This page has been fully proofread once and needs a second look.

ಅಂಸಯೋರ್ವಿಸ್ತೃತಿಶ್ಚೈವ ಪೃಥಗಷ್ಟಾಂಗುಲಾ ಮತಾ ೧೮ ॥॥
ಸಪ್ತಾಂಗುಲೋಚ್ಛ್ರಯಃ ಕಕ್ಷಾದುಪರಿ ಸ್ಕಂಧಯೋರ್ಮತಾ।
 
ಅರ್ಥ- ಹೆಗಲಿನ ವಿಸ್ತಾರವಾದರೋ ಪ್ರತ್ಯೇಕಪ್ರತ್ಯೇಕವಾಗಿ ಎಂಟು ಅಂಗುಲ. ಕಂಕುಳಿನಿಂದ ಹೆಗಲಿನವರೆಗೂ ಏಳು ಅಂಗುಲ.
 
ಅಷ್ಟತ್ರಿಂಶಾಂಗುಲಂ ಚೈವ ಹಸ್ತಯೋರ್ಮಾನಮುಚ್ಯತೇ ॥ ೧೯ ॥
 
ಅಷ್ಟಾದಶಾಂಗುಲೋ ಬಾಹ್ವೋಃ ಪರೀಣಾಹ ಉದಾಹೃತಃ ।
ಕ್ರಮಾದೂನಂ ತದಂತೇ[^1] ತುಸಾರ್ಧಾಷ್ಟಾಂಗುಲಮೀರಿತಮ್ ॥ ೨೦ ॥
 
ಅರ್ಥ - ಬಾಹುಗಳ ಉದ್ದ 38 ಅಂಗುಲಗಳು, ತೋಳಿನ ಸುತ್ತಳತೆ ಹದಿನೆಂಟು ಅಂಗುಲ. ಕ್ರಮವಾಗಿ ಕೆಳಗೆ ಇಳಿದಂತೆ ಕಡಿಮೆ- ಯಾಗುತ್ತಾ ಬಾಹುವಿನ ತುದಿಯಲ್ಲಿ ಎಂಟುವರೆ ಅಂಗುಲಗಳು.
 
ಸಾಂಗುಲಸ್ತು ತಲಃ ಸಾರ್ಧನವಾಂಗುಲ ಉದಾಹೃತಃ ।
ಸಮಂ ತದುಭಯಂ ಜ್ಞೇಯಂ ತಥೈವ ತಲವಿಸ್ತೃತಿಃ ॥ ೨೧ ॥
 
ಅರ್ಧಾಂಗುಲೋನ್ನತಾ ಮಧ್ಯಾ ದ್ವಯೋಃ ಸಾರ್ಧಾಂಗುಲೋ- ನ್ನತಾ ।
ಕನಿಷ್ಠಿಕಾಯಾಸ್ತಸ್ಯಾಸ್ತು ವ್ರೀಹಿಮಾನಾಧಿಕಃ ಪರಃ ॥ ೨೨ ॥
 
ಅರ್ಥ - ನಡುಬೆರಳಿನಿಂದ ಕೂಡಿದ ಅಂಗೈಯ ಉದ್ದ 9ವರೆ(91/2)
ಅಂಗುಲಗಳು, ಅಂಗೈಯ ಉದ್ದ ಮಾತ್ರವಾದರೆ ನಾಲ್ಕು ಮುಕ್ಕಾಲು ಅಂಗುಲಗಳು. ಅಂಗೈಯ ಅಗಲವೂ ಸಹ ನಾಲ್ಕು ಮುಕ್ಕಾಲು(4 3/4) ಅಂಗುಲಗಳು, ಮಧ್ಯದ ಬೆರಳು ನಾಲ್ಕು ಮುಕ್ಕಾಲು ಅಂಗುಲ. ತರ್ಜನಿ ಹಾಗೂ ಅನಾಮಿಕೆಗಳು ಮಧ್ಯದ
ಬೆರಳಿನ ಉದ್ದಕ್ಕಿಂತ ಅರ್ಧಾಂಗುಲ ಕಡಿಮೆ ಉದ್ದ. ತರ್ಜನಿಯ ಹಾಗೂ ಅನಾಮಿಕೆಯ ಉದ್ದ ನಾಲ್ಕು ಕಾಲು ಅಂಗುಲ(4 1/4) ಕಿರುಬೆರಳಾದರೋ ನಡುಬೆರಳಿಗಿಂತ ಒಂದುವರೆ ಅಂಗುಲ ಕಡಿಮೆ. ಅಂದರೆ ಮೂರೂಕಾಲು (3 1/4)
 
[^1]. ತದಂತೇ - ಬಾಹಂತೇ । ಸಾರ್ಧಾಷ್ಟಾಂಗುಲಂ ಜ್ಞೇಯಮ್ (ವ.ಟೀ.)