This page has not been fully proofread.

ವಿವೇಕಚೂಡಾಮಣಿ
 
[೨೧೫
 
ತತ್ಸಾಕ್ಸಿಕಂ ಭವೇತ್ ತದ್ ಯದ್ಯದ್ ಯೇನಾನುಭೂಯತೇ ।
ಕಸ್ಯಾಪ್ಯನನುಭೂತಾರ್ಥ ಸಾಕ್ಷಿತ್ವಂ ನೋಪಯುಜ್ಯತೇ ॥ ೨೧೫ ॥
 
೧೧೬
 
ಯತ್ ಯತ್ ಯಾವಯಾವುದು ಯೇನ - ಯಾವನಿಂದ ಅನುಭೂ
ಯತೇ - ಅನುಭವಿಸಲ್ಪಡುತ್ತದೆಯೊ
ತತ್ ತತ್ - ಅದದು ತತ್-ಸಾಕ್ಸಿಕಂ
ಭವೇತ್ = ಆಯಾ ಸಾಕ್ಷಿಯುಳ್ಳದ್ದಾಗುವುದು; ಅನನುಭೂತಾರ್ಥ = ಅನುಭವಿಸ
ಲ್ಪಡದಿರುವ ವಿಷಯದಲ್ಲಿ ಕಸ್ಯ ಅಪಿ = ಯಾವನಿಗೂ ಸಾತ್ವಂ = ಸಾಕ್ಷಿತ್ವವು
ಉಪಯುಜ್ಯತೇ - ಉಪಯುಕ್ತವಾಗುವುದಿಲ್ಲ.
 
೨೧೫. ಯಾವಯಾವನು ಯಾವಯಾವುದನ್ನು ಅನುಭವಿಸುತ್ತಾನೆಯೊ
ಅದದಕ್ಕೆ ಅವನೇ ಸಾಕ್ಷಿಯಾಗಿರುತ್ತಾನೆ. ವಿಷಯಗಳು ಅನುಭವಿಸಲ್ಪಡ
ದಿದ್ದರೆ ಯಾವನಿಗೂ ಸಾಕ್ಷಿತ್ವವು ಸಂಭವಿಸುವುದಿಲ್ಲ.
 
ಅಸೌ ಸ್ವಸಾಕ್ಷಿ ಕೊ ಭಾವೋ ಯತಃ ಸೈನಾನುಭೂಯತೇ ।
ಅತಃ ಪರಂ ಸ್ವಯಂ ಸಾಕ್ಷಾತ್ ಪ್ರತ್ಯಗಾತ್ಮಾನ ಚೇತರಃ ॥ ೨೧೬ ॥
 
ಅಸೌ ಭಾವಃ - ಈ ಆತ್ಮನು ಸ್ವಸಾಕ್ಷಿಕಃ = ತನಗೆ ತಾನೇ ಸಾಕ್ಷಿಯಾಗಿರು
ತಾನೆ; ಯತಃ = ಏಕೆಂದರೆ ಸ್ವನ - ತನ್ನಿಂದಲೇ ಅನುಭೂಯತೇ ಅನುಭವಿಸ
ಲ್ಪಡುತ್ತಾನೆ; ಅತಃ = ಆದುದರಿಂದ ಪ್ರತ್ಯಗಾತ್ಮಾ- ಪ್ರತ್ಯಗಾತ್ಮನು ಸ್ವಯಂ
ತಾನೇ ಸಾಕ್ಷಾತ್ = ಸಾಕ್ಷಾತ್ತಾಗಿ ಪರಂ ಪರಬ್ರಹ್ಮ ನ ಚ ಇತರಃ = ಇನ್ನೊಬ್ಬನಲ್ಲ.
೨೧೬, ಈ ಆತ್ಮನು ತನಗೆ ತಾನೇ ಸಾಕ್ಷಿಯಾಗಿರುತ್ತಾನೆ, ಏಕೆಂದರೆ
ತನ್ನನ್ನು ತಾನೇ ಅನುಭವಿಸುತ್ತಾನೆ. ಆದುದರಿಂದ ಪ್ರತ್ಯಗಾತ್ಮನು ತಾನೇ
ಸಾಕ್ಷಾತ್ತಾಗಿ ಬ್ರಹ್ಮವಾಗಿರುತ್ತಾನೆ. ಇನ್ನೊಬ್ಬನಲ್ಲ.
 
[೧'ಯಾವುದು ಸಾಕ್ಷಾತ್ತಾಗಿರುವ ಅಪರೋಕ್ಷವಾದ ಬ್ರಹ್ಮವೊ' ಯತ್ ಸಾಕ್ಷಾ.
ದಪರೋಕ್ಷಾಹ್ಮ (ಬೃಹದಾರಣ್ಯಕ ಉ. ೩. ೪, ೧).]
 
ಜಾಗ್ರತ್-ಸ್ವಪ್ನ-ಸುಷುಪ್ತಿಯು ಸ್ಪುಟತರಂ ಯೋsಸ್ ಸಮು
 
0
 
ಭತೇ
 
ಪ್ರತ್ಯಗ್ರೂಪತಯಾ ಸದಾಽಹಮಹಮಿತ್ಯಂತಃ ಸ್ಸುರಕಧಾ ।
ನಾನಾಕಾರ-ವಿಕಾರ-ಭಾಗಿನ ಇಮಾನ್ ಪಶ್ಯನ್ನ ಹಂಧೀಮುಖಾನ್
ನಿತ್ಯಾನಂದ-ಚಿದಾತ್ಮನಾ ಸ್ಪುರತಿ ತಂ ವಿದ್ಧಿ ಸ್ವಮೇತಂ ಹೃದಿ ॥ ೨೧೭ ॥
 
ಯಃ ಅಸೌ - ಯಾವ ಇವನು ಜಾಗ್ರತ್- ಸ್ವಪ್ನ-ಸುಷುಪ್ತಿಷ್ಟು- ಜಾಗ್ರತ್
ಸ್ವಪ್ನ-ಸುಷುಪ್ತಿಗಳಲ್ಲಿ ಸ್ಪುಟತರಂ = - ಸ್ಪುಟವಾಗಿ ಸಮುಂಭತೇ – ವ್ಯಕ್ತವಾಗು