This page has been fully proofread once and needs a second look.

ವಿವೇಕಚೂಡಾಮಣಿ
 
ಇಷ್ಟಾರ್ಥ -ಲಾಭೋದಯಃ = ಇಷ್ಟಾರ್ಥವು ಕೈಗೂಡಿದಾಗ ಉಂಟಾಗತಕ್ಕದ್ದು,

ಕೃತಿನಾಂ = ಪುಣ್ಯವಂತರಿಗೆ, ಪುಣ್ಯಸ್ಯ -= ಪುಣ್ಯದ, ಅನುಭವೇ =ಅನುಭವವಾದಾಗ
,
ವಿಭಾತಿ =ತೋರಿಕೊಳ್ಳುತ್ತದೆ, ಯತ್ರ =ಯಾವುದರಲ್ಲಿ, ತನು;ತ್ ಭೃತ್-ಮಾತ್ರ-ರಃ=ಶರೀರ

ಮಾತ್ರವೇ ಉಳ್ಳವನು, ಸ್ವಯಮ್ ಆನಂದರೂಪಃ -= ತಾನೇ ಆನಂದರೂಪನಾಗಿ
 
ಪ್ರಯತ್ನಂ
,
ಪ್ರಯತ್ನಂ-
ವಿನಾ -= ಪ್ರಯತ್ನವಿಲ್ಲದೆಯೇ, ಸಾಧು ನಂದತಿ = ಚೆನ್ನಾಗಿ ಸಂತೋಷಿಸು
-
ತ್
ತಾನೆಯೊ.
 
೧೧೨
 
[೨೦೮
 

 
೨೦೭,. ಆನಂದದ ಪ್ರತಿಬಿಂಬದಿಂದ ವ್ಯಾಪ್ತವಾದ ಸ್ವರೂಪವುಳ್ಳ ಅವಿದ್ಯೆ
-
ಯೆಂಬ ತಮಸ್ಸಿನಿಂದ ಹುಟ್ಟಿದ ವೃತ್ತಿಯು[^೧] ಆನಂದಮಯಕೋಶವಾಗು
-
ತ್
ತದೆ.[^೨] ಇದು ಪ್ರಿಯವೇ ಮೊದಲಾದ ಗುಣಗಳನ್ನು ಪಡೆದಿದೆ.,[^೩] ಇಷ್ಟಾರ್ಥವು

ಕೈಗೂಡಿದಾಗ ಉದಯವಾಗುತ್ತದೆ, ಪುಣ್ಯವಂತರಿಗೆ ಪುಣ್ಯಕರ್ಮಫಲದ

ಅನುಭವವಾದಾಗ ತೋರಿಕೊಳ್ಳುತ್ತದೆ; ಈ ಆನಂದಮಯಕೋಶದಲ್ಲಿ ಶರೀರ

ವುಳ್ಳವನು ಪ್ರಯತ್ನ ಮಾಡದೆಯೇ[^೪] ಸ್ವಯಂ ಆನಂದರೂಪನಾಗಿ ಚೆನ್ನಾಗಿ

ಸಂತೋಷಿಸುತ್ತಾನೆ.
 

 
[ಇಲ್ಲಿಂದ ಆನಂದಮಯಕೋಶವನ್ನು ನಿರೂಪಿಸಿದೆ.
 

[^
] ಎಂದರೆ ಅವಿದ್ಯಾಪರಿಣಾಮರೂಪವಾದ ವೃತ್ತಿಯು; ಇದರಲ್ಲಿ ಆತ್ಮಚೈತನ್ಯವು

ಪ್ರತಿಬಿಂಬಿಸುತ್ತದೆ.
 

[^
] 'ಆ ಈ ವಿಜ್ಞಾನಮಯನಾದ ಆತ್ಮನಿಗಿಂತ ಅನ್ಯನೂ ಅಂತರನೂ ಆನಂದ
-
ಮಯನೂ ಆದ ಆತ್ಮನಿರುವನು' ತಸ್ಮಾದ್ವಾ ಏತಸ್ಮಾದ್ವಿಜ್ಞಾನಮಯಾದ-

ನ್ಯೂಂಯೋಂತರ ಆತ್ಮಾssನಂದಮಯಃ (ತೈತ್ತಿರೀಯ ಉ. ೨. ೫).
 

[^
] 'ಅವನಿಗೆ ಪ್ರಿಯವೇ ತಲೆ . . . ಆನಂದವು ಮಧ್ಯಭಾಗ' ತಸ್ಯ ಪ್ರಿಯಮೇವ

ಶಿರಃ ... ಆನಂದ ಆತ್ಮಾ (ತೈತ್ತಿರೀಯ ಉ. ೨. ೫).
 

[^೪]
ತಾತ್ಕಾಲಿಕ -ಪ್ರಯತ್ನವಿಲ್ಲದೆ ಎಂದರ್ಥ. ಈಗಿನ ಅನುಭವವು ಪೂರ್ವ

ಪ್ರಯತ್ನದ ಫಲವೆಂದು ಅರಿತುಕೊಳ್ಳಬೇಕು.]
 

 
ಆನಂದಮಯಕೋಶಸ್ಯ ಸುಷುಪ್ತೌ ಸ್ಫೂರ್ತಿರುತ್ಕಟಾ ।

ಸ್ವಪ್ನ ಜಾಗರಯೋರೀಷದಿಷ್ಟ ಸಂದರ್ಶನಾದಿನಾ
 
|| ೨೦೮
 
||
 
ಸುಷುಪ್ತೌ=ಸುಷುಪ್ತಿಯಲ್ಲಿ, ಆನಂದಮಯಕೋಶಸ್ಯ ಆನಂದಮಯ
=ಆನಂದಮಯ,
ಕೋಶದ ಸ್ಫೂರ್ತಿಃ -= ಸ್ಫೂರ್ತಿಯು, ಉತ್ಕಟಾ -= ಪೂರ್ಣವಾದದ್ದು ; ಸ್ವಪ್ನಜಾಗ-

ರಯೋಃ = ಸ್ವಪ್ನ -ಜಾಗೃದವಸ್ಥೆ ಗಳಲ್ಲಿ, ಇಷ್ಟ ಸಂದರ್ಶನಾದಿನಾ- =ಪ್ರಿಯವಸ್ತುಗಳನ್ನು

ನೋಡಿದ್ದೇ ಮೊದಲಾದುವುಗಳಿ೦ದ [ಸ್ಫೂರ್ತಿಯು], ಷತ್= ಸ್ವಲ್ಪವಾಗಿ [ಉಂಟಾಗು
-
ತ್ತ
ದೆ].
 
3