This page has been fully proofread once and needs a second look.

೨೦೮,. ಸುಷುಪ್ತಿಯಲ್ಲಿ ಆನಂದಮಯಕೋಶದ ಸ್ಫೂರ್ತಿಯು ಪೂರ್ಣ-
ವಾಗಿರುತ್ತದೆ. ಕನಸು ಎಚ್ಚರ-ಇವುಗಳಲ್ಲಿ ಪ್ರಿಯ ವಸ್ತುಗಳ ದರ್ಶನವೇ[^೧]
ಮೊದಲಾದ ಕಾರಣಗಳಿಂದ ಸ್ವಲ್ಪವಾಗಿ ತೋರುತ್ತದೆ.
 
[^೧] ಎಚ್ಚರದಲ್ಲಿ ಪ್ರತ್ಯಕ್ಷಾನುಭವದಿಂದಲೂ ಕನಸಿನಲ್ಲಿ ಸ್ಮೃತಿಸಂಸ್ಕಾರದಿಂದಲೂ.]
 
ನೈವಾನಂದಮಯಃ ಪರಾತ್ಮಾ
ಸೋಪಾಧಿಕತ್ವಾತ್ ಪ್ರಕೃತೇರ್ವಿಕಾರಾತ್ ।
ಕಾರ್ಯತ್ವ ಹೇತೋಃ ಸುಕೃತಕ್ರಿಯಾಯಾ
ವಿಕಾರ-ಸಂಘಾತ-ಸಮಾಹಿತತ್ವಾತ್ || ೨೦೯ ||
 
ಅಯಮ್ ಆನಂದಮಯಃ = ಈ ಆನಂದಮಯಕೋಶವು ,ಸೋಪಾಧಿ-
ಕತ್ವಾತ್ = ಉಪಾಧಿಯನ್ನು ಹೊಂದಿರುವುದರಿಂದಲೂ, ಪ್ರಕೃತೇಃ ವಿಕಾರಾತ್=
ಪ್ರಕೃತಿಯ ವಿಕಾರವಾಗಿರುವುದರಿಂದಲೂ, ಸುಕೃತಯಾಯಾಃ = ಪುಣ್ಯಕರ್ಮದ,
ಕಾರ್ಯತ್ವ ಹೇತೋಃ = ಫಲವಾಗಿರುವುದರಿಂದಲೂ, ವಿಕಾರ -ಸಂಘಾತ-ಸಮಾ-
ಹಿತತ್ವಾತ್ = ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿರುವುದರಿಂದಲೂ,
ಪರಾತ್ಮಾ = ಪರಮಾತ್ಮನು, ನ ಏವ = ಅಲ್ಲವೇ ಅಲ್ಲ.
 
೨೦೯. ಈ ಆನಂದಮಯಕೋಶವೂ ಪರಮಾತ್ಮನಲ್ಲ; ಏಕೆಂದರೆ ಇದು
ಉಪಾಧಿಯಿಂದ ಕೂಡಿದೆ, ಪ್ರಕೃತಿಯ ವಿಕಾರವಾಗಿದೆ, ಪುಣ್ಯ ಕರ್ಮದ
ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ.
[ಇಲ್ಲಿ ಆನಂದಮಯಕೋಶದ ಅನಾತ್ಮತ್ವವನ್ನು ಹೇಳಿದೆ.]
 
ಪಂಚಾನಾಮಪಿ ಕೋಶಾನಾಂ ನಿಷೇಧೇ ಯುಕ್ತಿತಃ ಶ್ರುತೇಃ ।
ತನ್ನಿಷೇಧಾವಧಿಃ ಸಾಕ್ಷೀ ಬೋಧರೂಪೋಽವಶಿಷ್ಯತೇ ॥ ೨೧೦ ||
 
ಶ್ರುತೇಃ = ಶ್ರುತಿಯಿಂದಲೂ, ಯುಕ್ತಿತಃ = ಯುಕ್ತಿಯಿಂದಲೂ, ಪಂಚಾ-
ನಾಂ ಕೋಶಾನಾಮ್ ಅಪಿ = ಪಂಚಕೋಶಗಳ, ನಿಷೇಧೇ [ಸತಿ] = ನಿರಾಕರಣವು
ಆದಾಗ, ತತ್- ನಿಷೇಧ-ಅವಧಿಃ = ಅವುಗಳ ನಿಷೇಧವೇ ಅವಧಿಯಾಗಿರುವ, ಸಾಕ್ಷೀ =
ಸಾಕ್ಷಿರೂಪನಾಗಿರುವ, ಬೋಧರೂಪಃ = ಕೇವಲ ಜ್ಞಾನಸ್ವರೂಪನಾಗಿರುವ [ಪರ
ಮಾತ್ಮನು] ಅವಶಿಷ್ಯತೇ = ಉಳಿದುಕೊಳ್ಳುತ್ತಾನೆ.
 
೨೧೦. ಶ್ರುತಿಯಿಂದಲೂ[^೧] ಯುಕ್ತಿಯಿಂದಲೂ ಈ ಐದು ಕೋಶ-
ಗಳನ್ನೂ ನಿರಾಕರಿಸಿದರೆ, ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿಯೂ
ಜ್ಞಾನಸ್ವರೂಪನೂ ಆದ ಪರಮಾತ್ಮನು ಉಳಿದುಕೊಳ್ಳುತ್ತಾನೆ.
 
[^೧]ಇದಲ್ಲ ಇದಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬) .]