This page has not been fully proofread.

೨೧೦]
 
ವಿವೇಕಚೂಡಾಮಣಿ
 
೧೧೩
 
೨೦೮, ಸುಷುಪ್ತಿಯಲ್ಲಿ ಆನಂದಮಯಕೋಶದ ಸ್ಫೂರ್ತಿಯು ಪೂರ್ಣ
ವಾಗಿರುತ್ತದೆ. ಕನಸು ಎಚ್ಚರ-ಇವುಗಳಲ್ಲಿ ಪ್ರಿಯ ವಸ್ತುಗಳ ದರ್ಶನವೇ?
ಮೊದಲಾದ ಕಾರಣಗಳಿಂದ ಸ್ವಲ್ಪವಾಗಿ ತೋರುತ್ತದೆ.
 
[೧ ಎಚ್ಚರದಲ್ಲಿ ಪ್ರತ್ಯಕ್ಷಾನುಭವದಿಂದಲೂ ಕನಸಿನಲ್ಲಿ ಸ್ಮೃತಿಸಂಸ್ಕಾರದಿಂದಲೂ.
ನೈವಾನಂದಮಯಃ ಪರಾತ್ಮಾ
 
ಸೋಪಾಧಿಕತ್ವಾತ್ ಪ್ರಕೃತೇರ್ವಿಕಾರಾತ್ ।
ಕಾರ್ಯತ್ವ ಹೇತೋಃ ಸುಕೃತಕ್ರಿಯಾಯಾ
ವಿಕಾರ-ಸಂಘಾತ-ಸಮಾಹಿತತ್ವಾತ್
 
। ೨೦೯ ।
 
ಅಯಮ್ ಆನಂದಮಯಃ = ಈ ಆನಂದಮಯಕೋಶವು ಸೋಪಾಧಿ.
ಕತ್ವಾತ್ = ಉಪಾಧಿಯನ್ನು ಹೊಂದಿರುವುದರಿಂದಲೂ ಪ್ರಕೃತೇಃ ವಿಕಾರಾತ್
ಪ್ರಕೃತಿಯ ವಿಕಾರವಾಗಿರುವುದರಿಂದಲೂ ಸುಕೃತಯಾಯಾಃ - ಪುಣ್ಯಕರ್ಮದ
ಕಾರ್ಯತ್ವ ಹೇತೋಃ
ವಿಕಾರ ಸಂಘಾತ-ಸಮಾ
 
ಫಲವಾಗಿರುವುದರಿಂದಲೂ
 
ಹಿತತ್ವಾತ್ = ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿರುವುದರಿಂದಲೂ
ಪರಾತ್ಮಾ = ಪರಮಾತ್ಮನು ನ ಏವ – ಅಲ್ಲವೇ ಅಲ್ಲ.
 
೨೦೯. ಈ ಆನಂದಮಯಕೋಶವೂ ಪರಮಾತ್ಮನಲ್ಲ; ಏಕೆಂದರೆ ಇದು
ಉಪಾಧಿಯಿಂದ ಕೂಡಿದೆ, ಪ್ರಕೃತಿಯ ವಿಕಾರವಾಗಿದೆ, ಪುಣ್ಯ ಕರ್ಮದ
ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ.
[ಇಲ್ಲಿ ಆನಂದಮಯಕೋಶದ ಅನಾತ್ಮತ್ವವನ್ನು ಹೇಳಿದೆ.]
 
ಪಂಚಾನಾಮಪಿ ಕೋಶಾನಾಂ ನಿಷೇಧೇ ಯುಕ್ತಿತಃ ಶ್ರುತೇಃ ।
ತನ್ನಿಷೇಧಾವಧಿಃ ಸಾಕ್ಷೀ ಬೋಧರೂಪೋಽವಶಿಷ್ಯತೇ ॥ ೨೧೦ ।
 

 
ಶ್ರುತೇಃ - ಶ್ರುತಿಯಿಂದಲೂ ಯುಕ್ತಿತಃ = ಯುಕ್ತಿಯಿಂದಲೂ ಪಂಚಾ-
ನಾಂ ಕೋಶಾನಾಮ್ ಅಪಿ = ಪಂಚಕೋಶಗಳ ನಿಷೇಧೇ [ಸತಿ] = ನಿರಾಕರಣವು
ಆದಾಗ ತತ್- ನಿಷೇಧ. ಅವಧಿಃ- ಅವುಗಳ ನಿಷೇಧವೇ ಅವಧಿಯಾಗಿರುವ ಸಾಕ್ಷೀ
ಸಾಕ್ಷಿರೂಪನಾಗಿರುವ ಬೋಧರೂಪಃ - ಕೇವಲ ಜ್ಞಾನಸ್ವರೂಪನಾಗಿರುವ [ಪರ
ಮಾತ್ಮನು] ಅವಶಿಷ್ಯತೇ - ಉಳಿದುಕೊಳ್ಳುತ್ತಾನೆ.
 
೨೧೦. ಶ್ರುತಿಯಿಂದಲೂ ಯುಕ್ತಿಯಿಂದಲೂ ಈ ಐದು ಕೋಶ
ಗಳನ್ನೂ ನಿರಾಕರಿಸಿದರೆ, ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿಯ
ಜ್ಞಾನಸ್ವರೂಪನೂ ಆದ ಪರಮಾತ್ಮನು ಉಳಿದುಕೊಳ್ಳುತ್ತಾನೆ.
 
(೧ಇದಲ್ಲ ಇದಲ್ಲ' ನೇತಿ ನೇತಿ (ಬೃಹದಾರಣ್ಯಕ ಉ. ೨. ೩. ೬) .]