This page has been fully proofread once and needs a second look.

ಯಾವಾಗಲೂ, ದೇಹೇಂದ್ರಿಯಾದಿಷು=ದೇಹೇಂದ್ರಿಯಾದಿಗಳಲ್ಲಿ, ಅಹಮ್ ಇತಿ=
'ನಾನು' ಎಂದು, ಭೃಶಂ= ಬಹಳವಾಗಿ, ಅಭಿಮನ್ಯತೇ=ಅಭಿಮಾನವನ್ನು ಮಾಡುತ್ತದೆ.
 
೧೮೫. ಚಿದಾತ್ಮನ ಪ್ರತಿಬಿಂಬದ ಶಕ್ತಿಯಿಂದ ಅನುಸರಿಸಲ್ಪಟ್ಟ[^೧]
ವಿಜ್ಞಾನವೆಂಬ ಪ್ರಕೃತಿಯ ವಿಕಾರವು ಜ್ಞಾನಕ್ರಿಯೆಗಳುಳ್ಳದ್ದು. ಇದು
ದೇಹ ಇಂದ್ರಿಯ ಇವೇ ಮೊದಲಾದುವುಗಳಲ್ಲಿ 'ನಾನು' ಎಂಬ ಅಭಿಮಾನ-
ವನ್ನು ಪಡೆಯುತ್ತದೆ.
[^] ವಿಜ್ಞಾನಮಯಕೋಶವು ನಿಜವಾಗಿಯೂ ಅಚೇತನವಾದದ್ದು. ಚಿತ್ರಶ ಕ್ತಿಯ
ಪ್ರತಿಬಿಂಬದಿಂದ ಚೇತನವಾಗಿರುವಂತೆ ಕಾಣುತ್ತದೆ.]
 
ಅನಾದಿಕಾಲೋsಯಮಹಂಸ್ವಭಾವೋ
ಜೀವಃ ಸಮಸ್ತವ್ಯವಹಾರವೋಡಾಢಾ
ಕರೋತಿ ಕರ್ಮಾಣ್ಯಪಿ ಪೂರ್ವವಾಸನಃ
ಪುಣ್ಯಾನ್ಯಪುಣ್ಯಾನಿ ಚ ತತ್ಲಾನಿ
ಭುಂಕೇಕ್ತೇ ವಿಚಿತ್ರಾಸ್ವಪಿ ಯೋನಿಸು ಪ್ಷು ವ್ರಜ-
ನ್ಯಾಯಾತಿ ನಿರ್ಯಾತ್ಯದನಾಯಾತಿ ನಿರ್ಯಾತ್ಯಧ ಊರ್ಧ್ವಮೇಷಃ ।
ಸ್ಯೈವ ವಿಜ್ಞಾನಮಯಸ್ಯ ಜಾಗ್ರತ್-
ಸ್ವಪ್ಪಾನಾದ್ಯವಸ್ಥಾಃ ಸುಖದುಃಖಭೋಗಃ ॥ ೧೮೭ ||
 
ಅನಾದಿಕಾಲಃ = ಅನಾದಿಕಾಲದಿಂದ ಬಂದಿರುವ, ಅಹಂಸ್ವಭಾವಃ -= 'ನಾನು'
ಎಂಬ ಸ್ವಭಾವವುಳ್ಳ, ಅಯಂ ಜೀವಃ = ಈ ಜೀವನು, ಸಮಸ್ತ-ವ್ಯವ ಹಾರ-
ವೋಢಾ= ಸಮಸ್ತ ವ್ಯವಹಾರಗಳನ್ನು ನಿರ್ವಹಿಸುತ್ತಿರುವವನಾಗಿ, ಪೂರ್ವವಾಸನಃ=
ಪೂರ್ವವಾಸನೆಗಳುಳ್ಳವನಾಗಿ, ಪುಣ್ಯಾನಿ ಅಪುಣ್ಯಾನಿ ಕರ್ಮಾಣಿ ಅಪಿ = ಸುಕೃತ-
ದುಷ್ಕೃತರೂಪವಾದ ಕರ್ಮಗಳನ್ನು, ಕರೋತಿ -= ಮಾಡುತ್ತಾನೆ ತತ್ , ತತ್-ಫಲಾನಿ ಚ=
ಮತ್ತು ಅವುಗಳ ಫಲಗಳನ್ನು, ಭುಂಕ್ತೇ = ಅನುಭವಿಸುತ್ತಾನೆ; ಏಷಃ -= ಇವನು,
ವಿಚಿತ್ರಾಸು ಯೋನಿಸು -ಷು = ಬಗೆ ಬಗೆಯಾದ ಯೋನಿಗಳಲ್ಲಿ ಪ್, ವ್ರಜನ್ -= ಪ್ರವೇಶಿಸು-
ವವನಾಗಿ, ಅಧಃ ಆಯಾತಿ-=ಕೆಳಕ್ಕೆ ಬರುತ್ತಾನೆ, ಊರ್ಧಂ ನಿರ್ಯಾತಿ ಧ್ವಂ ನಿರ್ಯಾತಿ=ಮೇಲಕ್ಕೆ
ಹೋಗುತ್ತಾನೆ; ಅಸ್ಯ ವಿಜ್ಞಾನಮಯಸ್ಯ ಏವ-= ಈ ವಿಜ್ಞಾನಮಯನಿಗೇ, ಜಾಗ್ರತ್
ಸ್ವಾ
-
ಸ್ವಪ್ನಾ
ದಿ. -ಅವಸ್ಥಾಃ -= ಜಾಗ್ರತ್ ಸ್ವಪ್ನ ಮೊದಲಾದ ಅವಸ್ಥೆಗಳೂ, ಸುಖ.-ದುಃಖ
ಭೋಗಃ = ಸುಖದುಃಖಗಳ ಅನುಭವವೂ [ಆಗುತ್ತವೆ.]
 
೧೮೬-೧೮೭,. ಈ (ವಿಜ್ಞಾನಮಯನಿಗೆ) ಆದಿಯಿಲ್ಲ. ಇವನು (ದೇಹೇಂದ್ರಿ-
ಯಾದಿಗಳಲ್ಲಿ) 'ನಾನು' ಎಂಬ ಬುದ್ಧಿಯುಳ್ಳವನು, ಜೀವನೆಂಬ ಹೆಸರುಳ್ಳ-
ವನು, ಸಮಸ್ತ ವ್ಯವಹಾರಗಳನ್ನು ನಿರ್ವಹಿಸುತ್ತಾನೆ;[^೧] ಇವನು ಪೂರ್ವ