This page has not been fully proofread.

ಮೇಲ್ಬಾಗದ ಸುತ್ತಳತೆ ಇಪ್ಪತ್ತೆಂಟು ಅಂಗುಲ.
ಗುಹ್ಯಾಂಗದ ದೈರ್ಥ್ಯ ನಾಲ್ಕುವರೆ ಅಂಗುಲ.
ಅದರ ಸುತ್ತಳತೆ ಮೂರುವರೆ ಅಂಗುಲ.
 
ವೃಷಣದ ಉದ್ದ ನಾಲ್ಕು ಅಂಗುಲ, ಸುತ್ತಳತೆ ಏಳಂಗುಲ.
ಇವೆಲ್ಲವೂ ವೃತ್ತಾಕಾರವಾಗಿರಬೇಕು.
 
ಮೊಣಕಾಲಿನ ಮಧ್ಯದ ಸುತ್ತಳತೆ ಹದಿಮೂರು ಅಂಗುಲ 'ಮಧ್ಯಂ
ತ್ರಯೋದಶಾಂಗುಲಪರಿಣಾಹಃ' ವ.ಟೀ.
 
'
 
ಮೊಣಕಾಲಿನ ಮೇಲ್ಬಾಗ ಹದಿನೇಳು - ಊರ್ಧ್ವ೦ ಜಂಘಾವಸಾನಮ್.
 
ತೊಡೆಯ ಮಧ್ಯಭಾಗದ ಸುತ್ತಳತೆ ಇಪ್ಪತ್ತನಾಲ್ಕು ಅಂಗುಲ. ಮೂಲವೆಂದರೆ
ತೊಡೆಯ ಮೂಲ ಎಂದರೆ ತೊಡೆಯ ಮೇಲ್ಬಾಗದ ಸುತ್ತಳತೆಯು ಹಿಂದಿನ
ಸಂಖ್ಯೆಯಾದ ಇಪ್ಪತ್ತನಾಲ್ಕು ಅಂಗುಲಕ್ಕೆ ನಾಲ್ಕನ್ನು ಸೇರಿಸಿದರೆ ಇಪ್ಪತ್ತೆಂಟು
ಅಂಗುಲವಾಗುತ್ತದೆ - ಚತುರಂಗುಲಾಧಿಕಮ್, ಪೂರ್ವೋಕ್ತಸಂಖ್ಯಾಯಾ ಇತಿ ಶೇಷಃ
(ವ.ಟೀ.)
 
81
 
ಲಿಂಗದ ಉದ್ದ ನಾಲ್ಕುವರೆ ಅಂಗುಲ; ಲಿಂಗದ ಸುತ್ತಳತೆ ಮೂರುವರೆ.
 
ವೃಷಣವೆಂದರೆ ಅಂಡಕೋಶ; ಅದು ನಾಲ್ಕಂಗುಲವಿರಬೇಕು. ಸುತ್ತಳತೆ ಏಳು
ಅಂಗುಲ. ವೃಷಣಶಖೇನ ಅಂಡಕೋಶೋ ವಿವಕ್ಷಿತಃ । ತಚ್ಚತುರಂಗುಲದೀರ್ಘ
(ವ.ಟೀ.)
 
ಕಟಪರಿಮಾಣ
 
ಅಷ್ಟಂಶಾಂಗುಲಂ ಕಟ್ಯಾ: ಪರೀಣಾಹ ಉದಾಹೃತಃ ।
ಸುವೃತ್ತತ್ವಂ ತಥಾ ಪ್ರೋಣೋಃ ಪೀನತ್ವಂ ಚ ಸಮಸ್ತಶಃ ॥14॥
ವಿಸ್ತಾರಶ್ಚ ತಥಾ ಕಟ್ಯಾ: ಸುಪ್ರತಿಷ್ಠಿತತಾ ಪದೋ ।
 
-
 
ಅರ್ಥ
 
ಸೊಂಟದ ಸುತ್ತಳತೆ 38 ಅಂಗುಲಗಳು, ನಿತಂಬಗಳು ದುಂಡಾಗಿ
ರಬೇಕು. ಇತರ ಎಲ್ಲಾ ಅವಯವಗಳೂ ಸುಪುಷ್ಟವಾಗಿದ್ದು ಸುಂದರವಾಗಿರಬೇಕು.
ಕಟಿಯು ವಿಸ್ತಾರವಾಗಿರಬೇಕು. ಪಾದಗಳು ಪೀಠದ ಮೇಲೆ ಚೆನ್ನಾಗಿ ಸಮತಲ-
ವಾಗಿರಬೇಕು.