This page has not been fully proofread.

೨೧೦]
 
ವಿವೇಕಚೂಡಾಮಣಿ
 
೧೧೩
 
೨೦೮, ಸುಷುಪ್ತಿಯಲ್ಲಿ ಆನಂದಮಯಕೋಶದ ಸ್ಫೂರ್ತಿಯು ಪೂರ್ಣ

ವಾಗಿರುತ್ತದೆ. ಕನಸು ಎಚ್ಚರ-ಇವುಗಳಲ್ಲಿ ಪ್ರಿಯ ವಸ್ತುಗಳ ದರ್ಶನವೇ?
[^೧]
ಮೊದಲಾದ ಕಾರಣಗಳಿಂದ ಸ್ವಲ್ಪವಾಗಿ ತೋರುತ್ತದೆ.
 

 
[^] ಎಚ್ಚರದಲ್ಲಿ ಪ್ರತ್ಯಕ್ಷಾನುಭವದಿಂದಲೂ ಕನಸಿನಲ್ಲಿ ಸ್ಮೃತಿಸಂಸ್ಕಾರದಿಂದಲೂ.

 
ನೈವಾನಂದಮಯಃ ಪರಾತ್ಮಾ
 

ಸೋಪಾಧಿಕತ್ವಾತ್ ಪ್ರಕೃತೇರ್ವಿಕಾರಾತ್ ।

ಕಾರ್ಯತ್ವ ಹೇತೋಃ ಸುಕೃತಕ್ರಿಯಾಯಾ

ವಿಕಾರ-ಸಂಘಾತ-ಸಮಾಹಿತತ್ವಾತ್
 

 
ಅಯಮ್ ಆನಂದಮಯಃ = ಈ ಆನಂದಮಯಕೋಶವು ,ಸೋಪಾಧಿ-
ಕತ್ವಾತ್ = ಉಪಾಧಿಯನ್ನು ಹೊಂದಿರುವುದರಿಂದಲೂ, ಪ್ರಕೃತೇಃ ವಿಕಾರಾತ್=
ಪ್ರಕೃತಿಯ ವಿಕಾರವಾಗಿರುವುದರಿಂದಲೂ, ಸುಕೃತಯಾಯಾಃ = ಪುಣ್ಯಕರ್ಮದ,
ಕಾರ್ಯತ್ವ ಹೇತೋಃ = ಫಲವಾಗಿರುವುದರಿಂದಲೂ, ವಿಕಾರ ಸಂಘಾತ-ಸಮಾ-
ಹಿತತ್ವಾತ್ = ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿರುವುದರಿಂದಲೂ,
ಪರಾತ್ಮಾ = ಪರಮಾತ್ಮನು, ನ ಏವ = ಅಲ್ಲವೇ ಅಲ್ಲ.
 
೨೦೯
 
ಅಯಮ್ ಆನಂದಮಯಃ = ಈ ಆನಂದಮಯಕೋಶವು ಸೋಪಾಧಿ.
ಕತ್ವಾತ್ = ಉಪಾಧಿಯನ್ನು ಹೊಂದಿರುವುದರಿಂದಲೂ ಪ್ರಕೃತೇಃ ವಿಕಾರಾತ್
ಪ್ರಕೃತಿಯ ವಿಕಾರವಾಗಿರುವುದರಿಂದಲೂ ಸುಕೃತಯಾಯಾಃ - ಪುಣ್ಯಕರ್ಮದ
ಕಾರ್ಯತ್ವ ಹೇತೋಃ
ವಿಕಾರ ಸಂಘಾತ-ಸಮಾ
 
ಫಲವಾಗಿರುವುದರಿಂದಲೂ
 
ಹಿತತ್ವಾತ್ = ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿರುವುದರಿಂದಲೂ
ಪರಾತ್ಮಾ = ಪರಮಾತ್ಮನು ನ ಏವ – ಅಲ್ಲವೇ ಅಲ್ಲ.
 
೨೦೯
. ಈ ಆನಂದಮಯಕೋಶವೂ ಪರಮಾತ್ಮನಲ್ಲ; ಏಕೆಂದರೆ ಇದು

ಉಪಾಧಿಯಿಂದ ಕೂಡಿದೆ, ಪ್ರಕೃತಿಯ ವಿಕಾರವಾಗಿದೆ, ಪುಣ್ಯ ಕರ್ಮದ

ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ.

[ಇಲ್ಲಿ ಆನಂದಮಯಕೋಶದ ಅನಾತ್ಮತ್ವವನ್ನು ಹೇಳಿದೆ.]
 

 
ಪಂಚಾನಾಮಪಿ ಕೋಶಾನಾಂ ನಿಷೇಧೇ ಯುಕ್ತಿತಃ ಶ್ರುತೇಃ ।

ತನ್ನಿಷೇಧಾವಧಿಃ ಸಾಕ್ಷೀ ಬೋಧರೂಪೋಽವಶಿಷ್ಯತೇ ॥ ೨೧೦ ।
 

 

 
ಶ್ರುತೇಃ -= ಶ್ರುತಿಯಿಂದಲೂ, ಯುಕ್ತಿತಃ = ಯುಕ್ತಿಯಿಂದಲೂ, ಪಂಚಾ-

ನಾಂ ಕೋಶಾನಾಮ್ ಅಪಿ = ಪಂಚಕೋಶಗಳ, ನಿಷೇಧೇ [ಸತಿ] = ನಿರಾಕರಣವು

ಆದಾಗ, ತತ್- ನಿಷೇಧ. -ಅವಧಿಃ- = ಅವುಗಳ ನಿಷೇಧವೇ ಅವಧಿಯಾಗಿರುವ, ಸಾಕ್ಷೀ
=
ಸಾಕ್ಷಿರೂಪನಾಗಿರುವ, ಬೋಧರೂಪಃ -= ಕೇವಲ ಜ್ಞಾನಸ್ವರೂಪನಾಗಿರುವ [ಪರ

ಮಾತ್ಮನು] ಅವಶಿಷ್ಯತೇ -= ಉಳಿದುಕೊಳ್ಳುತ್ತಾನೆ.
 

 
೨೧೦. ಶ್ರುತಿಯಿಂದಲೂ[^೧] ಯುಕ್ತಿಯಿಂದಲೂ ಈ ಐದು ಕೋಶ

ಗಳನ್ನೂ ನಿರಾಕರಿಸಿದರೆ, ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿ
ಯೂ
ಜ್ಞಾನಸ್ವರೂಪನೂ ಆದ ಪರಮಾತ್ಮನು ಉಳಿದುಕೊಳ್ಳುತ್ತಾನೆ.
 
(

 
[^
]ಇದಲ್ಲ ಇದಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬) .]