This page has been fully proofread once and needs a second look.

ತೃತೀಯೋsಧ್ಯಾಯಃ
 
79
 
ಪಾದೋನೋಚ್ಚಾಂಗುಷ್ಠನಖಾಂ ತದರ್ಧತದನಂತರಾಮ್ ॥8

ಕ್ರಮಶಃ ಪಾದಹೀನಾನ್ಯಾಂ ರಕ್ತಪಾದನಖಾಂ ಶುಭಾಮ್ ।
 

 
ವ.ಟೀ. - ಷಡಂಗುಲೋಚ್ಚಃ । ಮಧ್ಯಭಾಗಃ । ಸಾರ್ಧಚತುರಂಗು- ಲಮ್ ।

 
ಟೀಕಾರ್ಥ - ಕಾಲಿನ ಬುಡದಿಂದ ಗಂಟಿನ ಎತ್ತರ 6 ಅಂಗುಲ.
ಗಂಟಿನಿಂದ ಕಾಲಿನ
ತುದಿಯವರೆಗೂ ನಾಲ್ಕುವರೆ ಅಂಗುಲ- ವೆಂದರ್ಥ.
 

 
ವ.ಟೀ. - ತಂತ್ರ್ಯಂಗುಲದೀರ್ಘಂಗುಷ್ಠಮ್ । ತದರ್ಧ೦ ತದ- ನಂತರಮ್ ಅಂಗುಲಂ
ಯಸ್ಯಾ ಸಾ ಅಂಗುಲಾರ್ಧಹೀನಂ ಮಧ್ಯಾಂಗುಲಂ ಯಸ್ಯಾ ಸಾ ಅರ್ಧಹೀನ-
ಮಧ್ಯಾಂಗುಲಾ ಸಾರ್ಧದ್ವಯಾಂಗುಲೇತ್ಯರ್ಥ:
 

 
ಟೀಕಾರ್ಥ - ಹೆಬ್ಬೆರಳಿನಿಂದಾರಂಭಿಸಿ ಮೊದಲೆರಡು ಬೆರಳುಗಳ ಉದ್ದ ಮೂರಂಗುಲ.
ಇವೆರಡಕ್ಕಿಂತ ನಂತರದ ಬೆರಳು ಎಂದರೆ ಕಾಲಿನ ಮಧ್ಯದ ಬೆರಳು. ಅದು ಮೊದಲಿನ
ಎರಡು ಬೆರಳುಗಳಿ- ಗಿಂತ ಅರ್ಧ ಅಂಗುಲ ಕಡಿಮೆ, ಎಂದರೆ ಎರಡುವರೆ ಅಂಗುಲ

(ಸಾರ್ಧದ್ವಯಾಂಗುಲೇತ್ಯರ್ಥ).
 

 
ನಾಲ್ಕನೆಯ ಬೆರಳಿನ ಉದ್ದ ಮುಕ್ಕಾಲು ಅಂಗುಲ ಕಡಿಮೆಯಾದ ಮೂರಂಗುಲ.
ಎಂದರೆ ಎರಡುಕಾಲು ಅಂಗುಲ (ತ್ರಿಪಾದಹೀನ ಮಂಗುಲತ್ರಯಮ್; ಸಪಾದಾಂಗುಲ
ದ್ವಯಾಮಿತಿ ಯಾವತ್).
 

[^1]
 
ಬೆರಳುಗಳಲ್ಲಿ ಮೊದಲ ಎರಡು ಬೆರಳ ಉದ್ದ ಸಮಾನವಾಗಿರ- ಬೇಕು. ಕಾಲಿನ ನಾಲ್ಕನೆಯ
ಬೆರಳು ಹಿಂದಿನ ಬೆರಳಿಗಿಂತ ಮುಕ್ಕಾಲು ಅಂಗುಲ ಕಡಿಮೆ ಇರಬೇಕು.
 

 
[^]
1. ವಿಶೇಷಾಂಶ - ವಸುಧೇಂದ್ರರ ಪ್ರಕಾರ ನಾಲ್ಕನೆಯ ಹಾಗೂ ಐದನೆಯ ಬೆರಳುಗಳ ಉದ್ದವು
ಹಿಂದೆ ಹೇಳಿದ ಮೂರಂಗುಲದಲ್ಲಿ ಕಾಲುಭಾಗ ಕಡಿಮೆಯಾದ ಎಂದರೆ ಎರಡಂಗುಲ
ಉದ್ದವಿರುತ್ತದೆ ಎಂದು. (ಪೂರ್ವಸಂಖ್ಯಾಯಾಃ ಪಾದಯ್ಯನ್ಯೂನಾ ತದನಂತರಾಂ, ಅಂಗುಲ-
ದ್ವಯದೀರ್ಘಾಮಿತಿ ಭಾವಃ)
 

ಹೆಬ್ಬೆರಳಿನ ಉಗುರು ಕಾಲುಭಾಗಕಮ್ಮಿ ಒಂದಂಗುಲ ಉದ್ದ. ಅಂದರೆ ಮುಕ್ಕಾಲು ಅಂಗುಲ.
ತದನಂತರದ ಬೆರಳಿನ ಉಗುರು ಅದರ ಅರ್ಧದಷ್ಟು. ತದರ್ಧಂ ತದನಂತರಂ ನಖಾಂತರಂ

ಯಸ್ಯಾ ಸಾ ತದರ್ಧತದನಂತರಾ ತಾಮ್.
 

ಹೆಬ್ಬೆರಳಿನ ಉಗುರು ಮುಕ್ಕಾಲು ಅಂಗುಲ. ಅದರ ಅರ್ಧದಷ್ಟು ನಂತರದ ಬೆರಳಿನ ಉಗುರು.
ಮುಂದಿನ ಎಲ್ಲಾ ಬೆರಳುಗಳ ಉಗುರುಗಳು ಹಿಂದಿನವುಗಳಿಗಿಂತ ಕಾಲು ಭಾಗ ಕಡಿಮೆ. ಅಂದರೆ

ಮೊದಲ ಬೆರಳು ಮುಕ್ಕಾಲು. ಎರಡನೆ ಬೆರಳಿನ ಉಗುರು ಎಂಟನೇ ಮೂರುಭಾಗ(೩/೮).