂ - ದುಃಖಸಾಧ್ಯವಾದ ಮಾನುಷಂ
ಮನುಷ್ಯ ಸಂಬಂಧವಾದ ದೇಹಂ - ಶರೀರವನ್ನು ಪ್ರಾಪ್ಯ - ಪಡೆದು, ತತ್ರ ಅಪಿ -
ಅದರಲ್ಲಿಯೂ ಪೌರುಷಂ = ಪುರುಷ ಸಂಬಂಧವಾದುದನ್ನು [ಹೊಂದಿ], ಸ್ವಾರ್ಥ -
ಸ್ವಪ್ರಯೋಜನದಲ್ಲಿ, ಮೋಕ್ಷದಲ್ಲಿ ಪ್ರಮಾತಿ ಅಸಡ್ಡೆ ಮಾಡುತ್ತಾನೆಯೊ ಇತಃ -
ಇವನಿಗಿಂತಲೂ ಮೂಢಾತ್ಮಾ- ಅವಿವೇಕಿಯು ಈ ನು ಅಸ್ತಿ - ಯಾವನಿರುವನು?
 
೫. ದುರ್ಲಭವಾದ ಮನುಷ್ಯ ಶರೀರವನ್ನು, ಅದರಲ್ಲಿಯೂ ಪುರುಷ
ಶರೀರವನ್ನು ಪಡೆದು ಮೋಕ್ಷ ವಿಷಯದಲ್ಲಿ ಯಾವನು ಅಸಡ್ಡೆ ಮಾಡು
ತಾನೆಯೋ ಅವನಿಗಿಂತಲೂ ಅವಿವೇಕಿಯಾದವನು ಯಾವನಿರುವನು? ೧
[೧ ಆದುದರಿಂದ ಸರ್ವ ಪ್ರಕಾರದಿಂದಲೂ ಮೋಕ್ಷಕ್ಕಾಗಿ ಪ್ರಯತ್ನಿಸಬೇಕು.