This page has not been fully proofread.

ವಿವೇಕಚೂಡಾಮಣಿ
 
೨೧೮]
 
ತ್ತಾನೆಯೊ, ಸದಾ = ಯಾವಾಗಲೂ, ಅಹಮ್ ಅಹಮ್ ಇತಿ = 'ನಾನು, ನಾನು' ಎಂದು
,
ಏಕಧಾ = ಒಂದೇ ವಿಧವಾಗಿ, ಪ್ರತ್ಯಗ್ ರೂಪತಯಾ -= ಪ್ರತ್ಯಗಾತ್ಮಸ್ವರೂಪದಿಂದ
,
ಅಂತಃ = ಒಳಗೆ, ಸ್ಪುರನ್ -= ಪ್ರಕಾಶಿಸುವವನಾಗಿ, ನಾನಾ ಆಕಾರ. ವಿಕಾರ-ಭಾಗಿನಃ-
=
ನಾನಾ ವಿಧವಾದ ಆಕಾರಗಳನ್ನೂ ವಿಕಾರಗಳನ್ನೂ ಹೊಂದುತ್ತಿರುವ, ಅಹಂ.-ಧೀ.- ಮು
-
ಖಾನ್ ಇಮಾನ್ = ಅಹಂಕಾರ ಬು ಬುದ್ಧಿ

ಮೊದಲಾದ ಇವುಗಳನ್ನು, ಪಶ್ಯನ್ -= ನೋಡು

ವವನಾಗಿ, ನಿತ್ಯಾನಂದ- ಚಿದಾತ್ಮನಾ -= ನಿತ್ಯಾನಂದ- ಜ್ಞಾನರೂಪದಿಂದ, ಸ್ಪುರತಿ =

ಪ್ರಕಾಶಿಸುತ್ತಿರುವನೋ, ತವ ಏತಂ = ಅಂಥ ಇವನನ್ನೇ, ಹೃದಿ= ಹೃದಯದಲ್ಲಿ ಸ್ವಂ

ಆತ್ಮನನ್ನಾಗಿ ನಿ, ವಿದ್ದಿ -ಧಿ = ತಿಳಿದುಕೊ
 
೧೧೭
 
.
 
೨೧೭. ಯಾವ ಇವನು ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲಿ ಸ್ಪುಟವಾಗಿ

ವ್ಯಕ್ತವಾಗುತ್ತಾನೆಯೊ, ಯಾವಾಗಲೂ 'ನಾನು, ನಾನು' ಎಂದು ಒಂದೇ

ವಿಧವಾಗಿ ಪ್ರತ್ಯಗಾತ್ಮಸ್ವರೂಪದಿಂದ ಒಳಗೆ ಪ್ರಕಾಶಿಸುತ್ತ, ನಾನಾ ವಿಧ

ವಾದ ಆಕಾರಗಳನ್ನೂ ವಿಕಾರಗಳನ್ನೂ ಹೊಂದುತ್ತಿರುವ ಅಹಂಕಾರ ಬುದ್ಧಿ

ಮೊದಲಾದುವುಗಳನ್ನು ನೋಡುತ್ತ, ನಿತ್ಯಾನಂದಜ್ಞಾನರೂಪದಿಂದ ಪ್ರಕಾ

ಶಿಸುತ್ತಿರುವನೋ ಅಂಥ ಇವನನ್ನೇ ಹೃದಯದಲ್ಲಿರುವ ನಿನ್ನ ಆತ್ಮನೆಂದು
 

ತಿಳಿದುಕೊ.
 

 
(ಹಿಂದಿನ ಶ್ಲೋಕದಲ್ಲಿ ಹೇಳಿರುವ ಅರ್ಥವನ್ನೇ ಇಲ್ಲಿ ವಿವರಿಸಿದೆ.
 

 
ಘಟೋದಕೇ ಬಿಂಬಿತಮರ್ಕಬಿಂಬ-

ಮಾಲೋಕ್ಯ ಮೂಢ ರವಿಮೇವ ಮನ್ಯತೇ ।

ತಥಾ ಚಿದಾಭಾಸಮುಪಾಧಿ-ಸಂಸ್ಥಂ

ಭ್ರಾಂತ್ಯಾsಹಮಿತ್ಯೇವ ಜಡೋsಭಿಮನ್ಯತೇ ॥ ೨೧೮
 

 
ಮೂಢಃ- = ಮೂಢನಾದವನು, ಘಟೋದಕೇ = ಗಡಿಗೆಯ ನೀರಿನಲ್ಲಿ, ಬಿಂಬಿತಂ
=
ಪ್ರತಿಬಿಂಬಿಸಿರುವ, ಅರ್ಕಬಿಂಬಂ -= ಸೂರ್ಯಬಿಂಬವನ್ನು, ಆಲೋಕ -ಕ್ಯ = ನೋಡಿ
,
ರವಿಮ್ ಏವ = ಸೂರ್ಯನೆಂದೇ, ಮನ್ಯತೇ = ಭಾವಿಸುತ್ತಾನೆ; ತಥಾ -= ಹಾಗೆಯೇ
,
ಜಡಃ = ಅಜ್ಞಾನಿಯು, ಉಪಾಧಿ ಸಂಸ್ಥಂ = ಉಪಾಧಿಯಲ್ಲಿ ಪ್ರತಿಬಿಂಬಿಸಿರುವ, ಚಿದಾ

ಭಾಸಂ = ಚಿತ್ ಪ್ರತಿಬಿಂಬವನ್ನು, ಭ್ರಾಂತ್ಯಾ- = ಅವಿವೇಕದಿಂದ, ಅಹಮ್ ಇತಿ ಏವ
=
'ನಾನು' ಎಂದೇ, ಅಭಿಮನ್ಯತೇ = ಅಭಿಮಾನಪಡುತ್ತಾನೆ.
 

 
೨೧೮. ಮೂಢನು ಗಡಿಗೆಯ ನೀರಿನಲ್ಲಿ ಪ್ರತಿಬಿಂಬಿಸಿರುವ ಸೂರ್ಯ

ಬಿಂಬವನ್ನು ನೋಡಿ ಅದನ್ನು ಸೂರ್ಯನೆಂದೇ ಭಾವಿಸುತ್ತಾನೆ; ಹಾಗೆಯೇ

ಅಜ್ಞಾನಿಯು (ಬುದ್ಧಿಯೆ ಮೊದಲಾದ) ಉಪಾಧಿಯಲ್ಲಿ ಪ್ರತಿಬಿಂಬಿಸಿರುವ

ಚಿತ್ ಪ್ರತಿಬಿಂಬವನ್ನು 'ನಾನು' ಎಂದೇ ತಿಳಿಯುತ್ತಾನೆ.