This page has been fully proofread once and needs a second look.

೧೯೪. ಶ್ರೀಗುರುವು ಹೇಳಿದನು- ಎಲೈ ಬುದ್ಧಿವಂತನೆ, ನೀನು ಚೆನ್ನಾಗಿ
ಪ್ರಶ್ನಿಸಿರುವೆ. ಅದನ್ನು ಸಾವಧಾನವಾಗಿ ಕೇಳು: ಭ್ರಾಂತಿಯಿಂದ ಮೋಹಿತ-
ರಾದವರ ಕಲ್ಪನೆಯು ನಿಜವಾಗುವುದಿಲ್ಲ.
 
ಭ್ರಾಂತಿಂ ವಿನಾ ತ್ವಸಂಗಸ್ಯ ನಿಷ್ಕ್ರಿಯಸ್ಯ ನಿರಾಕೃತೇಃ ।
ನ ಘಟೇತಾರ್ಥಸಂಬಂಧೋ ನಭಸೋ ನೀಲತಾದಿವತ್ ॥ ೧೯೫ ||
 
ತು=ಆದರೆ, ಅಸಂಗಸ್ಯ = ಅಸಂಗನಾದ, ನಿಷ್ಕ್ರಿಯಸ್ಯ = ನಿಷ್ಕ್ರಿಯನಾದ,
ನಿರಾಕೃತೇಃ=ನಿರಾಕಾರನಾದ [ಆತ್ಮನಿಗೆ], ಭ್ರಾಂತಿಂ ವಿನಾ=ಭ್ರಾಂತಿಯನ್ನು ಬಿಟ್ಟರೆ-
ನಭಸಃ=ಆಕಾಶಕ್ಕೆ, ನೀಲತಾದಿವತ್ = ನೀಲತ್ವವೇ ಮೊದಲಾದುವುಗಳ ಸಂಬಂಧದ
ಹಾಗೆ- ಅರ್ಥಸಂಬಂಧಃ = ದೃಶ್ಯ ವಸ್ತುಗಳ ಸಂಬಂಧವು, ನ ಘಟೇತ=ಉಂಟಾಗ-
ಲಾರದು.
 
೧೯೫. ಆದರೆ ಅಸಂಗನೂ[^೧] ನಿಷ್ಕ್ರಿಯನೂ[^೨] ನಿರಾಕಾರನೂ[^೩] ಆದ
ಆತ್ಮನಿಗೆ ಭ್ರಾಂತಿಯಿಂದಲ್ಲದೆ[^೪] -ಆಕಾಶಕ್ಕೆ ನೀಲತ್ವವೇ ಮೊದಲಾದುವುಗಳ
ಸಂಬಂಧದಂತೆ[^೫]- ದೃಶ್ಯವಸ್ತುಗಳ ಸಂಬಂಧವು ಉಂಟಾಗಲಾರದು.
 
[^೧] 'ಈ ಪುರುಷನು ಅಸಂಗನು' ಅಸಂಗೋ ಹ್ಯಯಂ ಪುರುಷಃ (ಬೃಹದಾರಣ್ಯಕ
ಉ. ೪. ೩. ೧೫).
[^೨] 'ಅವನು ನಿಷ್ಕಲನು ಮತ್ತು ನಿಷ್ಕ್ರಿಯನು' ನಿಷ್ಕಲಂ ನಿಷ್ಕ್ರಿಯಮ್ (ಶ್ವೇತಾ-
ಶ್ವತರ ಉ. ೬. ೧೯).
[^೩] 'ಅದು ಅಸ್ಥೂಲ, ಅನಣು' ಅಸ್ಥೂಲಮನಣು (ಹದಾರಣ್ಯಕ ಉ.
೩. ೮. ೮).
[^೪] ಸ್ಥೂಲ-ಸೂಕ್ಷ್ಮ-ಕಾರಣ- ಶರೀರಗಳಲ್ಲಿ ಇರುವ ಅಭಿಮಾನದಿಂದಲ್ಲದೆ.
[^೫] ಅವಿವೇಕಿಗಳು ಆಕಾಶವು ನೀಲವು, ಕೆಂಪುಬಣ್ಣವುಳ್ಳದ್ದು ಎಂದು ಕಲ್ಪಿಸಿಕೊಂಡರೆ
ಆ ಗುಣಗಳು ನಿಜವಾಗುವುದಿಲ್ಲ. ಹೀಗೆಯೇ ಪರಮಾತ್ಮನಲ್ಲಿ ಜೀವಭಾವವೂ ಕೂಡ
ಅಪ್ರಾಮಾಣಿಕವು.]
 
ಸ್ವಸ್ಯ ದ್ರಷ್ಟುರ್ನಿರ್ಗುಣಸ್ಯಾಕ್ರಿಯಸ್ಯ
ಪ್ರತ್ಯಗ್ಬೋಧಾನಂದರೂಪಸ್ಯ ಬುದ್ದೇಃ ।
ಭ್ರಾಂತ್ಯಾ ಪ್ರಾಪ್ತೋ ಜೀವಭಾವೋ ನ ಸತ್ಯೋ
ಮೋಹಾಪಾಯೇ ನಾಸ್ತ್ಯ ವಸ್ತುಸ್ವಭಾವಾತ್ ॥ ೧೯೬ ||
 
ದ್ರಷ್ಟುಃ =ಸಾಕ್ಷಿಯಾದ, ನಿರ್ಗುಣಸ್ಯ=ನಿರ್ಗುಣನಾದ, ಅಕ್ರಿಯಸ್ಯ =ಕ್ರಿಯಾ-
ಶೂನ್ಯನಾದ, ಪ್ರತ್ಯಕ್-ಬೋಧ-ಆನಂದ-ರೂಪಸ್ಯ = ಒಳಗೆ ಚಿದಾನಂದಸ್ವರೂಪನಾಗಿ