This page has not been fully proofread.

029]
 
ವಿವೇಕಚೂಡಾಮಣಿ
 
ವೆಲ್ಲವನ್ನೂ ಸೃಜಿಸುತ್ತದೆ. ಹಾಗೆಯೇ ಜಾಗೃದವಸ್ಥೆಯಲ್ಲಿಯೂ ಯಾವ
ವಿಶೇಷವೂ ಇರುವುದಿಲ್ಲ. ಆದುದರಿಂದ ಇದೆಲ್ಲವೂ ಮನಸ್ಸಿನ ವಿಜೃಂಭಣೆಯೇ,
 
[ಹಿಂದೆ ಹೇಳಿದ್ದನ್ನೇ ಇಲ್ಲಿ ವಿಸ್ತರಿಸಿದೆ.
 
ಸುಷುಪ್ತಿಕಾಲೇ ಮನಸಿ ಪ್ರಲೀನೇ
ನೈವಾಸ್ತಿ ಕಿಂಚಿತ್ ಸಕಲಪ್ರಸಿದ್ಧ ।
ಮನಃಕಲ್ಪಿತ ಏವ ಪುಂಸಃ
ಸಂಸಾರ ಏತಸ್ಯ ನ ವಸ್ತು ತೋಸ್ತಿ
 
ಅತೋ
 
೯೩
 
11 020 11
 
ಸುಷುಪ್ತಿ ಕಾಲೇ – ಸುಷುಪ್ತಿ ಕಾಲದಲ್ಲಿ ಮನಸಿ ಪ್ರಲೀನೇ = ಮನಸ್ಸು ಲಯ
ವಾಗಿರುವಾಗ ಕಿಂಚಿತ್ = ಯಾವುದೂ ನ ಏವ ಆಸ್ತಿ - ಇಲ್ಲವೆಂಬುದು ಸಕಲ.
ಪ್ರಸಿದ್ಧಃ - ಎಲ್ಲರಿಗೂ ಪ್ರಸಿದ್ಧವಾಗಿರುವುದರಿಂದ; ಅತಃ – ಆದುದರಿಂದ ಏತಸ್ಯ
ಪುಂಸಃ = ಈ ಮನುಷ್ಯನಿಗೆ ಸಂಸಾರಃ = ಸಂಸಾರವೆಂಬುದು ಮನಃಕಲ್ಪಿತಃ ಏವ
ಮನಸ್ಸಿನಿಂದ ಕಲ್ಪಿತವಾದದ್ದೇ, ವಸ್ತುತಃ - ಯಥಾರ್ಥವಾಗಿ ನ ಆಸ್ತಿ - ಇರು
ವುದಿಲ್ಲ.
 
೧೭೧. ಸುಷುಪ್ತಿ ಕಾಲದಲ್ಲಿ ಮನಸ್ಸು ಲಯವಾಗಿರುವಾಗ ಯಾವು
ದೊಂದು ವಸ್ತುವೂ ಇರುವುದಿಲ್ಲವೆಂಬುದು ಜಗತ್ರಸಿದ್ಧವಾದ ವಿಷಯ.
ಆದುದರಿಂದ ಮನುಷ್ಯನಿಗೆ ಸಂಸಾರವು ಮನಸ್ಸಿನಿಂದಲೇ ಕಲ್ಪಿತವಾಗಿರು
ವುದು, ಯಥಾರ್ಥವಾಗಿರುವುದಿಲ್ಲ.
 
[೧೨೧ನೆಯ ಶ್ಲೋಕವನ್ನು ನೋಡಿ.
 
ವಾಯುನಾನೀಯತೇ ಮೇಘಃ ಪುನನೈವ ನೀಯತೇ ।
ಮನಸಾ ಕಲ್ಪತೇ ಬಂಧೋ
 
ಮೋಕ್ಷವ ಕಲ್ಪತೇ ॥ ೧೭೨ ।
 
ಮೇಘಃ = ಮೇಘವು ವಾಯುನಾ - ಗಾಳಿಯಿಂದ ಆನೀಯತೇ = ತರ
ಲ್ಪಡುತ್ತದೆ, ಪುನಃ = ಮತ್ತೆ ತೇನ ಏವ - ಅದರಿಂದಲೇ ನೀಯತೇ = ಒಯ್ಯಲ್ಪಡು
ಇದೆ; ಬಂಧಃ = ಬಂಧವು ಮನಸಾ = ಮನಸ್ಸಿನಿಂದ ಕಲ್ಪತೇ = ಕಲ್ಪಿತವಾಗುತ್ತದೆ,
ಮೋಕ್ಷ - ಮೋಕ್ಷವು ತೇನ ಏವ = ಅದರಿಂದಲೇ ಕಲ್ಪತೇ = ಕಲ್ಪಿತವಾಗುತ್ತದೆ.
 
೧೭೨. ಮೇಘವು ಗಾಳಿಯಿಂದಲೇ ಬರುತ್ತದೆ ಮತ್ತು ಗಾಳಿಯಿಂದಲೇ
ಹೋಗುತ್ತದೆ. ಹಾಗೆಯೇ ಸಂಸಾರಬಂಧವೂ ಮೋಕ್ಷವೂ ಮನಸ್ಸಿನಲ್ಲೇ
ಕಲ್ಪಿತವಾಗುತ್ತವೆ.