This page has been fully proofread once and needs a second look.

ತತ್ಸಾಕ್ಸಿಷಿಕಂ ಭವೇತ್ ತತ್ತದ್ ಯದ್ಯದ್ ಯೇನಾನುಭೂಯತೇ ।
ಕಸ್ಯಾಪ್ಯನನುಭೂತಾರ್ಥೇ ಸಾಕ್ಷಿತ್ವಂ ನೋಪಯುಜ್ಯತೇ ॥ ೨೧೫ ॥
 
ಯತ್ ಯತ್ =ಯಾವಯಾವುದು, ಯೇನ = ಯಾವನಿಂದ, ಅನುಭೂ-
ಯತೇ = ಅನುಭವಿಸಲ್ಪಡುತ್ತದೆಯೊ,
ತತ್ ತತ್ = ಅದದು, ತತ್-ಸಾಕ್ಸಿಷಿಕಂ
ಭವೇತ್ = ಆಯಾ ಸಾಕ್ಷಿಯುಳ್ಳದ್ದಾಗುವುದು; ಅನನುಭೂತಾರ್ಥೇ = ಅನುಭವಿಸ-
ಲ್ಪಡದಿರುವ ವಿಷಯದಲ್ಲಿ, ಕಸ್ಯ ಅಪಿ = ಯಾವನಿಗೂ, ಸಾಕ್ಷಿತ್ವಂ = ಸಾಕ್ಷಿತ್ವವು,
ಉಪಯುಜ್ಯತೇ = ಉಪಯುಕ್ತವಾಗುವುದಿಲ್ಲ.
 
೨೧೫. ಯಾವಯಾವನು ಯಾವಯಾವುದನ್ನು ಅನುಭವಿಸುತ್ತಾನೆಯೊ
ಅದದಕ್ಕೆ ಅವನೇ ಸಾಕ್ಷಿಯಾಗಿರುತ್ತಾನೆ. ವಿಷಯಗಳು ಅನುಭವಿಸಲ್ಪಡ-
ದಿದ್ದರೆ ಯಾವನಿಗೂ ಸಾಕ್ಷಿತ್ವವು ಸಂಭವಿಸುವುದಿಲ್ಲ.
 
ಅಸೌ ಸ್ವಸಾಕ್ಷಿ ಕೊಕೋ ಭಾವೋ ಯತಃ ಸೈನಾನುಭೂಯತೇ ।
ಅತಃ ಪರಂ ಸ್ವಯಂ ಸಾಕ್ಷಾತ್ ಪ್ರತ್ಯಗಾತ್ಮಾನ ಚೇತರಃ ॥ ೨೧೬ ॥
 
ಅಸೌ ಭಾವಃ = ಈ ಆತ್ಮನು, ಸ್ವಸಾಕ್ಷಿಕಃ = ತನಗೆ ತಾನೇ ಸಾಕ್ಷಿಯಾಗಿರು-
ತ್ತಾನೆ; ಯತಃ = ಏಕೆಂದರೆ, ಸ್ವೇನ = ತನ್ನಿಂದಲೇ, ಅನುಭೂಯತೇ = ಅನುಭವಿಸ-
ಲ್ಪಡುತ್ತಾನೆ; ಅತಃ = ಆದುದರಿಂದ, ಪ್ರತ್ಯಗಾತ್ಮಾ= ಪ್ರತ್ಯಗಾತ್ಮನು, ಸ್ವಯಂ =
ತಾನೇ, ಸಾಕ್ಷಾತ್ = ಸಾಕ್ಷಾತ್ತಾಗಿ, ಪರಂ = ಪರಬ್ರಹ್ಮ, ನ ಚ ಇತರಃ = ಇನ್ನೊಬ್ಬನಲ್ಲ.
 
೨೧೬,. ಈ ಆತ್ಮನು ತನಗೆ ತಾನೇ ಸಾಕ್ಷಿಯಾಗಿರುತ್ತಾನೆ, ಏಕೆಂದರೆ
ತನ್ನನ್ನು ತಾನೇ ಅನುಭವಿಸುತ್ತಾನೆ. ಆದುದರಿಂದ ಪ್ರತ್ಯಗಾತ್ಮನು ತಾನೇ
ಸಾಕ್ಷಾತ್ತಾಗಿ ಬ್ರಹ್ಮವಾಗಿರುತ್ತಾನೆ,[^೧] ಇನ್ನೊಬ್ಬನಲ್ಲ.
 
[^೧]'ಯಾವುದು ಸಾಕ್ಷಾತ್ತಾಗಿರುವ ಅಪರೋಕ್ಷವಾದ ಬ್ರಹ್ಮವೊ' ಯತ್ ಸಾಕ್ಷಾ-
ದಪರೋಕ್ಷಾದ್ಬ್ರಹ್ಮ (ಬೃಹದಾರಣ್ಯಕ ಉ. ೩. ೪, ೧).]
 
ಜಾಗ್ರತ್-ಸ್ವಪ್ನ-ಸುಷುಪ್ತಿಯು ಸ್ಪುಷು ಸ್ಫುಟತರಂ ಯೋsಸ್ಸೌ ಸಮುಜ್ಜೃಂಭತೇ
ಪ್ರತ್ಯಗ್ರೂಪತಯಾ ಸದಾಽಹಮಹಮಿತ್ಯಂತಃ ಸ್ಫುರನ್ನೇಕಧಾ ।
ನಾನಾಕಾರ-ವಿಕಾರ-ಭಾಗಿನ ಇಮಾನ್ ಪಶ್ಯನ್ನಹಂಧೀಮುಖಾನ್
ನಿತ್ಯಾನಂದ-ಚಿದಾತ್ಮನಾ ಸ್ಪುಫುರತಿ ತಂ ವಿದ್ಧಿ ಸ್ವಮೇತಂ ಹೃದಿ ॥ ೨೧೭ ॥
 
ಯಃ ಅಸೌ = ಯಾವ ಇವನು, ಜಾಗ್ರತ್- ಸ್ವಪ್ನ-ಸುಷುಪ್ತಿಷು = ಜಾಗ್ರತ್-
ಸ್ವಪ್ನ-ಸುಷುಪ್ತಿಗಳಲ್ಲಿ, ಸ್ಪುಫುಟತರಂ = ಸ್ಫುಟವಾಗಿ, ಸಮುಜ್ಜೃಂಭತೇ = ವ್ಯಕ್ತವಾಗು-