This page has not been fully proofread.

82
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಕಟ್ಯಾ ವಾಂಗುಲಾಧಿಕ್ಯಂ ನಾಭೇರದ ಉದಾಹೃತಮ್ ॥15॥
 
ನಾಭಿಃ ಸಾರ್ಧಾಂಗುಲಶೈವ ಗಂಭೀರೋSರ್ಧಾಂಗುಲೋಂತತಃ ।
ವೃತ್ತಃ ಪ್ರದಕ್ಷಿಣಶೈವ ದ್ವಿಚತ್ವಾರಿಂಶದಂಗುಲಮ್ ॥16॥
 
ಮಧ್ಯಂ ಸ್ತನೇ ಪರೀಣಾಹ: ಷಡಂಗುಲಮತೋSಧಿಕ: ।
 
ಅರ್ಥ ನಾಭಿಯ ಕೆಳಗಿನ ಹೊಟ್ಟೆಯ ಸುತ್ತಳತೆ ಟೊಂಕಕ್ಕಿಂತ ಒಂದಂಗುಲ
ಅಧಿಕ ಎಂದರೆ 39 ಅಂಗುಲ, ನಾಭಿಯು ಒಂದುವರೆ ಅಂಗುಲವು. ನಾಭಿಯ
ಸುಳಿಯ ಆಳ ಅರ್ಧಾಂಗುಲ, ನಾಭಿಯು ದುಂಡಾಗಿದ್ದು ಪ್ರದಕ್ಷಿಣಾಕಾರವಾದ
ನಾಭಿಃ ಸಾರ್ಧಾಂಗುಲಗಂಭೀರಃ, ಅಂತೇ
 
ಸುಳಿಯಿಂದ ಕೂಡಿರಬೇಕು
 
ಅರ್ಧಾಂಗುಲವಿಸ್ತಾರ (ನಟಿ)
 
ನಡುವಿನ ಮಧ್ಯಭಾಗದ ಸುತ್ತಳತೆ 42 ಅಂಗುಲ. ಎದೆಯ ಸುತ್ತಳತೆ
ನಡುಭಾಗಕ್ಕಿಂತ ಆರಂಗುಲ ಅಧಿಕ. ನಲವತ್ತೆಂಟು ಅಂಗುಲವೆಂದರ್ಥ.
 
ಏಕೋನವಿಂಶಾಂಗುಲಂ ತದುರೋವಿಸ್ತಾರಲಕ್ಷಣಮ್ ॥17॥
ಪಾದೋನಮಂಗುಲಂ ಚೈವ ಭುಜಾಭ್ಯಾಂ ಸಹ ಸಾರ್ಧಕಮ್ ।
 
ಅರ್ಥ - ಹತ್ತೊಂಭತ್ತು ಅಂಗುಲ ಮತ್ತು
 
ಕಾಲು ಅಂಗುಲ ಕೂಡಿಸಿದಾಗ
ಬರುವ ಹತ್ತೊಂಭತ್ತು ಮುಕ್ಕಾಲು ಎದೆಯ ವಿಸ್ತಾರವಿರಬೇಕು. ಎರಡು
ಭುಜಗಳಿಂದ ಕೂಡಿಸಿ ಎದೆಯ ವಿಸ್ತಾರ ಹೇಳಿದಾಗ (28+1/4+1=29-1/4)
ಇಪ್ಪತ್ತೊಂಭತ್ತು ಕಾಲು ಆಗುತ್ತದೆ.
 
1. ಏಕೋ ನ ವಿಂಶಾಂಗುಲಂ + ಪಾದೋನೈಕಾಂಗುಲಂ ಚ । ಉರೋ ವಿಸ್ತಾರಲಕ್ಷಣಮ್
2. ಭುಜಾಭ್ಯಾಂ ಸಹ ಸಾರ್ಧಕಮಿತ್ಯ ಸ್ಯಾಭಿಪ್ರಾಯಮಾಹ । ದ್ವಾಭ್ಯಾಂ ಭುಜಾಭ್ಯಾಂ ಸಹ
ಉರಸೋ ಮಾನೇ ಕೃತೇ ಸತಿ ಸಾರ್ಧೈಕಪಾದಾಷ್ಟಾವಿಂಶಾಂಗುಲಂ ಭವೇತ್ - ವ.ಟೀ.
ವಿಶೇಷಾಂಶ-೨೯ಕಾಲು ಅಂಗುಲವೆಂದು ಇಟ್ಟುಕೊಂಡರೆ ಉರಸ್ಸಿನ ಐದುಪಟ್ಟು ದೇಹವಿರುತ್ತದೆ
ಎಂಬ ಪ್ರಮಾಣದಂತೆ ೯೮ಮುಕ್ಕಾಲು ಆಗುತ್ತದೆ. ೯೬ ಆಗುವುದಿಲ್ಲ. ಎದೆಯ ವಿಸ್ತಾರ ೧೯
ಎಂದು ಒಪ್ಪಿದರೆ ೧೯೫೫-೯೫ ಅಂಗುಲ. ೯೬ ಅಂಗುಲವಾಗುವುದಿಲ್ಲ. ಆದರೂ ಶರೀರವು
ದಶತಾಲವೆಂದಿರುವ ಆಚಾರ್ಯರು ೯೫ಅಂಗುಲಗಳನ್ನೂ ಒಪ್ಪಿರುತ್ತಾರೆ. ಒಂದು ತಾಲವೆಂದರೆ
೯-೧/೨ ಅಂಗುಲ ೯೫ ಅಂಗುಲಗಳೇ ಆಗುತ್ತವೆ.