This page has not been fully proofread.

೧೭೯]
 
ವಿವೇಕಚೂಡಾಮಣಿ
 
ಅಸಂಗ-ಚಿದ್ರೂಪಮಮುಂ ವಿಮೋಹ

ದೇಹೇಂದ್ರಿಯ-ಪ್ರಾಣ-ಗುಣೈರ್ನಿಬದ್ಧ

ಅಹಂ-ಮಮತಿ ಭ್ರಮಯತ್ಯಜಂ
 

 

ಮನಃ ಸ್ವಕೃತ್ಯೇಷು ಫಲೋಪಭುಕ್ತಿಸು ॥ ೧೭೮ ॥

 
ಮನಃ - ಮನಸ್ಸು ಅಸಂಗ- ಚಿದ್ರೂಪಮ್ ಅಮುಂ ಸಂಗರಹಿತನೂ

ಜ್ಞಾನಸ್ವರೂಪನೂ ಆದ ಇವನನ್ನು ದೇಹ ಇಂದ್ರಿಯ- ಪ್ರಾಣ-ಗುಣೈಃ - ದೇಹ

ಇಂದ್ರಿಯ ಪ್ರಾಣ ಎಂಬ ಹಗ್ಗಗಳಿಂದ ನಿಬದ್ಧ - ಕಟ್ಟಿ ವಿಮೋಹ = ಭ್ರಾಂತಿ

ಗೊಳಿಸಿ ಸ್ವ ಕೃತ್ಯೇಷು - ತನ್ನ ಕೆಲಸಗಳಾದ ಫಲೋಪಭುಕ್ತಿಸು-ಫಲೋಪಭೋಗ

ಗಳಲ್ಲಿ ಅಹಂ, ಮಮ. ಇತಿ - 'ನಾನು ನನ್ನದು' ಎಂದು ಅಜಸ್ರಂ = ಯಾವಾಗಲೂ

ಭ್ರಮಯತಿ - ಸುತ್ತಿಸುತ್ತದೆ.
 
=
 

 
೧೭೮, ಮನಸ್ಸೇ
 
ಅಸಂಗನೂ ಚಿದ್ರೂಪನೂ ಆದ ಇವನನ್ನು

ದೇಹೇಂದ್ರಿಯಪ್ರಾಣಗಳೆಂಬ ಹಗ್ಗಗಳಿಂದ ಕಟ್ಟಿ, ಭ್ರಾಂತಿಗೊಳಿಸಿ, ತಾನೇ

ಮಾಡಿಕೊಂಡ ಸುಖವೇ ಮೊದಲಾದ ಅನುಭವಗಳಲ್ಲಿ 'ನಾನು, ನನ್ನದು'

ಎಂಬ ಭಾವನೆಗಳಿಂದ ಯಾವಾಗಲೂ ಸುತ್ತಿಸುತ್ತದೆ.
 

 
ಅಧ್ಯಾಸ-ದೋಷಾತ್ ಪುರುಷಸ್ಯ ಸಂಸ್ಕೃತಿ-

ರಧ್ಯಾಸ-ಬಂಧಮುನೈವ ಕಲ್ಪಿತಃ ।

ರಜಸ್ತಮೋ-ದೋಷವತೋಽವಿವೇಕಿನೋ
 
೯೭
 

ಜನ್ಮಾದಿ-ದುಃಖಸ್ಯ ನಿದಾನಮೇತತ್ ॥ ೧೭೯
 

 
ಪುರುಷಸ್ಯ - ಮನುಷ್ಯನಿಗೆ ಅಧ್ಯಾಸ ದೋಷಾತ್ – ಅಧ್ಯಾಸವೆಂಬ ದೋಷ

ದಿಂದಲೇ ಸಂಸ್ಕೃತಿಃ – ಸಂಸಾರವು, ತು ಆದರೆ ಅಧ್ಯಾಸಬಂಧಃ = ಅಧ್ಯಾಸವೆಂಬ

ಬಂಧವು ಅಮುನಾ ಏವ = ಇದರಿಂದಲೇ ಕಲ್ಪಿತಃ - ಕಲ್ಪಿತವಾಗಿದೆ; ರಜಸ್ತಮೋ-

ದೋಷವತಃ - ರಜಸ್ಸು ತಮಸ್ಸು ಎಂಬ ದೋಷಗಳುಳ್ಳ ಅವಿವೇಕಿನಃ = ಅವಿ

ವೇಕಿಯ ಜನ್ಮಾದಿ. ದುಃಖಸ್ಯ – ಜನ್ಮವೇ ಮೊದಲಾದ ದುಃಖಕ್ಕೆ ಏತತ್ - ಇದೇ

ನಿದಾನಂ= ಕಾರಣವು.
 

 
೧೭೯, ಮನುಷ್ಯನಿಗೆ ಅಧ್ಯಾಸವೆಂಬ[^೧] ದೋಷದಿಂದಲೇ ಸಂಸಾರವು.

ಆದರೆ ಅಧ್ಯಾಸವೆಂಬ ಬಂಧವು ಈ ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದೆ.

ರಜಸ್ತಮಸ್ಸು ಗಳೆಂಬ ದೋಷಗಳುಳ್ಳ ಅವಿವೇಕಿಯ ಜನ್ಮಾದಿದುಃಖಕ್ಕೆ

ಇದೇ ಕಾರಣವಾಗಿರುತ್ತದೆ.
 

 
[೧ ವಸ್ತುವಿನಲ್ಲಿ ಅವಸ್ತುವನ್ನೂ ಅವಸ್ತುವಿನಲ್ಲಿ ವಸ್ತುವನ್ನೂ ಆರೋಪಿಸುವುದು.

೨ ಆವರಣ- ವಿಕ್ಷೇಪಗಳಿಗೆ ಕಾರಣವಾದ ದೋಷಗಳಿಂದ ಕೂಡಿರುವವನಿಗೆ.]
 
4