This page has not been fully proofread.

೧೦೮
 
ವಿವೇಕಚೂಡಾಮಣಿ
 
ಪ್ರಬೋಧೆ ಸ್ವಪ್ನವತ್ ಸರ್ವಂ ಸಹಮೂಲಂ ವಿನಶ್ಯತಿ ।
ಅನಾದ್ಯಪೀದಂ ನೋ ನಿತ್ಯಂ ಪ್ರಾಗಭಾವ ಇವ ಸ್ಪುಟಮ್
 
[೧೯೯
 
॥ ೧೯೯ ॥
 
ಅವಿದ್ಯಾಯಾಃ = ಅವಿದ್ಯೆಯ ಕಾರ್ಯಸ್ಯ ಅಪಿ ಕಾರ್ಯವೂ ಕೂಡ ಅನಾ
ದಿತ್ವಂ ಅನಾದಿ ಎಂಬುದು ತಥಾ ಇತೇ=ಹೀಗೆಯೇ ಒಪ್ಪುತ್ತದೆ; ವಿದ್ಯಾಯಾಂ
ಉತ್ಪನ್ಯಾಯಾಂ ತು ಆದರೆ ಜ್ಞಾನವು ಉತ್ಪನ್ನವಾದಾಗ ಸರ್ವಮ್ ಆ ವಿದ್ಯ
ಕಂ = ಅವಿದ್ಯಾ ಕಾರ್ಯವೆಲ್ಲ ಅನಾದಿ ಅಪಿ - ಅನಾದಿಯಾಗಿದ್ದರೂ ಪ್ರಬೋಧ
ಸ್ವಪ್ನವತ್– ಎಚ್ಚೆತ್ತಾಗ ಸ್ವಪ್ನವು ಹೇಗೋ ಹಾಗೆ- ಸಹಮೂಲಂ= ಸಮೂಲವಾಗಿ
ವಿನಶ್ಯತಿ - ನಾಶವಾಗುತ್ತದೆ; ಇದಂ ಈ ಅವಿದ್ಯೆಯ ಕಾರ್ಯವು ಅನಾದಿ ಆಪಿ -
ಅನಾದಿಯಾಗಿದ್ದರೂ ಪ್ರಾಕ್- ಅಭಾವಃ ಇವ ಪ್ರಾಗಭಾವದಂತೆ ನ ಉ ನಿತ್ಯಂ
ನಿತ್ಯವಲ್ಲವೆಂಬುದು ಸ್ಪುಟ = ಸ್ಪುಟವಾಗಿದೆ.
 
೧೯೮.೧೯೯. ಹೀಗೆಯೇ ಅವಿದ್ಯೆಯ ಕಾರ್ಯವೂ ಕೂಡ ಅನಾದಿ
ಎಂಬುದು ಒಪ್ಪುತ್ತದೆ. ಜ್ಞಾನವು ಉತ್ಪನ್ನವಾದಾಗ ಅವಿದ್ಯಾಕಾರ್ಯವೆಲ್ಲ
ಅನಾದಿಯಾಗಿದ್ದರೂ ಎಚ್ಚೆತ್ತಾಗ ಸ್ವಪ್ನವು ನಾಶವಾಗುವಂತೆ-ಸಮೂಲ
ವಾಗಿ ನಾಶವಾಗುತ್ತದೆ. ಅವಿದ್ಯೆಯ ಕಾರ್ಯವು ಅನಾದಿಯಾಗಿದ್ದರೂ
ಪ್ರಾಗಭಾವದಂತೆ ನಿತ್ಯವಲ್ಲವೆಂಬುದು ಸ್ಪುಟವಾಗಿದೆ.
 
[೧೯೨-೧೯೩ನೆಯ ಶ್ಲೋಕಗಳಲ್ಲಿ ಉಪಾಧಿಯು ಅನಾದಿಯಾಗಿರುವುದರಿಂದ
ಅನಾದಿಯಾದ ಉಪಾಧಿಗೆ ನಾಶವನ್ನು ಅಪೇಕ್ಷಿಸಕೂಡದೆಂದು ಶಿಷ್ಯನು ಹೇಳಿದ್ದನು.
ಅದಕ್ಕೆ ಉತ್ತರವನ್ನು ಇಲ್ಲಿ ಹೇಳಿದೆ.
 
೧ ತನ್ನ ಕಾರಣವಾದ ಅವಿದ್ಯೆಯೊಂದಿಗೆ
 
- ಯಾವುದೋ ಒಂದು ಕಾಲದಲ್ಲಿ ಒಂದು ವಸ್ತುವು ಉತ್ಪನ್ನವಾದರೆ ಆ ವಸ್ತುವು
ತನ್ನ ಉತ್ಪತ್ತಿಯ ಕಾಲಕ್ಕೆ ಮೊದಲು ಇರಲಿಲ್ಲವೆಂಬುದು ಸ್ಪುಟವಾಗಿದೆ. ಈ
ಪ್ರಾಕ್-ಅಭಾವಕ್ಕೆ ಆದಿಯಿಲ್ಲ. ಆದರೆ ವಸ್ತುವು ಉತ್ಪನ್ನವಾದ ಕೂಡಲೇ ಪ್ರಾಕ್-
ಅಭಾವವು ನಾಶವಾಗುತ್ತದೆ. ಹೀಗೆಯೇ ಅವಿದ್ಯೆಗೆ ಆದಿಯಿಲ್ಲದಿದ್ದರೂ ಜ್ಞಾನವು
ಉತ್ಪನ್ನವಾದ ಕೂಡಲೇ ಅದು ಮಾಯವಾಗುತ್ತದೆ.
 
ಅನಾದೇರಸಿ ವಿಧ್ವಂಸಃ ಪ್ರಾಗಭಾವಸ್ಯ ವೀಕ್ಷಿತಃ
ಯದ್ದುದ್ದುಪಾಧಿಸಂಬಂಧಾತ್ ಪರಿಕಲ್ಪಿತಮಾತ್ಮನಿ ॥ ೨೦೦ ।
 
ಜೀವತ್ವಂ ನ ತತೋsಸ್ತು ಸ್ವರೂಪೇಣ ವಿಲಕ್ಷಣಃ ।
ಸಂಬಂಧಸ್ವಾತ್ಮನೋ ಬುದ್ಧಾ ಮಿಥ್ಯಾಜ್ಞಾನ-ಪುರಃಸರಃ । ೨೦೧