This page has been fully proofread once and needs a second look.

ತ್ತಾನೆಯೊ, ಸದಾ = ಯಾವಾಗಲೂ, ಅಹಮ್ ಅಹಮ್ ಇತಿ = 'ನಾನು, ನಾನು' ಎಂದು,
ಏಕಧಾ = ಒಂದೇ ವಿಧವಾಗಿ, ಪ್ರತ್ಯಗ್ ರೂಪತಯಾ = ಪ್ರತ್ಯಗಾತ್ಮಸ್ವರೂಪದಿಂದ,
ಅಂತಃ = ಒಳಗೆ, ಸ್ಪುಫುರನ್ = ಪ್ರಕಾಶಿಸುವವನಾಗಿ, ನಾನಾ -ಆಕಾರ. -ವಿಕಾರ-ಭಾಗಿನಃ =
ನಾನಾ ವಿಧವಾದ ಆಕಾರಗಳನ್ನೂ ವಿಕಾರಗಳನ್ನೂ ಹೊಂದುತ್ತಿರುವ, ಅಹಂ-ಧೀ- ಮು-
ಖಾನ್ ಇಮಾನ್ = ಅಹಂಕಾರ ಬುದ್ಧಿ
ಮೊದಲಾದ ಇವುಗಳನ್ನು, ಪಶ್ಯನ್ = ನೋಡು-
ವವನಾಗಿ, ನಿತ್ಯಾನಂದ-ಚಿದಾತ್ಮನಾ = ನಿತ್ಯಾನಂದ- ಜ್ಞಾನರೂಪದಿಂದ, ಸ್ಪುಫುರತಿ =
ಪ್ರಕಾಶಿಸುತ್ತಿರುವನೋ, ತವ ಏತಂ = ಅಂಥ ಇವನನ್ನೇ, ಹೃದಿ= ಹೃದಯದಲ್ಲಿ ಸ್ವಂ
ಆತ್ಮನನ್ನಾಗಿ, ವಿದ್ಧಿ = ತಿಳಿದುಕೊ.
 
೨೧೭. ಯಾವ ಇವನು ಜಾಗ್ರತ್ -ಸ್ವಪ್ನ -ಸುಷುಪ್ತಿಗಳಲ್ಲಿ ಸ್ಪುಫುಟವಾಗಿ
ವ್ಯಕ್ತವಾಗುತ್ತಾನೆಯೊ, ಯಾವಾಗಲೂ 'ನಾನು, ನಾನು' ಎಂದು ಒಂದೇ
ವಿಧವಾಗಿ ಪ್ರತ್ಯಗಾತ್ಮಸ್ವರೂಪದಿಂದ ಒಳಗೆ ಪ್ರಕಾಶಿಸುತ್ತ, ನಾನಾ ವಿಧ-
ವಾದ ಆಕಾರಗಳನ್ನೂ ವಿಕಾರಗಳನ್ನೂ ಹೊಂದುತ್ತಿರುವ ಅಹಂಕಾರ ಬುದ್ಧಿ
ಮೊದಲಾದುವುಗಳನ್ನು ನೋಡುತ್ತ, ನಿತ್ಯಾನಂದಜ್ಞಾನರೂಪದಿಂದ ಪ್ರಕಾ-
ಶಿಸುತ್ತಿರುವನೋ ಅಂಥ ಇವನನ್ನೇ ಹೃದಯದಲ್ಲಿರುವ ನಿನ್ನ ಆತ್ಮನೆಂದು
ತಿಳಿದುಕೊ.
 
([ಹಿಂದಿನ ಶ್ಲೋಕದಲ್ಲಿ ಹೇಳಿರುವ ಅರ್ಥವನ್ನೇ ಇಲ್ಲಿ ವಿವರಿಸಿದೆ.]
 
ಘಟೋದಕೇ ಬಿಂಬಿತಮರ್ಕಬಿಂಬ-
ಮಾಲೋಕ್ಯ ಮೂಢ ರವಿಮೇವ ಮನ್ಯತೇ ।
ತಥಾ ಚಿದಾಭಾಸಮುಪಾಧಿ-ಸಂಸ್ಥಂ
ಭ್ರಾಂತ್ಯಾಽಹಮಿತ್ಯೇವ ಜಡೋಽಭಿಮನ್ಯತೇ ॥ ೨೧೮ ॥
 
ಮೂಢಃ = ಮೂಢನಾದವನು, ಘಟೋದಕೇ = ಗಡಿಗೆಯ ನೀರಿನಲ್ಲಿ, ಬಿಂಬಿತಂ =
ಪ್ರತಿಬಿಂಬಿಸಿರುವ, ಅರ್ಕಬಿಂಬಂ = ಸೂರ್ಯಬಿಂಬವನ್ನು, ಆಲೋಕ್ಯ = ನೋಡಿ,
ರವಿಮ್ ಏವ = ಸೂರ್ಯನೆಂದೇ, ಮನ್ಯತೇ = ಭಾವಿಸುತ್ತಾನೆ; ತಥಾ = ಹಾಗೆಯೇ,
ಜಡಃ = ಅಜ್ಞಾನಿಯು, ಉಪಾಧಿ -ಸಂಸ್ಥಂ = ಉಪಾಧಿಯಲ್ಲಿ ಪ್ರತಿಬಿಂಬಿಸಿರುವ, ಚಿದಾ-
ಭಾಸಂ = ಚಿತ್ ಪ್ರತಿಬಿಂಬವನ್ನು, ಭ್ರಾಂತ್ಯಾ = ಅವಿವೇಕದಿಂದ, ಅಹಮ್ ಇತಿ ಏವ =
'ನಾನು' ಎಂದೇ, ಅಭಿಮನ್ಯತೇ = ಅಭಿಮಾನಪಡುತ್ತಾನೆ.
 
೨೧೮. ಮೂಢನು ಗಡಿಗೆಯ ನೀರಿನಲ್ಲಿ ಪ್ರತಿಬಿಂಬಿಸಿರುವ ಸೂರ್ಯ
ಬಿಂಬವನ್ನು ನೋಡಿ ಅದನ್ನು ಸೂರ್ಯನೆಂದೇ ಭಾವಿಸುತ್ತಾನೆ; ಹಾಗೆಯೇ
ಅಜ್ಞಾನಿಯು (ಬುದ್ಧಿಯೆ ಮೊದಲಾದ) ಉಪಾಧಿಯಲ್ಲಿ ಪ್ರತಿಬಿಂಬಿಸಿರುವ
ಚಿತ್ -ಪ್ರತಿಬಿಂಬವನ್ನು 'ನಾನು' ಎಂದೇ ತಿಳಿಯುತ್ತಾನೆ.