This page has been fully proofread once and needs a second look.

೨೧೨. ಶಿಷ್ಯನು ಪ್ರಶ್ನಿಸಿದನು: ಹೇ ಗುರುವೆ, ಈ ಪಂಚಕೋಶಗಳನ್ನು
ಮಿಥ್ಯೇಯೆಯೆಂದು ನಿರಾಕರಿಸಿದಮೇಲೆ ಇಲ್ಲಿ ಸರ್ವಶೂನ್ಯತೆಯೊಂದನ್ನು ಬಿಟ್ಟು
ನನಗೆ ಮತ್ತೆ ಯಾವುದೂ ತೋರುವುದಿಲ್ಲ! ಇಲ್ಲಿ ವಿವೇಕಿಯಾದವನು ತನ್ನ
ಆತ್ಮನೆಂದು ಅರಿತುಕೊಳ್ಳತಕ್ಕ ವಸ್ತು ಯಾವುದಿರುವುದು?
 
[ಇಲ್ಲಿ ಶೂನ್ಯವಾದಿಗಳ ಮತವನ್ನು ಪೂರ್ವ ಪಕ್ಷವಾಗಿ ಹೇಳಿದೆ. ಇದಕ್ಕೆ ಉತ್ತರ-
ವನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ಹೇಳಿದೆ.]
 
ಶ್ರೀಗುರುರುವಾಚ
 
ಸತ್ಯಮುಕ್ತಂ ತ್ವಯಾ ವಿದ್ವನ್ ನಿಪುಣೋಽಸಿ ವಿಚಾರಣೆಣೇ
ಅಹಮಾದಿ-ವಿಕಾರಾಸ್ತೇ ತದಭಾವೋಽಯಮಪ್ಯಥ ॥ ೨೧೩ ॥
 
ಸರ್ವೆ ಯೇನಾನುಭೂಯಂತೇ ಯಃ ಸ್ವಯಂ ನಾನುಭೂಯತೇ ।
ತಮಾತ್ಮಾನಂ ವೇದಿತಾರಂ ವಿದ್ಧಿ ಬುದ್ಧ್ಯಾ ಸುಸೂಕ್ಷ್ಮಯಾ ॥೨೧೪॥
 
ಶ್ರೀಗುರುಃ ಉವಾಚ-- ವಿದ್ವನ್ = ವಿವೇಕಿಯೆ, ತ್ವಯಾ=ನಿನ್ನಿಂದ, ಸತ್ಯಂ=
ಸತ್ಯವು, ಉಕ್ತಂ = ಹೇಳಲ್ಪಟ್ಟಿತು; ವಿಚಾರೇ = ವಿಚಾರಮಾಡುವುದರಲ್ಲಿ, ನಿಪುಣಃ
ಆಸಿ = ನಿಪುಣನಾಗಿರುವೆ; ತೇ ಅಹಮ್- ಆದಿ- ವಿಕಾರಾಃ = ಆ ಅಹಂಕಾರವೇ ಮೊದ-
ಲಾದ ವಿಕಾರಗಳೂ, ಅಥ = ಮತ್ತು, ಅಯಂ ತತ್ ಅಭಾವಃ = ಅವುಗಳ ಈ
ಅಭಾವವೂ, ಸರ್ವೆ = ಎಲ್ಲವೂ, ಯೇನ = ಯಾವನಿಂದ, ಅನುಭೂಯಂತೇ = ಅನು-
ಭವಿಸಲ್ಪಡುತ್ತವೆಯೊ, ಯಃ = ಯಾವನು ಸ್ವಯಂ ತಾನೇ, ನ ಅನುಭೂಯತೇ
[ಇತರರಿಂದ ಅನುಭವಿಸಲ್ಪಡುವುದಿಲ್ಲವೊ, ತಂ = ಅಂಥ, ವೇದಿತಾರಂ = ಸರ್ವ ಸಾಕ್ಷಿ
ಯಾದ, ಆತ್ಮಾನಂ = ಆತ್ಮನನ್ನು, ಸುಸೂಕ್ಷ್ಮಯಾ = ಅತಿ ಸೂಕ್ಷ್ಮವಾದ, ಬುದ್ಧ್ಯಾ-
ಬುದ್ಧಿಯಿಂದ, ವಿದ್ಧಿ = ಅರಿತುಕೊ.
 
೨೧೩-೨೧೪, ಶ್ರೀಗುರುವು ಹೇಳಿದನು: ವಿವೇಕಿಯೆ, ನೀನು ಹೇಳಿದ್ದು
ಸತ್ಯವೇ. ನೀನು ವಿವೇಚನೆಮಾಡುವುದರಲ್ಲಿ ನಿಪುಣನಾಗಿರುವೆ. ಅಹಂಕಾರವೇ
ಮೊದಲಾದ ವಿಕಾರಗಳು ಮತ್ತು ಅವುಗಳ ಅಭಾವವು-- ಇವೆಲ್ಲವನ್ನೂ
ಯಾವನು ಅನುಭವಿಸುತ್ತಾನೆಯೋ, ಯಾವನನ್ನು ಮಾತ್ರ ಅನುಭವಿಸಲು
ಮತ್ತೆ ಯಾವುದರಿಂದಲೂ ಆಗುವುದಿಲ್ಲವೋ ಆ ಸರ್ವಸಾಕ್ಷಿಯಾದ ಆತ್ಮ
ನನ್ನು ಅತಿ ಸೂಕ್ಷ್ಮವಾದ ಬುದ್ಧಿಯಿಂದ[^೧] ಅರಿತುಕೊ.
 
[^೧] "'ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ಅಗ್ರಯಾ ಬುದ್ಧ್ಯಾ ಸೂಕ್ಷ್ಮಯಾ
(ಕ ಉ. ೧. ೩. ೧೨) ಎಂಬುದರ ಛಾಯೆ.]