This page has not been fully proofread.

ವಿವೇಕಚೂಡಾಮಣಿ
 
೨೧೨. ಶಿಷ್ಯನು ಪ್ರಶ್ನಿಸಿದನು: ಹೇ ಗುರುವೆ, ಈ ಪಂಚಕೋಶಗಳನ್ನು

ಮಿದ್ಯೆಥ್ಯೇಯೆಂದು ನಿರಾಕರಿಸಿದಮೇಲೆ ಇಲ್ಲಿ ಸರ್ವಶೂನ್ಯತೆಯೊಂದನ್ನು ಬಿಟ್ಟು

ನನಗೆ ಮತ್ತೆ ಯಾವುದೂ ತೋರುವುದಿಲ್ಲ.! ಇಲ್ಲಿ ವಿವೇಕಿಯಾದವನು ತನ್ನ

ಆತ್ಮನೆಂದು ಅರಿತುಕೊಳ್ಳತಕ್ಕ ವಸ್ತು ಯಾವುದಿರುವುದು?
 
೨೧೪]
 
೧೧೫
 

 
[ಇಲ್ಲಿ ಶೂನ್ಯವಾದಿಗಳ ಮತವನ್ನು ಪೂರ್ವ ಪಕ್ಷವಾಗಿ ಹೇಳಿದೆ. ಇದಕ್ಕೆ ಉತ್ತರ

ವನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ಹೇಳಿದೆ.]
 

 
ಶ್ರೀಗುರುರುವಾಚ
 

 
ಸತ್ಯಮುಕ್ತಂ ತ್ವಯಾ ವಿದ್ವನ್ ನಿಪುಣೋSಸಿ ವಿಚಾರಣೆ ।

ಅಹಮಾದಿ-ವಿಕಾರಾಸ್ತೇ ತದಭಾವೋSಯಮಪ್ಯಥ ॥ ೨೧೩ ॥

 
ಸರ್ವೆ ಯೇನಾನುಭೂಯಂತೇ ಯಃ ಸ್ವಯಂ ನಾನುಭೂಯತೇ ।

ತಮಾತ್ಮಾನಂ ವೇದಿತಾರಂ ನಿವಿದ್ದಿಧಿ ಬುದ್ಧಾಧ್ಯಾ ಸುಸೂಕ್ಷ್ಮಯಾ ॥೨೧೪
 

 
ಶ್ರೀಗುರುಃ ಉವಾಚ-- ವಿದ್ವನ್ -= ವಿವೇಕಿಯೆ, ತ್ವಯಾ-=ನಿನ್ನಿಂದ, ಸತ್ಯಂ-
=
ಸತ್ಯವು, ಉಕ್ತಂ = ಹೇಳಲ್ಪಟ್ಟಿತು; ವಿಚಾರೇ -= ವಿಚಾರಮಾಡುವುದರಲ್ಲಿ, ನಿಪುಣಃ

ಆಸಿ -= ನಿಪುಣನಾಗಿರುವೆ; ತೇ ಅಹಮ್,- ಆದಿ,- ವಿಕಾರಾಃ = ಆ ಅಹಂಕಾರವೇ ಮೊದ

ಲಾದ ವಿಕಾರಗಳೂ ಅರ್, ಅ= ಮತ್ತು, ಅಯಂ ತತ್ ಅಭಾವಃ = ಅವುಗಳ ಈ

ಅಭಾವವೂ, ಸರ್ವೆ -= ಎಲ್ಲವೂ, ಯೇನ = ಯಾವನಿಂದ, ಅನುಭೂಯಂತೇ = ಅನು

ಭವಿಸಲ್ಪಡುತ್ತವೆಯೊ, ಯಃ = ಯಾವನು ಸ್ವಯಂ ತಾನೇ, ನ ಅನುಭೂಯತೇ

[ಇತರರಿಂದ ಅನುಭವಿಸಲ್ಪಡುವುದಿಲ್ಲವೊ, ತಂ = ಅಂಥ, ವೇದಿತಾರಂ = ಸರ್ವ ಸಾಕ್ಷಿ
ಯಾದ

ಯಾದ,
ಆತ್ಮಾನಂ = ಆತ್ಮನನ್ನು, ಸುಸೂಕ್ಷ್ಮಯಾ = ಅತಿ ಸೂಕ್ಷ್ಮವಾದ, ಬುದ್ಧಾ ಧ್ಯಾ-

ಬುದ್ಧಿಯಿಂದ, ವಿದ್ಧಿ -= ಅರಿತುಕೊ.
 

 
೨೧೩-೨೧೪, ಶ್ರೀಗುರುವು ಹೇಳಿದನು: ವಿವೇಕಿಯೆ, ನೀನು ಹೇಳಿದ್ದು

ಸತ್ಯವೇ. ನೀನು ವಿವೇಚನೆಮಾಡುವುದರಲ್ಲಿ ನಿಪುಣನಾಗಿರುವೆ. ಅಹಂಕಾರವೇ

ಮೊದಲಾದ ವಿಕಾರಗಳು ಮತ್ತು ಅವುಗಳ ಅಭಾವವು-- ಇವೆಲ್ಲವನ್ನೂ

ಯಾವನು ಅನುಭವಿಸುತ್ತಾನೆಯೋ, ಯಾವನನ್ನು ಮಾತ್ರ ಅನುಭವಿಸಲು

ಮತ್ತೆ ಯಾವುದರಿಂದಲೂ ಆಗುವುದಿಲ್ಲವೋ ಆ ಸರ್ವಸಾಕ್ಷಿಯಾದ ಆತ್ಮ
 

ನನ್ನು ಅತಿ ಸೂಕ್ಷ್ಮವಾದ ಬುದ್ಧಿಯಿಂದ[^೧] ಅರಿತುಕೊ.

 
[^] "ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ಅಗ್ರ

(ಕರ ಉ. ೧. ೩. ೧೨) ಎಂಬುದರ ಛಾಯೆ.]
 
ಬುದ್ಧತಿ ಸೂಕ್ಷ್ಮ
 
ಯಾ