We're performing server updates until 1 November. Learn more.

This page has not been fully proofread.

೧೯೮]
 
ವಿವೇಕಚೂಡಾಮಣಿ
 
H
 
ಹೊಳೆಯುವ ಸ್ವಸ್ಯ - ಆತ್ಮನಿಗೆ ಬುದ್ಧಃ – ಬುದ್ಧಿಯ ಭ್ರಾಂತ್ಯಾ = ಭ್ರಾಂತಿಯಿಂದ
ಜೀವಭಾವಃ = ಜೀವತ್ವವು ಪ್ರಾಪ್ತಃ- ಉಂಟಾಗಿದೆ, ನ ಸತ್ಯಃ – ಸತ್ಯವಾದುದಲ್ಲ;
ಅವಸ್ತು ಸ್ವಭಾವಾತ್ – ಸ್ವಭಾವದಿಂದಲೇ ಅಸತ್ಯವಾಗಿರುವುದರಿಂದ
ಅಪಾಯ- ಮೋಹವು ತೊಲಗಿದರೆ ನ ಆಸ್ತಿ = [ಇದೂ] ಇರುವುದಿಲ್ಲ.
 
ಮೋಹ-
೧೦೭
 
೧೯೬. ಸಾಕ್ಷಿಸ್ವರೂಪನೂ ನಿರ್ಗುಣನೂ ಕ್ರಿಯಾಶೂನ್ಯನೂ ಒಳಗೆ
ಚಿದಾನಂದಸ್ವರೂಪನಾಗಿ ಹೊಳೆಯುವವನೂ ಆದ ಆತ್ಮನಿಗೆ ಬುದ್ಧಿಯ
ಭ್ರಾಂತಿಯಿಂದ ಜೀವತ್ವವು ಉಂಟಾಗಿದೆ, ಸತ್ಯವಾದುದಲ್ಲ. ಇದು ಸ್ವಭಾವ
ದಿಂದಲೇ ಅಸತ್ಯವಾಗಿರುವುದರಿಂದ ಮೋಹವು ತೊಲಗಿದಮೇಲೆ ಇರುವುದೇ
 
ಯಾವಾಂತಿಸ್ತಾನದೇವಾಸ್ಯ ಸತ್ತಾ
ಮಿಥ್ಯಾಜ್ಞಾನೋಜೃಂಭಿತಸ್ಯ ಪ್ರಮಾದಾತ್
ರಜ್ಞಾಂ ಸರ್ಪೊ ಭ್ರಾಂತಿಕಾಲೀನ ಏವ
 
ಭ್ರಾಂತೇರ್ನಾಶೇ ನೈವ ಸರ್ಪೊsಪಿ ತದ್ವತ್ ॥ ೧೯೭॥
 
ರಜ್ವಾಂ = ಹಗ್ಗದಲ್ಲಿ ಸರ್ಪಃ = ಸರ್ಪವು ಭ್ರಾಂತಿ ಕಾಲೀನಃ ಏವ = ಭ್ರಾಂತಿ
ಕಾಲದಲ್ಲಿ ಮಾತ್ರವೇ ಇರತಕ್ಕದ್ದು, ಭ್ರಾಂತೇಃ ನಾಶೇ [ಸತಿ] – ಭ್ರಾಂತಿಯ
ನಾಶವಾದಾಗ ಸರ್ಪಃ ಅಪಿ= ಸರ್ಪವೂ ಕೂಡ ನ ಏವ = ಇರುವುದಿಲ್ಲ; ತದ್ವತ್
ಹಾಗೆಯೇ ಪ್ರಮಾದಾತ್ ಪ್ರಮಾದದಿಂದ ಮಿಥ್ಯಾಜ್ಞಾನ ಉಂಭಿತಸ್ಯ ಅಸ್ಯ-
= ಮಿಥ್ಯಾ ಜ್ಞಾನದ ಮೂಲಕ ಮೆರೆಯುತ್ತಿರುವ ಇದಕ್ಕೆ ಯಾವತ್ ಭ್ರಾಂತಿಃ -
ಎಲ್ಲಿಯ ವರೆಗೆ ಭ್ರಾಂತಿಯಿರುವುದೋ ತಾವತ್ ಏವ ಸತ್ತಾ - ಅಲ್ಲಿಯ ವರೆಗೆ
ಅಸ್ತಿತ್ವವು.
 
=
 
೧೯೭. ಹಗ್ಗದಲ್ಲಿ ಸರ್ಪವು ಭ್ರಾಂತಿಕಾಲದಲ್ಲಿ ಮಾತ್ರ ತೋರುತ್ತದೆ;
ಭ್ರಾಂತಿಯು ನಾಶವಾದಾಗ ಸರ್ಪವೂ ಇರುವುದಿಲ್ಲ. ಹಾಗೆಯೇ ಪ್ರಮಾದ
ದಿಂದ ಮಿಥ್ಯಾ ಜ್ಞಾನದ ಮೂಲಕ ಮೆರೆಯುತ್ತಿರುವ ಈ ಜೀವತ್ವಕ್ಕೆ
ಎಲ್ಲಿಯ ವರೆಗೆ ಭ್ರಾಂತಿಯಿರುವುದೋ ಅಲ್ಲಿಯ ವರೆಗೆ ಮಾತ್ರ ಅಸ್ತಿತ್ವ
ವಿರುವುದು.
 
[ಹಿಂದಿನ ಶ್ಲೋಕದ ನಾಲ್ಕನೆಯ ಪಾದದ ಅರ್ಥವನ್ನು ಇಲ್ಲಿ ವಿವರಿಸಿದೆ.
 
ಅನಾದಿತ್ವಮವಿದ್ಯಾಯಾಃ ಕಾರ್ಯಸ್ಕಾಪಿ ತಥೇಷ್ಯತೇ ।
ಉತ್ಪನ್ನಾಯಾಂ ತು ವಿದ್ಯಾಯಾಮಾವಿದ್ಯಕಮನಾದಪಿ ॥ ೧೯೮ ॥