This page has been fully proofread once and needs a second look.

ವಿವೇಕಚೂಡಾಮಣಿ
 
ಸರ್ವ-ವೇದಾಂತ-ಸಿದ್ಧಾಂತ- ಗೋಚರಂ ತಮಗೋಚರಮ್ ।
ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋsಸ್ಮ್ಯ -
ಹಮ್ ॥ ೧ ||
೧||

ಸರ್ವ-ವೇದಾಂತ-ಸಿದ್ಧಾಂತ- ಗೋಚರಂ = ಸಮಸ್ತ ಉಪನಿಷತ್ತುಗಳ ತಾತ್ಪ-
ರ್ಯಕ್ಕೆ ವಿಷಯನಾಗಿರುವ , ಅಗೋಚರಂ = [ವಾಕ್ಕು, ಮನಸ್ಸು ಇವುಗಳಿಗೆ]
ವಿಷಯನಲ್ಲದ , ಪರಮಾನಂದಂ = ಪರಮಾನಂದಸ್ವರೂಪನಾದ , ಸದ್ಗುರುಂ=
ಸದ್ಗುರುವಾದ, ತಂ ಗೋವಿಂದಂ = ಆ ಗೋವಿಂದನನ್ನು, ಅಹಂ=ನಾನು, ಪ್ರಣತಃ ಅಸ್ಮಿ=
ಪ್ರಣಾಮಮಾಡುವವನಾಗಿದ್ದೇನೆ.


೧. ಸಮಸ್ತ ಉಪನಿಷತ್ತುಗಳ ತಾತ್ಪರ್ಯಕ್ಕ್ಕೆ ಮಾತ್ರ ವಿಷಯನಾಗಿರುವವನೂ
ವಾಙ್ಮನಸ್ಸುಗಳಿಗೆ[^೧] ವಿಷಯನಲ್ಲದವನೂ ಪರಮಾನಂದ ಸ್ವರೂಪನೂ ಸದ್ಗುರುವೂ
ಆದ ಗೋವಿಂದನಿಗೆ ಮಣಿಯುತ್ತೇನೆ.
 
[ಗ್ರಂಥವು ನಿರ್ವಿಘ್ನವಾಗಿ ಸಮಾಪ್ತವಾಗಲು ಶ್ರೀ ಶಂಕರಭಗವತ್ಪಾದರು ಗುರುಗಳಿಗೆ ಗುರುವೂ ತಮ್ಮ ಇಷ್ಟದೇವತೆಯೂ ಆದ ವಿಷ್ಣುವಿಗೆ ನಮಸ್ಕರಿಸುತ್ತಾರೆ;
ಅಥವಾ ಇಲ್ಲಿ ಗೋವಿಂದನೆಂದರೆ ಆಚಾರ್ಯರ ಗುರುವಾದ ಶ್ರೀಗೋವಿಂದಭಗವ-
ತ್ಪಾದರೂ ಆಗಬಹುದು.
 
[^೧] ಅಥವಾ ವಿಷಯಾಸಕ್ತರಿಗೆ.]
 
ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕ -ಧರ್ಮಮಾರ್ಗ-ಪರತಾ ವಿದ್ವತ್ತ್ವ ಮಸ್ಮಾತ್ ಪರಮ್ ।
ಆತ್ಮಾನಾತ್ಮ-ವಿವೇಚನಂ ಸ್ವನುಭವೋ ಬ್ರಹ್ಮಾ ತ್ಮನಾ ಸಂಸ್ಥಿತಿ-
ರ್ಮುಕ್ತಿರ್ನೋ ಶತಕೋಟಿ-ಜನ್ಮ-ಸುಕೃತೈಃ ಪುಣ್ಯೈರ್ವಿನಾ
ಲಭ್ಯತೇ ॥ ೨ ॥
 
ಜಂತೂನಾಂ =ಪ್ರಾಣಿಗಳಿಗೆ, ನರಜನ್ಮ = ಮನುಷ್ಯ ಜನ್ಮವು, ದುರ್ಲಭಂ = ಕಷ್ಟ
ಸಾಧ್ಯವಾದುದು, ಅತಃ = ಇದಕ್ಕಿಂತಲೂ ಪುಂಸ್ತ್ವಂ -= ಪುರುಷತ್ವವು [ದುರ್ಲಭವು],
ತತಃ = ಅದಕ್ಕಿಂತಲೂ, ವಿಪ್ರತಾ = ಬ್ರಾಹ್ಮಣತ್ವವು [ದುರ್ಲಭವು], ತಸ್ಮಾತ್ = ಅದ
ಕ್ಕಿಂತಲೂ, ವೈದಿಕ ಧರ್ಮಮಾರ್ಗ- ಪರತಾ = ವೈದಿಕ ಧರ್ಮಮಾರ್ಗದಲ್ಲಿ ವಿಶ್ವಾಸವು
[ದುರ್ಲಭವು], ಅಸ್ಮಾತ್ = ಇದಕ್ಕಿಂತಲೂ, ವಿದ್ವತ್ತ್ವಂ =ಶಾಸ್ತ್ರ ಪಾಂಡಿತ್ಯವು ಪರಂ =
ಅಧಿಕವಾದುದು; ಆತ್ಮಾನಾತ್ಮ- ವಿವೇಚನಂ = ಆತ್ಮ ಅನಾತ್ಮ ಇವುಗಳ ವಿಚಾರ