This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲ. ಕಿರುಬೆರಳಿಗಿಂತ ಹೆಬ್ಬೆರಳು ಭತ್ತದ ಕಾಳಿನಷ್ಟು ಮಾತ್ರ ಉದ್ದವಾಗಿದೆ.
 
ಸಾರ್ಧತ್ರಯಪರೀಣಾಹೌ ಮಧ್ಯಜೇಷ್ಠಾವುದಾಹೃತ್ ।
ಅನ್ಯ ಹಿತದರ್ಧೋನ್ ಅನ್ಯಾ ಸಾರ್ಧದ್ವಯಾಂಗುಲಾ ॥23॥
ಪಾದೋನಾಂತಪರಿಣಾಹಾಃ ಸರ್ವೆ ಜೇಷ್ಠಂ ವಿನಾ ಸ್ಮೃತಮ್ ।
 
ಅರ್ಥ - ಮಧ್ಯದ ಬೆರಳು ಹಾಗೂ ಹೆಬ್ಬೆರಳಿನ ಸುತ್ತಳತೆ ಮೂರುವರೆ
ಅಂಗುಲಗಳು, ಉಳಿದ ತರ್ಜನಿ-ಅನಾಮಿಕೆಗಳ ಸುತ್ತಳತೆ ಮಧ್ಯ ಹಾಗೂ
ಹೆಬ್ಬೆರಳಿಗಿಂತ ಅರ್ಧಾಂಗುಲ ಕಡಿಮೆ. ಅಂದರೆ ಮೂರುಅಂಗುಲ ಸುತ್ತಳತೆ.
ತರ್ಜನೀ ಹಾಗೂ ಅನಾಮಿಕೆಗಿಂತ ಕಿರುಬೆರಳಿನ ಸುತ್ತಳತೆ ಅರ್ಧಾಂಗುಲ
ಕಮ್ಮಿಯಾಗಿದ್ದು ಎರಡುವರೆ ಅಂಗುಲ ಸುತ್ತಳತೆಯು.
 
84
 
ಹೆಬ್ಬೆರಳನ್ನು ಬಿಟ್ಟು ಉಳಿದ ಎಲ್ಲಾ ಬೆರಳುಗಳೂ ಬುಡಕ್ಕಿಂತಲೂ ತುದಿಯಲ್ಲಿ
ಕಾಲಂಗುಲ ಕಮ್ಮಿ ಸುತ್ತಳತೆ ಇರುತ್ತವೆ. ಹೆಬ್ಬೆಟ್ಟಿನ ಆದಿ ಹಾಗೂ ಅಂತ್ಯಗಳಲ್ಲಿ
ಸುತ್ತಳತೆ ಒಂದೇ ರೀತಿ ಇರುತ್ತದೆ.
 
ವವಿಸ್ತಾರಸದೃಶಃ ಪರಿಣಾಹೋ ಗಲಸ್ಯ ಚ
 
ಲಲಾಟಕುಕ್ಷಿಕಂಠಾಸ್ತು ದೀರ್ಘರೇಖಾತ್ರಯಾನ್ವಿತಾಃ ।
ವೃತ್ತೋ ಗಲೋ ಬಾಹವಶ್ಚ ಸ್ತನಾವಂಗುಲಯಸ್ತಥಾ ॥25॥
 
॥24।1
 
ರಕ್ತಾಃ ತಲನಖಾಶೈವ ನೇತ್ರಾಂತೋಽಧರ ಏವ ಚ ।
 
-
 
ಅರ್ಥ - ಎದೆಯ ವಿಸ್ತಾರ 19ಮುಕ್ಕಾಲು (19%), ಅಷ್ಟೇ ಕುತ್ತಿಗೆಯ
ಸುತ್ತಳತೆ ಇರಬೇಕು. ಲಲಾಟ, ಉದರ, ಕುತ್ತಿಗೆಗಳಲ್ಲಿ ಉದ್ದವಾದ ಮೂರು
ರೇಖೆಗಳಿರಬೇಕು. ಹಾಗೂ ಕುತ್ತಿಗೆ, ತೋಳುಗಳು, ಸ್ತನ ಹಾಗೂ ಬೆರಳು
ದುಂಡಾಗಿರಬೇಕು. ಅಂಗೈ, ಅಂಗಾಲು, ನಖಗಳು, ಕಣ್ಣಿನ ತುದಿ, ಕೆಳಗಿನ ಹಾಗೂ
 
1. ಅಂಗುಲೀಭಿಃ ಸಹಿತಃ ಸಾಂಗುಲಃ ತಲಃ ಅಂಗುಲಶ್ಚತ್ಯುಭಯಂ ಸಮಮ್ । ತಲವಿಕೃತಿಶ್ಚ
ತದ್ವದೇವ । ತಲವಿಕೃತಿಃ ತಲದೈರ್ಥ್ಯಂ ಚೇತಿ ತ್ರಯಂ ಪೃಥಕ್ ಪೃಥಕ್ ಸವಾದ-ಸಾರ್ಧ
ಚತುರಂಗುಲಮಿತಿ ಭಾವ- ವ.ಟೀ.
 
2. ಸರ್ವಾಂಗುಲೀನಾಂ ಕ್ರಮಾತ್ ಪಾದಯ್ಯನತ್ವಂ ತತ್ಪರಿಣಾಹೋ ಭವೇದಿತಿ ಭಾವಃ - ವ.ಟೀ.